ಬೆಂಗಳೂರು: ಆರೋಗ್ಯ ಕವಚ ಯೋಜನೆಯ `108~ ಅಂಬುಲೆನ್ಸ್ಗಳ ಮೇಲೆ ಇನ್ನು ಮುಂದೆ ಮುಖ್ಯಮಂತ್ರಿ, ಆರೋಗ್ಯ ಸಚಿವರ ಭಾವಚಿತ್ರವನ್ನು ಹಾಕದೆ ಇರಲು ಸರ್ಕಾರದ ತೀರ್ಮಾನಿಸಿದೆ.
ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ರಾಜ್ಯ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಹೀಗಾಗಿ ರಾಜ್ಯದ ಮುಖ್ಯಮಂತ್ರಿ, ಆರೋಗ್ಯ ಸಚಿವರ ಭಾವಚಿತ್ರದ ಜೊತೆಗೆ ಪ್ರಧಾನಮಂತ್ರಿಗಳ ಭಾವಚಿತ್ರವನ್ನೂ ಅಂಬುಲೆನ್ಸ್ಗಳ ಮೇಲೆ ಹಾಕಬೇಕು ಎಂದು ಪ್ರತಿಪಕ್ಷದ ಸದಸ್ಯರು ವಿಧಾನ ಸಭೆಯಲ್ಲಿ ಆಗ್ರಹಿಸಿದ್ದರು. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಕೆಲವೆಡೆ ಮುಖ್ಯಮಂತ್ರಿ, ಆರೋಗ್ಯ ಸಚಿವರ ಭಾವಚಿತ್ರಗಳಿಗೆ ಮಸಿ ಬಳಿದಿದ್ದರು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು `108~ ಅಂಬುಲೆನ್ಸ್ಗಳ ಮೇಲೆ ಯಾರ ಭಾವಚಿತ್ರವನ್ನೂ ಹಾಕುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

`ಕೇಂದ್ರ ಸರ್ಕಾರವೂ ಅನುದಾನ ನೀಡಿರುವುದರಿಂದ ರಾಜ್ಯದ ಮುಖ್ಯಮಂತ್ರಿಗಳ ಭಾವಚಿತ್ರವನ್ನು ಹಾಕುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಭಾವಚಿತ್ರ ತೆಗೆದು ಸರ್ಕಾರದ ಲಾಂಛನವನ್ನು ಮಾತ್ರ ಹಾಕಿ~ ಎಂಬುದಾಗಿ ಸದಾನಂದ ಗೌಡ ಅವರು ಸೂಚಿಸಿರುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಈ ಯೋಜನೆ ಆರಂಭವಾಗಿ ಇದೇ ನವೆಂಬರ್ಗೆ ಮೂರು ವರ್ಷ ತುಂಬಲಿದ್ದು, ಇದುವರೆಗೆ 2.5 ಕೋಟಿ ತುರ್ತು ಕರೆಗಳನ್ನು ಸ್ವೀಕರಿಸಿದೆ. ಯೋಜನೆಗೆ ಇಲ್ಲಿಯವರೆಗೆ 221 ಕೋಟಿ ರೂಪಾಯಿ ವೆಚ್ಚವಾಗಿದೆ. ರಾಜ್ಯದಲ್ಲಿ ಪ್ರಸ್ತುತ 517 ಅಂಬುಲೆನ್ಸ್ಗಳು ಕಾರ್ಯಾಚರಣೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.