ಸೋಮವಾರ, ಮೇ 25, 2020
27 °C

22ರಿಂದ ಡಿಎಸ್‌ಎಸ್ ಅನಿರ್ದಿಷ್ಟ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು:  ಅತ್ಯಂತ ಅಪಾಯಕಾರಿ ರಾಸಾ ಯನಿಕ ಸಿಎಚ್ ಪೌಡರ್ ಬಳಸಿ ಹೆಂಡವನ್ನು ತಯಾ ರಿಸಿ ಮಾರಾಟ ಮಾಡುತ್ತಿರುವ ತಾಲ್ಲೂಕಿನ ಕಡಂಗ ದೊಡ್ಡಿ ಗ್ರಾಮದ ಬಲರಾಮ ಮತ್ತು ಜಂಬನಗೌಡ ಎಂಬುವವರನ್ನು ಗಡಿಪಾರು ಮಾಡ ಬೇಕು ಎಂದು ಒತ್ತಾಯಿಸಿ ಇದೇ 22ರಂದು ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಅನಿರ್ದಿಷ್ಟ ಧರಣಿ ನಡೆಸ ಲಾಗು ತ್ತಿದೆ ಎಂದು ದಲಿತ ಸಂಘರ್ಷ ಸಮಿತಿ (ಎನ್‌ಮೂರ್ತಿ ಬಣ) ಜಿಲ್ಲಾಧ್ಯಕ್ಷ ರಾಮಾಂಜನೇಯಲು ಎಂದು ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಹೋದರರು ನಡೆಸುತ್ತಿರುವ ಹೆಂಡ ತಯಾರಿಕೆಯಂಥ ಅಕ್ರಮ ಚಟುವಟಿಕೆ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಯಲ್ಲಿ ಅನೇಕ ಮೊಕದ್ದಮೆ ದಾಖಲಾಗಿವೆ. ಗಡಿಪಾರಿಗೂ ಶಿಫಾರಸ್ಸು ಮಾಡಲಾಗಿದೆ. ಆದಾಗ್ಯೂ ನಿರಂತರವಾಗಿ ಇವರ ಅಕ್ರಮ ವ್ಯವಹಾರ ಮುಂದುವರಿದಿದೆ ಎಂದು ಆರೋಪಿಸಿದರು.2009ರಲ್ಲಿಯೇ ಡಿಎಸ್ಪಿ ಟಿ.ಶ್ರೀಧರ ಅವರು ಸಹಾಯಕ ಆಯುಕ್ತರಿಗೆ ಪತ್ರ ಬರೆದು, ಜಂಬನಗೌಡ ಮತ್ತು ಬಲರಾಮ ಅವರನ್ನು ಗಡಿಪಾರು ಮಾಡಲು ಕೋರಿದ್ದರು. ಒಂದು ವರ್ಷ ಕಳೆದಿದ್ದರೂ ಸಹಾಯಕ ಆಯುಕ್ತರು ಈ ದಿಶೆಯಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆಪಾದಿಸಿದರು.ಸಿ.ಎಚ್ ಪೌಡರ್‌ನಿಂದ ತಯಾರಿಸಿದ ಹೆಂಡ ಕುಡಿದ ಕೂಲಿ ಕಾರ್ಮಿಕರು ಹಾಗೂ ಬಡ ಕುಟುಂಬಗಳು ಬೀದಿಪಾಲಾಗಿವೆ. ಕೂಡಲೇ ಜಿಲ್ಲಾಧಿ ಕಾರಿಗಳು ಇಂಥ ಆರೋಪಿಗಳನ್ನು ಗಡಿಪಾರು ಮಾಡ ಬೇಕು, ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಭಾರಿ ಮಟ್ಟದಲ್ಲಿ ಹೆಂಡ ತಯಾರಿಸಿ ಅಕ್ರಮ ಚಟುವಟಿಕೆ ಮಾಡುತ್ತಿರುವ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಇನ್ನುಳಿದವರಿಗೂ ಇದು ಎಚ್ಚರಿಕೆ ಆಗುತ್ತದೆ. ಕೂಡಲೇ ಕ್ರಮ ಕೈಗೊಳ್ಳಬೇಕು. ಗಡಿಪಾರು ಮಾಡುವವರೆಗೂ ಅನಿರ್ದಿಷ್ಟ ಧರಣಿ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.ಬಸವರಾಜ ತಳವಾರ, ಗೋವಿಂದರಾಜು ಹೊಸೂರು, ರಂಗಪ್ಪ ಶಕ್ತಿನಗರ, ಕೆ.ರವಿಕುಮಾರ, ಡಿ.ಕೃಷ್ಣಮೂರ್ತಿ, ಚಂದ್ರಶೇಖರ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.