ಚಿತ್ರದುರ್ಗ: ತಾಲ್ಲೂಕಿನಲ್ಲಿ ಜುಲೈ 23ರಿಂದ 30ರವರೆಗೆ ಜೀತಗಾರಿಕೆ ಮರುಸಮೀಕ್ಷೆ ಕಾರ್ಯ ನಡೆಯಲಿದೆ.
ಜೀತಗಾರಿಕೆ ಪದ್ಧತಿ ಮರುಸಮೀಕ್ಷೆ ನಡೆಸುವ ಬಗ್ಗೆ ಸರ್ಕಾರದ ಅಧಿಸೂಚನೆಯಂತೆ ಹಾಗೂ ಜಿಲ್ಲಾಧಿಕಾರಿ ಆದೇಶದಂತೆ ತಾಲ್ಲೂಕು ಮಟ್ಟದ ಅಧಿಕಾರಿ ಮತ್ತು ಎನ್ಜಿಒಗಳ ಸಭೆ ನಡೆಸಿ ಹೋಬಳಿವಾರು ತಂಡ ರಚಿಸಿ, ಮರುಸಮೀಕ್ಷೆ ಕಾರ್ಯದ ಬಗ್ಗೆ ತರಬೇತಿ ನೀಡಲಾಗಿರುತ್ತದೆ. ಜುಲೈ 23 ರಿಂದ 30ರವರೆಗೆ ಚಿತ್ರದುರ್ಗ ತಾಲ್ಲೂಕಿನಲ್ಲಿ ಜೀತಗಾರಿಕೆ ಮರುಸಮೀಕ್ಷೆ ಕಾರ್ಯ ನಡೆಯುವ ಕಾರಣ ಸಾರ್ವಜನಿಕರು ಸಹಕರಿಸಲು ತಹಶೀಲ್ದಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ನಾಳೆ ಈಶ್ವರಪ್ಪ ಭೇಟಿ
ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಜುಲೈ 22ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 10ಕ್ಕೆ ಚಿತ್ರದುರ್ಗಕ್ಕೆ ಆಗಮಿಸುವರು. ನಂತರ ಜಿಲ್ಲಾ ಪಂಚಾಯ್ತಿ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ಬರ ನಿರ್ವಹಣೆ ಕಾರ್ಯಕ್ರಮ ಕುರಿತು ಸಭೆಯಲ್ಲಿ ಚರ್ಚಿಸುವರು.

ಅಂದು ಮಧ್ಯಾಹ್ನ 11-45ಕ್ಕೆ ಐಮಂಗಲ ಗ್ರಾಮದಲ್ಲಿನ ನೀರು ಸರಬರಾಜು ಯೋಜನೆ ಕಾಮಗಾರಿಗಳು ಮತ್ತು ಎನ್ಆರ್ಇಜಿಎ ಕಾಮಗಾರಿಗಳ ಪರಿಶೀಲನೆ ನಡೆಸುವರು. ನಂತರ ಕಳ್ಳಿಹಟ್ಟಿ ಗ್ರಾಮದಲ್ಲಿ ನೀರು ಸರಬರಾಜು ಯೋಜನೆ ಕಾಮಗಾರಿಗಳು ಮತ್ತು ಎನ್ಆರ್ಇಜಿಎ ಕಾಮಗಾರಿಗಳನ್ನು ಪರಿಶೀಲಿಸುವರು.

ಅಲ್ಲಿಂದ ಹಿರಿಯೂರು ಪಟ್ಟಣದ ಎಪಿಎಂಸಿ ಆವರಣದ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ನಂತರ ಉಪಮುಖ್ಯಮಂತ್ರಿಗಳು ಮಧ್ಯಾಹ್ನ 2-15 ಗಂಟೆಗೆ ಹಿರಿಯೂರಿನಿಂದ ತುಮಕೂರು ಜಿಲ್ಲೆಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.