ರಾಯಚೂರು: ಸುಗಮ ಸಂಚಾರ ಮತ್ತು ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸ್ ಇಲಾಖೆ ನಗರದ ಆಯ್ದೆ 19 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ.

ರಾಜ್ಯದ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಕಮಿಷನರ್ ಅವರ ಆದೇಶಾನುಸಾರ ಏಳು ಜಿಲ್ಲೆಗಳ ಪ್ರಮುಖ ಪಟ್ಟಣಗಳಲ್ಲಿ ಈ ರೀತಿ ಸಿಸಿಟಿವಿ ಕ್ಯಾಮೆರಾಗಳನ್ನು ಆಯಕಟ್ಟಿನ ಜಾಗದಲ್ಲಿ ಅಳವಡಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರವಾದ ರಾಯಚೂರು ನಗರದಲ್ಲಿ ಈ ಕ್ಯಾಮೆರಾ ಅಳವಡಿಕೆ ಕಾರ್ಯ ಮುಕ್ತಾವಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ನಿಯಂತ್ರಣ ಕೇಂದ್ರದಿಂದ ನಿರ್ವಹಿಸಲಾಗುತ್ತಿದೆ.

19 ಸ್ಥಳಗಳಲ್ಲಿ ಒಟ್ಟಾರೆ 38 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇದರಲ್ಲಿ ಒಂದು ಸ್ಟಿಲ್ ಕ್ಯಾಮೆರಾ ಮತ್ತೊಂದು ಪಿಟಿಝೆಡ್ ಕ್ಯಾಮೆರಾ. ಸ್ಟಿಲ್್ ಕ್ಯಾಮೆರಾ ನಿರ್ದಿಷ್ಟ ಸ್ಥಳವನ್ನು ಕೇಂದ್ರೀಕರಿಸಿ ಕೆಲಸ ಮಾಡಿದರೆ, ರೊಟೇಟಿಂಗ್ ಪಿಟಿಝೆಡ್ (ಸುತ್ತುವ) ಕ್ಯಾಮೆರಾವನ್ನು 360 ಡಿಗ್ರಿ ಕೋನದಲ್ಲಿ ಸುತ್ತಲೂ ತಿರುಗಿಸಬಹುದು. ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯವರೆಗೆ ದೃಶ್ಯಗಳನ್ನು ಸೆರೆಹಿಡಿಯಲು ಅನುಕೂಲವಾಗುವಂತೆ ಎತ್ತರದಲ್ಲಿ ಇದನ್ನು ಅಳವಡಿಕೆ ಮಾಡಲಾಗಿದೆ.

‘ಸಿಸಿಟಿವಿ ಕ್ಯಾಮೆರಾಗಳನ್ನು ಸದ್ಯ ಪೊಲೀಸ್ ನಿಯಂತ್ರಣ ಕೇಂದ್ರದಿಂದ ನಿರ್ವಹಣೆ ಮಾಡಲಾಗುತ್ತಿದೆ. ಸ್ಟಿಲ್ ಕ್ಯಾಮೆರಾಗಳನ್ನು ವಾಹನಗಳ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣುವ ಕೋನಕ್ಕೆ ಹೊಂದಿಸಿ ಅಳವಡಿಕೆ ಮಾಡಲಾಗಿದೆ. ರೊಟೇಟಿಂಗ್ ಕ್ಯಾಮೆರಾ ಸ್ವಯಂ ಚಾಲಿತವಾಗಿ ತಿರುಗುವುದಿಲ್ಲ. ಅದನ್ನು ನಿಯಂತ್ರಣ ಕೇಂದ್ರದಲ್ಲಿರುವ ಸಿಬ್ಬಂದಿ ಅಗತ್ಯಕ್ಕೆ ಅನುಗುಣವಾಗಿ ತಿರುಗಿಸಿ ಅನುಮಾನಸ್ಪದ ಅಂಶಗಳನ್ನು ಚೀತ್ರಿಕರಿಸಿಕೊಳ್ಳುತ್ತಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಠೋರ್ ತಿಳಿಸಿದರು.

‘ರಾಜ್ಯ ಏಳು ಜಿಲ್ಲೆಗಳಿಗೆ ಆಯ್ದ ನಗರಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿರುವುದರಿಂದ ಒಟ್ಟಿಗೆ ಟೆಂಡರ್ ಕರೆಯಲಾಗಿದೆ. ಬ್ಲೂ ಸ್ಟಾರ್ ಸಂಸ್ಥೆ ಇದನ್ನು ಅಳವಡಿಸಿದೆ. ಒಂದು ವರ್ಷ ಗ್ಯಾರಂಟಿ ಅವಧಿ ಇದ್ದು, ಇನ್ನೂ ಮೂರು ವರ್ಷದ ಅವಧಿಗೆ ವಾರ್ಷಿಕ ನಿರ್ವಹಣೆ ಕರಾರನ್ನು ಇಲಾಖೆ ಮಾಡಿಕೊಂಡಿದೆ’ ಎಂದರು.

‘ಸಿಸಿಟಿವಿ ಕ್ಯಾಮೆರಾ ನಿರ್ವಹಣೆಯ ಬಗ್ಗೆ 15 ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ. ದಿನದ ಮೂರು ಪಾಳಿಯಲ್ಲಿ ಒಂದು ಪಾಳಿಗೆ ಮೂವರಂತೆ ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ಈ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಿಂದ ಅಪರಾಧ ಪ್ರಕರಣಗಳ ಬಗ್ಗೆ ಸಾಕಷ್ಟು ಸುಳಿವು ದೊರೆಯುತ್ತದೆ. ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡುವ ವಾಹನಗಳು, ವ್ಯಕ್ತಿಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗಿದೆ’ ಎಂದು ರಾಠೋರ್ ಹೇಳಿದರು.

ಎಲ್ಲೆಲ್ಲಿವೆ ಕ್ಯಾಮೆರಾ
ನಗರದ ಗಂಜ್ ವೃತ್ತ, ಜಗಜೀವನರಾಂ ವೃತ್ತ, ಅಂಬೇಡ್ಕರ್ ವೃತ್ತ, ತೀನ್ಕಂದೀಲ್ ವೃತ್ತ, ಸೂಪರ್ ಮಾರ್ಕೆಟ್, ಮಹಾವೀರ್ ವೃತ್ತ, ಚಂದ್ರಮೌಳೀಶ್ವರ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಪಟೇಲ್ ವೃತ್ತ, ಬಸವಬಾವಿ ವೃತ್ತ, ಆರ್ಟಿಒ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ, ಯರಮರಸ್ ಬೈಪಾಸ್ ರಸ್ತೆ, ಎಂ.ಹಿರಣ್ಣ ವೃತ್ತ, ಟಿಪ್ಪು ಸುಲ್ತಾನ್ ಚೌಕ, ಮೈಕ್ರೊ ಟವರ್, ಚಲ್ಲೂರು ಕಾಂಪ್ಲೆಕ್ಸ್ ಮತ್ತು ನವೋದಯ ವಿದ್ಯಾಲಯ ಚಕ್ ಪೋಸ್ಟ್ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.