ಮುಜಾಫ್ಫರ್ನಗರ (ಪಿಟಿಐ): ಮುಜಾಫ್ಫರ್ ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮುಸೌಹಾರ್ದ ಕದಡುವಂತೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಎಸ್ಪಿ ಸಂಸದ ಖಾದಿರ್ ರಾಣಾ, ಇಬ್ಬರು ಶಾಸಕರು, ಉತ್ತರ ಪ್ರದೇಶ ಕಾಂಗ್ರೆಸ್ನ ಮಾಜಿ ಸಚಿವ ಸಯೀದ್ ಉಜ್ಜಮಾ ಸೇರಿದಂತೆ ಒಟ್ಟು 10 ಮಂದಿ ಮುಸ್ಲಿಂ ಮುಖಂಡರ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ಆರೋಪಪಟ್ಟಿ ಸಲ್ಲಿಸಿದೆ.

ಖಾಲಾಪರ್ ಪ್ರದೇಶದಲ್ಲಿ ಕಳೆದ ವರ್ಷದ ಆಗಸ್ಟ್ 30ರಂದು ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ನ್ಯಾಯಾಧೀಶ ನರೇಂದ್ರ ಕುಮಾರ್ ಅವರಿಗೆ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿತು.

ಛಾತ್ರಾವಾಲ್ನ ಬಿಎಸ್ಪಿ ಶಾಸಕ ನೂರ್ ಸಲೇಂ ರಾಣಾ, ಮಿರ್ನಾಪುರದ ಶಾಸಕ ಮೌಲಾನಾ ಜಮೀಲ್, ಕಾಂಗ್ರೆಸ್ ಮುಖಂಡ ಸಯೀದ್ ಉಜ್ಜಮಾ ಮತ್ತು ಅವರ ಮಗ ಸಲ್ಮಾನ್ ಸಯೀದ್, ನಗರ ಮಂಡಳಿ ಸದಸ್ಯ ಅಸಾದ್ ಜಮಾ ಅನ್ಸಾರಿ, ಮಾಜಿ ಸದಸ್ಯ ನೌಷಾದ್ ಖುರೇಷಿ, ಟ್ರೇಡರ್ ಅಹಸಾನ್ ಖುರೇಷಿ, ಸುಲ್ತಾನ್ ಮಿಷಿರ್ ಮತ್ತು ನೌಷಾದ್ ಅವರ ಹೆಸರೂ ಆರೋಪ ಪಟ್ಟಿಯಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.