ಕನಕಪುರ: ತಾಲ್ಲೂಕಿನ ಮರಳವಾಡಿ ಹೋಬಳಿಯಾದ್ಯಂತ ಸತತ ಐದು ದಿನ ಗಳ ಕಾರ್ಯಾಚರಣೆ ನಡೆಸುವ ಮೂಲಕ ಸುಮಾರು 200ಕ್ಕೂ ಹೆಚ್ಚು ಮರಳು ಫಿಲ್ಟರ್ ತೊಟ್ಟಿಗಳನ್ನು ನಾಶ ಪಡಿಸಲಾಗಿದೆ.

ರಾಜ್ಯ ಸರ್ಕಾರವು ಅಕ್ರಮ ಮರಳು ಫಿಲ್ಟರ್ ದಂದೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ನೀಡಿರುವ ನಿರ್ದೇ ಶನದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿ ಧೆಡೆ ತಹಶೀಲ್ದಾರ್ ಡಾ.ದಾಕ್ಷಾ ಯಿಣಿ ಅವರ ನೇತೃತ್ವದಲ್ಲಿ ಈ ಕಾರ್ಯಾ ಚರಣೆ ನಡೆಸಲಾಗಿದೆ.
ಗ್ರಾಮ ಲೆಕ್ಕಿಗರಾದ ಬಿ.ರವಿಕು ಮಾರ್, ಮನೋಹರ್, ಕೆ.ಪಿ.ನಾಗ ರಾಜು, ಮಂಜುನಾಥ್, ಸಿದ್ದೇಗೌಡ, ಬಸವಣ್ಣ, ಕೆ.ಪ್ರಕಾಶ್, ಶಿವರುದ್ರ, ಎಸ್.ಪ್ರಕಾಶ್, ಶಿವರಾಜು ಸೇರಿದಂತೆ ಗ್ರಾಮ ಸಹಾಯಕರು ಕಾರ್ಯ ಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂ ಡಿದ್ದ ರಾಜಸ್ವ–ನಿರೀಕ್ಷಕ ಜಗದೀಶ್ ಈ ಕುರಿತು ವಿವರ ನೀಡಿದ್ದು, ‘ಈ ಹಿಂದೆ ಇದೇ ರೀತಿ ದಾಳಿ ನಡೆಸಿ ಎಲ್ಲಾ ತೊಟ್ಟಿಗಳನ್ನು ನಾಶ ಮಾಡಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಕಾನೂನಿನ ಸಡಿ ಲತೆಯಿಂದ, ಸುಲಭವಾಗಿ ಹಣ ಮಾಡುವುದನ್ನು ಕಂಡಿರುವ ಯುವ ಸಮೂಹವೇ ಹೆಚ್ಚಾಗಿ ಈ ದಂದೆ ಯನ್ನು ಕದ್ದುಮುಚ್ಚಿ ನಡೆಸುತ್ತಿದೆ’ ಎಂದರು.

‘ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಅವರು ಇತ್ತೀಚೆಗೆ ನಾಲ್ಕು ತಾಲ್ಲೂ ಕುಗಳ ಅಧಿಕಾರಿಗಳನ್ನೂ ಕರೆದು ಅಕ್ರಮ ಮರಳು ಗಾರಿಕೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳು ವಂತೆ ಅಪರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಮಾರ್ಗದರ್ಶನ ದಲ್ಲಿ ತಂಡಗಳನ್ನು ರಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಮಂಗಳವಾ ರದಿಂದ (ಡಿ.10) ಹೋಬಳಿಯಾದ್ಯಂತ ವಿವಿ ಧೆಡೆ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದು ಅವರು ತಿಳಿಸಿದರು.

‘ತಂಡವು ನಾಲ್ಕು ಜೆ.ಸಿ.ಬಿ.ಗಳನ್ನು ಬಾಡಿಗೆಗೆ ಪಡೆದು ಎಲ್ಲೆಲ್ಲಿ ಮರಳು ತೊಟ್ಟಿಗಳನ್ನು ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಗ್ರಾಮ ಲೆಕ್ಕಿಗ ರೊಂದಿಗೆ ತೆರಳಿ ಅಂತಹ ತೊಟ್ಟಿಗಳನ್ನು ಸಂಪೂರ್ಣ ನಾಶ ಪಡಿಸಿದೆ, ಬಹಳಷ್ಟು ಕಡೆ ದಾಳಿ ವಿಚಾರ ತಿಳಿಯುತ್ತಿದ್ದಂತೆ ಅಕ್ರಮದಾರರು ಸಾಮಾನು ಸರಂಜಾ ಮುಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ’ ಎಂದರು.

ಮರಳು ಮಾಫಿಯಾ: ‘ಸರ್ಕಾರವು ಮರಳು ಫಿಲ್ಟರ್ ನಡೆಸ ದಂತೆ ಹದ್ದಿನ ಕಣ್ಣಿಣ್ಣು ಕಾಯುತ್ತಿದ್ದರೂ ಮರಳವಾಡಿ ಹೋಬಳಿಯ ಬನವಾಸಿ, ಅರೆಗಡಕಲು, ತಟ್ಟೆಕೆರೆ, ಯಲಚವಾಡಿ, ಮರಳವಾಡಿ ಮುಂತಾದ ಗ್ರಾಮಗಳಲ್ಲಿ ಇದು ಹದ್ದುಮೀರಿದೆ’ ಎಂಬುದು ಜಗದೀಶ್ ಅವರ ಅಭಿಪ್ರಾಯ.

‘ಫಿಲ್ಟರ್ ಮರಳು ಮಾಡುವುದನ್ನೇ ದೊಡ್ಡ ಕಾಯಕ ಮಾಡಿಕೊಂಡಿರುವ ಯುವ ಸಮೂಹ ಈ ದಂದೆಯ ಬೆನ್ನ ಹಿಂದೆ ನಿಂತಿರುವುದರಿಂದ ಪ್ರತಿ ಗ್ರಾಮಗಳಲ್ಲೂ ನೂರಾರು ಮರಳು ತಯಾರಿಕಾ ತೊಟ್ಟಿಗಳು ತಲೆ ಎತ್ತಿ ಮರಳು–ಮಾಫಿಯಾವೇ ಸೃಷ್ಟಿಯಾಗಿದೆ’ ಎನ್ನುತ್ತಾರೆ ಅವರು.

‘ಸುಲಭವಾಗಿ ಹಣ ಮಾಡುವ ಆಸೆ ಯಲ್ಲಿ ಈ ಭಾಗದ ಜನತೆ ಮರಳು ಗಾರಿಕೆಗಾಗಿ ಫಸಲು ಕೊಡುತ್ತಿದ್ದ ತೆಂಗಿನ ತೋಟಗಳನ್ನೇ ನಾಶ ಮಾಡಿ ರುವ ಸಾಕಷ್ಟು ಉದಾಹರಣೆಗಳಿವೆ. ಫಲವ ತ್ತಾದ ಕೃಷಿಭೂಮಿಯ ಒಡಲನ್ನು ಕನಿಷ್ಠ ನೂರು ಅಡಿಗಳ ಆಳಕ್ಕೆ ಬಗೆಯಲಾಗಿದ್ದು ಭವಿಷ್ಯದಲ್ಲಿ ಕೃಷಿ ಚಟುವಟಿಕೆಗೆ ಅವಕಾಶವೇ ಸಿಗದಷ್ಟು ವಿಕಾರಗೊಳಿ ಸಲಾಗಿದೆ. ಇದು ದುರಾಸೆಗಾಗಿ ಚಿನ್ನದ ಮೊಟ್ಟೆ ಯನ್ನಿಡುವ ಕೋಳಿಯನ್ನೇ ಬಲಿತೆಗೆದು ಕೊಂಡ ನೀತಿ ಕಥೆಯಂ ತೆಯಾಗಿದೆ’ ಎಂದು ವಿಷಾದಿಸುತ್ತಾರೆ.

‘ತಾಲ್ಲೂಕಿನ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಜನತೆ ತಮ್ಮ ಕೃಷಿ ಭೂಮಿಯನ್ನೇ ಬಗೆದು ಅದರಿಂದ ಮರಳು ತಯಾರಿಕೆಗೆ ಮುಂದಾಗಿ ದ್ದಾರೆ. ಈ ಪ್ರದೇಶವನ್ನು ನೋಡಿದರೆ ಬಳ್ಳಾರಿಯ ಗಣಿಗಾರಿಕೆಯ ನೆನಪಾಗುತ್ತದೆ’ ಎನ್ನುತ್ತಾರೆ ಜಗದೀಶ್.

ಗ್ರಾಮಸ್ಥರ ಅಳಲು: ‘ಮರಳುಗಾರಿಕೆ ಯನ್ನು ವಿರೋಧಿಸಿ ಕೃಷಿ ಮಾಡು ವವರು ತಲೆ ಮೇಲೆ ಕೈಹೊತ್ತು ಕೂರು ವಂತಾಗಿದೆ. ನದಿ ಪಾತ್ರದಲ್ಲಿ ಬರು ವಂತಹ ಎಲ್ಲಾ ಭೂಮಿಯನ್ನು 100ಕ್ಕೂ ಹೆಚ್ಚು ಅಡಿ ಆಳ ಬಗೆದು ಮಣ್ಣು ತೆಗೆದಿರುವುದರಿಂದ ಅಂತರ್ಜಲ ಸಂಪೂರ್ಣ ಕುಸಿದು ಹೋಗಿದೆ. ನದಿ ಪಾತ್ರದಲ್ಲಿ ಮಣ್ಣು ಖಾಲಿಯಾಗು ತ್ತಿದ್ದಂತೆ ದೂರದ ಕೃಷಿ ಭೂಮಿಯನ್ನು ಖರೀದಿಸಿ ಅದರಲ್ಲೂ ಮಣ್ಣು ಸಿಗುವಷ್ಟು ಆಳಕ್ಕೆ ಗುಂಡಿ ತೆಗೆಯುತ್ತಿರು ವುದರಿಂದ ಅಕ್ಕಪಕ್ಕದ ಜಮೀನಿನ ಬೆಳೆಗಳು ನಾಶವಾಗುತ್ತಿವೆ. ಇದನ್ನು ವಿರೋಧಿಸಿದರೆ ಮರಳು ಮಾಫಿಯಾ ನಡೆಸುವವರು ದೊಡ್ಡ ಗುಂಪು ಕಟ್ಟಿಕೊಂಡು ಬಂದು ನಮ್ಮ ಮೇಲೆ ಹಲ್ಲೆಗೆ ಮುಂದಾಗುತ್ತಾರೆ, ನಾವೇನೂ ನಿಮ್ಮ ಭೂಮಿಯಲ್ಲಿ ಮಾಡುತ್ತಿಲ್ಲ, ನಮ್ಮ ಭೂಮಿಯಲ್ಲಿ ಇದನ್ನು ನಡೆಸುತ್ತಿಲ್ಲ. ನಮ್ಮ ಜಮೀನುಗಳಲ್ಲಿ ಮಾಡುತ್ತಿದ್ದೇವೆ. ಇದನ್ನು ಕೇಳಲು ನೀವ್ಯಾರು ಎಂದು ಪ್ರಶ್ನಿಸುತ್ತಾರೆ, ಈ ಬಗ್ಗೆ ನಾವೇನಾದರೂ ಪೋಲಿಸರಿಗೆ ದೂರು ಕೊಡಲು ಹೋದರೆ ನಮಗಿಂತ ಮುಂಚೆಯೇ ಅವರು ಠಾಣೆಯಲ್ಲಿ ಹಾಜರಾಗುತ್ತಾರೆ. ಸುಳ್ಳು ದೂರುಗಳ ಮೇಲೆ ನಮ್ಮನ್ನೇ ಶಿಕ್ಷಿಸಲು ಪೊಲೀಸರು ಮುಂದಾಗುತ್ತಾರೆ. ಹೀಗಾದರೆ ಇನ್ನೆಲ್ಲಿ ನ್ಯಾಯ ಕೇಳುವುದು’ ಎಂಬುದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರ ಪ್ರಶ್ನೆ.

ಶಾಶ್ವತ ತಡೆಗೆ ಒತ್ತಾಯ:
ಈ ಕೂಡಲೆ ತಾಲ್ಲೂಕಿನಾದ್ಯಂತ ಅಕ್ರಮ ಮರಳು ಫಿಲ್ಟರ್ ದಂಧೆಗೆ ಶಾಶ್ವತವಾಗಿ ಕಡಿವಾಣ ವಿಧಿಸಬೇಕು, ಇಲ್ಲದಿದ್ದರೆ ಮುಂದೆ ವ್ಯವಸಾಯ ಮಾಡ ಬೇಕೆಂದರೂ ಇಲ್ಲಿ ಕೃಷಿ ಭೂಮಿಯೇ ಇಲ್ಲದಂತಾಗುತ್ತದೆ, ಸುಲಭವಾಗಿ ಹಣದ ರುಚಿ ಕಂಡಿರುವ ಯುವ ಸಮೂಹವನ್ನು ಸರಿದಾರಿಗೆ ತರಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ-

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.