ಸೋಮವಾರ, ಮಾರ್ಚ್ 8, 2021
24 °C
ಲಾಗಿನ್

100 ಮೆಗಾಪಿಕ್ಸೆಲ್ ಕ್ಯಾಮೆರಾ!

ಕೆ.ಎಸ್.ಜಿ Updated:

ಅಕ್ಷರ ಗಾತ್ರ : | |

100 ಮೆಗಾಪಿಕ್ಸೆಲ್ ಕ್ಯಾಮೆರಾ!

ಈಗೇನಿದ್ದರೂ `ಮೆಗಾಪಿಕ್ಸೆಲ್' ಎಂಬುದು ಮನೆಮಾತಾಗಿದೆ. ಇಂದಿನ ಡಿಜಿಟಲ್ ಯುಗದ ಕಣ್ಣೇ ಆಗಿರುವ ಕ್ಯಾಮೆರಾಗಳಲ್ಲಂತೂ ಮೆಗಾಪಿಕ್ಸೆಲ್‌ಗಳ ಲೆಕ್ಕಾಚಾರವೇ ಜೋರು. ಒಂದು ಕ್ಯಾಮೆರಾದ ಮೆಗಾಪಿಕ್ಸೆಲ್ ಸಾಮರ್ಥ್ಯ ಅಬ್ಬಾಬ್ಬಾ ಎಂದರೆ ಎಷ್ಟಿರಬಹುದು?10, 15, 20 ಎಂಪಿ...

ಸದ್ಯ 100 ಮೆಗಾಪಿಕ್ಸೆಲ್ ಕ್ಯಾಮೆರಾ ಅಭಿವೃದ್ದಿಪಡಿಸಿರುವುದಾಗಿ ಚೀನಾ ವಿಜ್ಞಾನ ಅಕಾಡೆಮಿಯ `ಆಪ್ಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅಧ್ಯಯನ ಕೇಂದ್ರ'ದ ತಂತ್ರಜ್ಞರು ಹೇಳಿಕೊಂಡಿದ್ದಾರೆ.ಅರೇ ಇಷ್ಟೇನಾ...? ಈಗಾಗಲೇ ಬ್ರಿಟನ್ ತಂತ್ರಜ್ಞರು 570 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸೃಷ್ಟಿಸಿದ್ದಾರೆ. ಅಂತಹದರಲ್ಲಿ ಇದೇನು ಮಹಾ ಎಂದು ಮೂಗು ಮುರಿಯದಿರಿ.100 ಮೆಗಾಪಿಕ್ಸೆಲ್ ಜತೆಗೆ ಇನ್ನೂ ಹಲವು ಹತ್ತು ವಿಶೇಷಣಗಳನ್ನು ತನ್ನೊಳಗಿಟ್ಟುಕೊಂಡಿದೆ ಈ ಚೀನಿ ಕ್ಯಾಮೆರಾ. ಇದು ಅತ್ಯಂತ ಹೆಚ್ಚು ರೆಸಲ್ಯೂಷನ್‌ನಲ್ಲಿ ಚಿತ್ರವನ್ನು ಸೆರೆ ಹಿಡಿಯಬಲ್ಲದು. ವೈಮಾನಿಕ ಸಮೀಕ್ಷಾ ಕಾರ್ಯವನ್ನೂ ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತದೆ. ಇದನ್ನು ಮುಖ್ಯವಾಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬಳಸಬಹುದು ಎನ್ನುತ್ತಾರೆ ಇದನ್ನು ಅಭಿವೃದ್ಧಿಪಡಿಸಿದ ತಂತ್ರಜ್ಞರು.10,240x10,240 ಪಿಕ್ಸೆಲ್‌ಗಳು ಈ ಕ್ಯಾಮೆರಾಕ್ಕಿದೆ. ಇದು ಅತ್ಯಂತ ಚಿಕ್ಕ ಗಾತ್ರದ್ದು, ಅಷ್ಟೇ ಹಗುರವಾದುದು ಎಂಬುದೇ ಇದರ ಮತ್ತೊಂದು ವೈಶಿಷ್ಟ್ಯ. ಅಲ್ಲದೆ (ಮೈನಸ್) -20ರಷ್ಟು ಹೆಪ್ಪುಗಟ್ಟಿಸುವ ಉಷ್ಣಾಂಶದಲ್ಲೂ ಹಾಗೂ 55 ಡಿಗ್ರಿಯಷ್ಟು ಗರಿಷ್ಠ ತಾಪಮಾನದಲ್ಲೂ ಇದು ಅತ್ಯಂತ ಹೆಚ್ಚು ನಿಖರವಾಗಿ ಕಾರ್ಯನಿರ್ವಹಿಸಬಲ್ಲದು. ಇವೆಲ್ಲವೂ ರದ ಹೆಚ್ಚುಗಾರಿಕೆಗಳು.ವೈಮಾನಿಕ ಸಮೀಕ್ಷೆ ಮೂಲಕ ನಗರದ ನಕಾಶೆ ಸಿದ್ಧಪಡಿಸುವಾಗ, ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಮೇಲಿನಿಂದ ಅತಿ ದೂರದ ಚಿತ್ರಗಳನ್ನು ಸ್ಪಷ್ಟವಾಗಿ ತೆಗೆಯುವುದಕ್ಕೆ ಈ 100 ಮೆಗಾಪಿಕ್ಸೆಲ್ ಕ್ಯಾಮೆರಾ ಬಳಸಬಹುದಾಗಿದೆ ಎನ್ನುತ್ತಾರೆ ತಂತ್ರಜ್ಞರು.ಇದರಲ್ಲಿ ಸುಧಾರಿತ ಆಪ್ಟಿಕಲ್ ವ್ಯವಸ್ಥೆ, ಕ್ಯಾಮೆರಾ ನಿಯಂತ್ರಣ ವ್ಯವಸ್ಥೆ ಹಾಗೂ ಅತಿ ಹೆಚ್ಚಿನ ದತ್ತಾಂಶ ಸಂಗ್ರಹ ಸಾಮರ್ಥ್ಯ ಇರುವುದರಿಂದ ಇದನ್ನು `ಇಂಟಲಿಜೆಂಟ್ ಸಾರಿಗೆ ವ್ಯವಸ್ಥೆ'ಯಲ್ಲಿ ಬಳಸಲು ಚೀನಾ ಸರ್ಕಾರ ನಿರ್ಧರಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.