ಮಂಗಳವಾರ, ಮೇ 17, 2022
27 °C

180 ದಿನ ಹೆರಿಗೆ ರಜೆ: ಏಪ್ರಿಲ್‌ನಿಂದ ಅನ್ವಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರಿ ಸೇವೆ ಯಲ್ಲಿರುವ ಮಹಿಳೆಯರಿಗೆ ನೀಡುವ ಹೆರಿಗೆ ರಜೆಯನ್ನು 135ರಿಂದ 180 ದಿನಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.



ಅಧಿಕಾರಿಗಳ 6ನೇ ವೇತನ ಸಮಿತಿ ಮಾಡಿದ ಶಿಫಾರಸು ಆಧರಿಸಿ, ಏಪ್ರಿಲ್ ಒಂದರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳ 135(1) ನಿಬಂಧನೆಗಳಿಗೆ ಒಳ ಪಟ್ಟು ಮಹಿಳಾ ನೌಕರರಿಗೆ ನೀಡುವ ರಜೆ ಅವಧಿ ಹೆಚ್ಚಿಸಲಾಗಿದೆ.



ಈ ಸಾಲಿನ ಏಪ್ರಿಲ್ ಒಂದು ಅಥವಾ ಆ ನಂತರ ಹೆರಿಗೆ ರಜೆ ಮೇಲೆ ತೆರಳಿರುವ ನೌಕರರು 180 ದಿನಗಳ ಹೆರಿಗೆ ರಜೆ ಸೌಲಭ್ಯ ಪಡೆಯಲು ಅರ್ಹರು. ಇದಕ್ಕೂ ಮೊದಲೇ ಹೆರಿಗೆ ರಜೆ ಮೇಲೆ ತೆರಳಿ, ಏಪ್ರಿಲ್ ಒಂದರ ನಂತರವೂ ರಜೆ ಮುಂದುವರಿಸಿರುವ ನೌಕರರು ಸಹ 180 ದಿನಗಳ ರಜೆ ಸೌಲಭ್ಯ ಪಡೆಯಲು ಅವಕಾಶವಿದೆ.



ಆದರೆ ಹೆರಿಗೆ ರಜೆಯನ್ನು 135 ದಿನ ಪೂರೈಸಿ, ಏಪ್ರಿಲ್ ಒಂದರಿಂದ ಬೇರೆ ಬಗೆಯ ರಜೆ ಮೇಲೆ ಇರುವ ನೌಕರರು 180 ದಿನಗಳ ರಜೆ ಸೌಲಭ್ಯ ಪಡೆಯಲು ಅರ್ಹರಲ್ಲ. ಕೇಂದ್ರ ಸರ್ಕಾರಿ ಸೇವೆಯಲ್ಲಿರುವ ಮಹಿಳೆ ಯರು ಈಗಾಗಲೇ 180 ದಿನಗಳ ಹೆರಿಗೆ ರಜೆ ಸೌಲಭ್ಯ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.