ಶನಿವಾರ, ಮೇ 8, 2021
27 °C

12 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ಶುಕ್ರವಾರ 12 ಅಭ್ಯರ್ಥಿಗಳಿಂದ ಒಟ್ಟು 14 ನಾಮಪತ್ರ ಸಲ್ಲಿಕೆಯಾಗಿದೆ.ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಕ್ರಮವಾಗಿ ಸಂಗಣ್ಣ ಕರಡಿ, ಕೆ.ಬಸವರಾಜ ಹಿಟ್ನಾಳ್ ಹಾಗೂ ಪ್ರದೀಪಗೌಡ ಮಾಲಿಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ.ಕುಷ್ಟಗಿ ತಾಲ್ಲೂಕಿನ ಮಿಟ್ಟಲಕೋಡ್ ಗ್ರಾಮದ ಸಂಗಮೇಶ್ ಹಿರೇಮಠ, ಭಾಗ್ಯನಗರದ ವಿಠ್ಠಪ್ಪ ಗೋರಂಟ್ಲಿ, ರಾಜಶೇಖರ ಶರಣಯ್ಯ ಪುರಾಣಿಕಮಠ, ಹಗರಿಬೊಮ್ಮನಹಳ್ಳಿಯ ಮನ್ಸೂರ್ ಬಾಷಾ,  ಮೌನೇಶ್ ಶಂಕರಪ್ಪ, ಗಂಗಾವತಿಯ ಚಕ್ರವರ್ತಿ ನಾಯಕ್, ಬೆಂಗಳೂರಿನ ಟಿ.ದಾಸರಹಳ್ಳಿಯ ಶಂಭುಲಿಂಗೇಗೌಡ, ಹೊಸನಿಂಗಾಪುರದ ರಾಮುಲು ತಂದೆ ವಾಸುದೇವ್ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಕುಷ್ಟಗಿ ತಾಲ್ಲೂಕು ತಳುವಗೇರಾ ಗ್ರಾಮದ ಶರಣಗೌಡ ನೀಲನಗೌಡ ಎಂಬುವವರು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.