ನವದೆಹಲಿ (ಪಿಟಿಐ): ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ, ₹ 2ಲಕ್ಷ ಹಾಗೂ ಅದಕ್ಕೂ ಹೆಚ್ಚಿನ ಮೊತ್ತದ ಸರಕು ಅಥವಾ ಸೇವೆಗಳನ್ನು ಪಡೆಯಲು ಇನ್ಮುಂದೆ ಇ–ಟೆಂಡರ್ ಕರೆಯುವುದನ್ನು ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.

ಮುಂಬರುವ ಏಪ್ರಿಲ್ 1ರಿಂದ ಜಾರಿಗೊಳ್ಳಲಿರುವ ಈ ನಿಯಮವು, ಎಲ್ಲ ಕೇಂದ್ರೀಯ ಸಚಿವಾಲಯಗಳು ಹಾಗೂ ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಗಳಿಗೆ ಅನ್ವಯವಾಗಲಿದೆ.

ಸದ್ಯ ಐದು ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಖರೀದಿಗೆ ಇ–ಟೆಂಡರ್ ಕರೆಯುವುದು ಕಡ್ಡಾಯ. ಸರ್ಕಾರವು ಸರಕು, ಸೇವೆಗಳು ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸವನ್ನು ಪಡೆದುಕೊಳ್ಳುತ್ತದೆ.

ಈ ಮೊದಲು 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಇ–ಟೆಂಡರ್ ನಡೆಸುವುದು ಕಡ್ಡಾಯವಾಗಿತ್ತು. ವೆಚ್ಚ ಇಲಾಖೆಯು ಈ ಮಿತಿಯನ್ನು 5 ಲಕ್ಷ ರೂಪಾಯಿಗೆ ಇಳಿಸಿತ್ತು. 2015ರ ಏಪ್ರಿಲ್ 1ರಿಂದ ಅದು ಜಾರಿಯಲ್ಲಿದೆ.

ಆದರೆ, ಇದೀಗ, ಐದು ಲಕ್ಷ ರೂಪಾಯಿಯಿಂದ ₹ 2 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ಖರೀದಿ/ಸೇವೆಗಳನ್ನು ಬಳಸಲು ಇ–ಟೆಂಡರ್ ಕಡ್ಡಾಯಗೊಳಿಸಿದೆ.

ಹೊಸ ನಿಯಮದನ್ವಯ ಕೇಂದ್ರದ ಎಲ್ಲ ಸಚಿವಾಲಯಗಳು, ಇಲಾಖೆಗಳು ಹಾಗೂ ಕೇಂದ್ರೀಯ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಹಾಗೂ ಸ್ವಾಯತ್ತ/ಶಾಸನ ಸಂಸ್ಥೆಗಳು ಕಡ್ಡಾಯವಾಗಿ ಸೆಂಟ್ರಲ್ ಪ್ರೊಕ್ಯುರ್ಮೆಂಟ್ ಪೊರ್ಟಲ್ನಲ್ಲಿ ತಮ್ಮ ಟೆಂಡರ್ಗಳನ್ನು ಪ್ರಕಟಿಸಬೇಕು.

2014–15ರಲ್ಲಿ ₹2.12 ಲಕ್ಷ ಕೋಟಿ ಮೊತ್ತದ 3.81 ಲಕ್ಷ ಇ–ಟೆಂಡರ್ಗಳನ್ನು ಕರೆಯಲಾಗಿತ್ತು. 2015–16ರ ಸಾಲಿನಲ್ಲಿ ಈವರೆಗೂ ₹3.49 ಲಕ್ಷ ಕೋಟಿ ಮೊತ್ತ 4,71,826 ಇ–ಟೆಂಡರ್ಗಳನ್ನು ಕರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.