ಸೋಮವಾರ, ಜನವರಿ 20, 2020
27 °C

‘ಹೊಸ ಬ್ಯಾಂಕ್‌ಗೆ ಶೀಘ್ರ ಪರವಾನಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಮಾಜಿ ಗವರ್ನರ್‌ ಭೀಮಲ್‌ ಜಲನ್‌ ಅಧ್ಯಕ್ಷತೆಯಲ್ಲಿನ ತಜ್ಞರ ಸಮಿತಿ, ಹೊಸ  ಬ್ಯಾಂಕ್ ಸ್ಥಾಪನೆಗೆ ಪರವಾನಗಿ ಕೋರಿ ಬಂದಿರುವ ಅರ್ಜಿಗಳನ್ನು ಪರಿಶೀಲಿ­ಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ.

‘ಹೊಸ ಬ್ಯಾಂಕ್‌ ಸ್ಥಾಪನೆಗೆ ಪರವಾ­ನಗಿ ಕೋರಿ 25 ಅರ್ಜಿಗಳು ಬಂದಿವೆ. ಇನ್ನು ಮೂರು ತಿಂಗಳ ಒಳಗಾಗಿ ಅಂತಿಮ ಪಟ್ಟಿ ಪ್ರಕಟಿಸಲಿದ್ದೇವೆ. 2014ರ ಮಾರ್ಚ್‌ ಒಳಗಾಗಿ ಹೊಸ ಬ್ಯಾಂಕ್‌­ಗಳಿಗೆ ಪರವಾನಗಿ ಲಭಿಸಲಿದೆ’ ಎಂದು ಬಿಮಲ್‌ ಜಲನ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಆರ್‌ಬಿಐ’ನ ಮಾಜಿ ಡೆಪ್ಯುಟಿ ಗವರ್ನರ್‌ ಉಷಾ ಥೋರಟ್‌, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷ ಸಿ.ಬಿ ಬಾವೆ, ‘ಆರ್‌ಬಿಐ’ನ ಕೇಂದ್ರ ನಿರ್ದೇಶಕ ಮಂಡಳಿ ನಿರ್ದೇಶಕ  ನಚಿಕೇತ್‌ ಎಂ ಸಹ ಈ ತಜ್ಞರ ಮಂಡಳಿ­ಯಲ್ಲಿದ್ದಾರೆ.ಹೊಸ ಬ್ಯಾಂಕ್‌ ಸ್ಥಾಪನೆಗೆ ಪರವಾನಗಿ ಕೋರಿ 26 ಅರ್ಜಿಗಳು ಬಂದಿದ್ದವು. ಇದರಲ್ಲಿ ಟಾಟಾ ಸನ್ಸ್‌ ಅರ್ಜಿ ವಾಪಸ್‌ ಪಡೆದಿದೆ ಎಂದು ಅವರು ಹೇಳಿದರು.

ಕಳೆದ 20 ವರ್ಷಗಳಲ್ಲಿ 12 ಬ್ಯಾಂಕ್‌ ಸ್ಥಾಪನೆಗೆ ‘ಆರ್‌ಬಿಐ’ ಪರವಾ­ನಗಿ ನಿಡಿದೆ.

ಪ್ರತಿಕ್ರಿಯಿಸಿ (+)