ಮಂಗಳವಾರ, ಮೇ 11, 2021
25 °C

25ರಿಂದ ರಾಷ್ಟ್ರೀಯ ನೃತ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ನೃತ್ಯ ದಿನದ (ಏ. 29) ಹಿನ್ನೆಲೆಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇದೇ 25ರಿಂದ 27ರವರೆಗೆ `ರಂಗತರಂಗ~ ಹೆಸರಿನ ರಾಷ್ಟ್ರೀಯ ನೃತ್ಯೋತ್ಸವ ಆಯೋಜಿಸಿದೆ.   ಅಕಾಡೆಮಿ ಆಫ್ ಮ್ಯೂಸಿಕ್‌ನ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಖ್ಯಾತಿಯ ಸುಮಾರು 150 ಕಲಾವಿದರು ಪಾಲ್ಗೊಳ್ಳಲಿದ್ದಾರೆ.`ರಾಜ್ಯದ ಕಲಾವಿದರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅವಕಾಶ ಕಲ್ಪಿಸುವುದು ಹಾಗೂ ಪಾಶ್ಚಾತ್ಯ ನೃತ್ಯ ಪ್ರಕಾರಗಳತ್ತ ಮುಖ ಮಾಡುತ್ತಿರುವ ನಮ್ಮ ಯುವ ಸಮೂಹಕ್ಕೆ ಭಾರತೀಯ ನೃತ್ಯ ಪ್ರಕಾರಗಳ ವೀಕ್ಷಣೆಯ ಅಭಿರುಚಿ ಬೆಳೆಸುವುದು ಈ ಉತ್ಸವದ ಉದ್ದೇಶ~ ಎಂದು ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ ಅವರು ಇಲ್ಲಿನ `ಕನ್ನಡ ಭವನ~ದಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಒಡಿಸ್ಸಿ, ಮಣಿಪುರಿ, ಕೂಚಿಪುಡಿ, ಭರತನಾಟ್ಯ, ಕಥಕ್ ಮತ್ತಿತರ ನೃತ್ಯ ಪ್ರಕಾರಗಳ ಬಗ್ಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.15ರವರೆಗೆ ಖ್ಯಾತ ಕಲಾವಿದರಿಂದ ಕಾರ್ಯಾಗಾರ ನಡೆಸಲಾಗುವುದು. ಹಾಗೆಯೇ, ಸಂಜೆ 6.30ರಿಂದ ರಾತ್ರಿ 9.30ರವರೆಗೆ ನೃತ್ಯ ಕಲಾವಿದರಿಂದ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಾಗಾರ ಮತ್ತು ನೃತ್ಯೋತ್ಸವ ವೀಕ್ಷಿಸಲು ಪ್ರವೇಶ ಶುಲ್ಕ ಇಲ್ಲ ಎಂದು  ಹೇಳಿದರು.ನೃತ್ಯೋತ್ಸವ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಗಮಕ ಉತ್ಸವ ಮತ್ತು ಯುವಜನರ ಉತ್ಸವವನ್ನೂ ಆಯೋಜಿಸಲಾಗುವುದು. ದೇಶದ ಇತರ ರಾಜ್ಯಗಳ ಅಕಾಡೆ ಮಿಗಳ ಜೊತೆ ಒಪ್ಪಂದ ಮಾಡಿಕೊಂಡು, ನಮ್ಮ ರಾಜ್ಯದ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುವಂತೆ ಮಾಡಲಾಗುವುದು. ಇದೇ ಉತ್ಸವವನ್ನು ಮುಂದೆ ರಾಜ್ಯದ ಇತರ ಪ್ರದೇಶಗಳಲ್ಲೂ ಆಯೋಜಿಸಲಾಗುವುದೆಂದು ಅವರು ನುಡಿದರು.ಕಾರ್ಯಕ್ರಮ ಹೀಗಿರುತ್ತದೆ: ನೃತ್ಯೋತ್ಸವದ ಆರಂಭದ ದಿನವಾದ 25ರಂದು ಅರುಣಾಮೊಹಾಂತಿ (ಒಡಿಸ್ಸಿ), ಮಾಯಾ ರಾವ್ (ಕಥಕ್), ರೇಖಾ ಅಶೋಕ ಹೆಗಡೆ (ಭರತನಾಟ್ಯ) ಮತ್ತಿತರ ಕಲಾವಿದರು ಪ್ರದರ್ನ ನೀಡಲಿದ್ದಾರೆ.26ರಂದು ಪಿ. ರಾಮಲಿಂಗ ಶಾಸ್ತ್ರಿ (ಕೂಚಿಪುಡಿ), ಶ್ಯಾಮಲಾ ಸುರೇಂದ್ರನ್ (ಮೊಹಿನಿಯಾಟ್ಟಂ), ಪ್ರಬಲ್ ಗುಪ್ತ (ಕಥಕ್ಕಳಿ ಮತ್ತು ಯಕ್ಷಗಾನ) ಪ್ರದರ್ಶನ ನೀಡಲಿದ್ದಾರೆ.ಕೊನೆಯ ದಿನವಾದ 27ರಂದು ಪ್ರೀತಿ ಪಟೇಲ್ (ಮಣಿಪುರಿ), ರಾಧಾ ಶ್ರೀಧರ್ (ಭರತನಾಟ್ಯ), ಜಯಚಂದ್ರನ್ (ಅಟ್ಟಕಲರಿ) ಅವರ ಪ್ರದರ್ಶನ ಇದೆ.ಅಕಾಡೆಮಿಯ ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.