ಶುಕ್ರವಾರ, ಜೂನ್ 25, 2021
26 °C

20 ಲಕ್ಷ ವೆಚ್ಚದಲ್ಲಿ ವೇ ಬ್ರಿಡ್ಜ್: ಮಹದೇವಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ರೈತರು ತರುವ ಕೃಷಿ ಉತ್ಪನ್ನಗಳ ತೂಕದಲ್ಲಿ ನಿಖರತೆ ಕಾಪಾಡಲು ರೂ.20 ಲಕ್ಷ  ವೆಚ್ಚದಲ್ಲಿ ವೇ ಬ್ರಿಡ್ಜ್ ನಿರ್ಮಿಸಲಾಗಿದೆ ಎಂದು ಶಾಸಕ ಎಚ್.ಎಸ್. ಮಹದೇವಪ್ರಸಾದ್ ಸೋಮವಾರ ಹೇಳಿದರು.ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನವಾಗಿ ಅಳವಡಿಸಿರುವ 50 ಟನ್ ಸಾಮರ್ಥ್ಯದ ವೇ ಬ್ರಿಡ್ಜ್ ಉದ್ಘಾಟಿಸಿ ಮಾತನಾಡಿದರು. ಇಡೀ ರಾಜ್ಯದಲ್ಲಿಯೇ ತೆರಕಣಾಂಬಿ ಸಂತೆ ಹೆಸರು ವಾಸಿಯಾಗಿದೆ, ಈ ಸಂತೆಯಲ್ಲಿ ಅನೇಕ ವ್ಯಾಪಾರಿಗಳು ಹಾಗೂ ರೈತರು ಆಗಮಿಸಿ ವ್ಯಾಪಾರ ವಹಿವಾಟು ನಡೆಸುತ್ತಾರೆ. ಈ ಹಿಂದೆ ತೂಕದಲ್ಲಿ ಮೋಸ ಮಾಡಿದ್ದ ವ್ಯಾಪಾರಿಯನ್ನು ರೈತರೇ ಪತ್ತೆ ಹಚ್ಚಿದ್ದರು.

 

ಇದರಿಂದಾಗಿ ರೈತರಲ್ಲಿ ಗೊಂದಲವುಂಟಾಗಿತ್ತು, ಇದನ್ನು ನಿವಾರಿಸಿ ಪಾರದರ್ಶಕತೆ ಕಾಪಾಡುವ ಸಲುವಾಗಿ ಈ ತೂಗು ಸೇತುವೆಯನ್ನು ಅಳವಡಿಸಲಾಗಿದೆ ಎಂದರು. ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪಿ. ಚಂದ್ರಪ್ಪ ಮಾತನಾಡಿದರು. ತೆರಕಣಾಂಬಿ ಕ್ಷೇತ್ರದ ಜಿ.ಪಂ.ಸದಸ್ಯರಾದ ಪಿ. ಮಹಾದೇವಪ್ಪ,  ಸದಸ್ಯ ಡಿ.ಸಿ. ನಾಗೇಂದ್ರ, ಹಂಗಳ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಅಂಬಿಕಾ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಗೋಪಾಲ್, ನಿರ್ದೇಶಕರುಗಳಾದ ಮಹೇಶ್, ರಾಜೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೋಮಲ, ಸದಸ್ಯೆ ಪ್ರೇಮ, ಗಾಯಿತ್ರಿ ಮುಂತಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.