ಮಂಗಳವಾರ, ಏಪ್ರಿಲ್ 20, 2021
24 °C

2ಜಿ ಹಗರಣ: ತನಿಖೆ ಚುರುಕುಗೊಳಿಸಲು ಸಿವಿಸಿ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಹುಕೋಟಿ 2ಜಿ ಹಗರಣದ ತನಿಖೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ನಿವಾರಿಸಿ, ತನಿಖೆ ಚುರುಕುಗೊಳಿಸಲು ಕೇಂದ್ರ ಜಾಗೃತ ಆಯೋಗ (ಸಿವಿಸಿ) ನಿರ್ಧರಿಸಿದೆ.ಈ ಸಂಬಂಧ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ವರಮಾನ ತೆರಿಗೆ ಇಲಾಖೆಗಳು ನಡೆಸಿದ ತನಿಖೆಯ ಪ್ರಗತಿಯನ್ನು ಸಿವಿಸಿ ಪರಿಶೀಲಿಸಿದೆ. ತನಿಖೆಯ ಸಂದರ್ಭದಲ್ಲಿ ಈ ಸಂಸ್ಥೆಗಳು ಎದುರಿಸುತ್ತಿರುವ ಅಡಚಣೆಗಳು ಏನು ಎಂಬುದನ್ನು ಅರಿಯಲು ಸಿವಿಸಿ ಈ ಕ್ರಮ ಕೈಗೊಂಡಿದೆ.ಕೇಂದ್ರ ಜಾಗೃತ ಆಯುಕ್ತ ಪ್ರದೀಪ್ ಕುಮಾರ್ ಅವರು ಈ ಮೂರು ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ತನಿಖೆಯ ವಿವರ ಪಡೆದಿದ್ದಾರೆ. ಸಂಬಂಧಿಸಿದ ದಾಖಲೆಗಳನ್ನೂ ಸಹ ಪರಿಶೀಲಿಸಿದ್ದಾರೆ ಎಂದು ಸಿವಿಸಿ ಮೂಲಗಳು ತಿಳಿಸಿವೆ.ದೇಶದೊಳಗೆ ಹಾಗೂ ವಿದೇಶದ ಕೆಲವೆಡೆ ತನಿಖೆ ನಡೆಸಲು ತಮಗೆ ಅಡ್ಡಿಯಾಗಿರುವ ಸಂಗತಿಗಳ ಕುರಿತು ಈ ಅಧಿಕಾರಿಗಳು ಪ್ರದೀಪ್ ಕುಮಾರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.ತನಿಖೆ ಚುರುಕುಗೊಳಿಸುವಂತೆ ಸಿವಿಸಿ ಈ ಸಂಸ್ಥೆಗಳಿಗೆ ಸೂಚಿಸಿದೆ ಎನ್ನಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.