2,790 ಕೆ.ಜಿ ಚಿನ್ನಸಂಗ್ರಹ

ನವದೆಹಲಿ (ಪಿಟಿಐ): ಎರಡನೇ ಹಂತದ ಚಿನ್ನದ ಬಾಂಡ್ ಯೋಜನೆಯಲ್ಲಿ ₹726 ಕೋಟಿ ಮೌಲ್ಯದ 2,790 ಕೆ.ಜಿ ಚಿನ್ನ ಸಂಗ್ರಹವಾಗಿದೆ. ಮೊದಲ ಹಂತಕ್ಕೆ ಹೋಲಿಸಿದರೆ ಇದು ಮೂರು ಪಟ್ಟು ಹೆಚ್ಚಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಬಾಂಡ್ ಖರೀದಿಗೆ ಅರ್ಜಿ ಸಲ್ಲಿಸಲು ಜನವರಿ 18ರಿಂದ 22ರವರೆಗೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ 3.16 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಫೆಬ್ರುವರಿ 8ರಂದು ಬಾಂಡ್ ವಿತರಣೆ ಮಾಡಲಾಗುತ್ತದೆ. ಕಳೆದ ನವೆಂಬರ್ನಲ್ಲಿ ಜಾರಿಗೊಳಿಸಿದ ಮೊದಲ ಹಂತದ ಯೋಜನೆಯಲ್ಲಿ 62,169 ಅರ್ಜಿಗಳು ಸಲ್ಲಿಕೆಯಾಗಿದ್ದು, ₹246 ಕೋಟಿ ಮೌಲ್ಯದ 915.95 ಕೆ.ಜಿ ಚಿನ್ನದ ಬಾಂಡ್ ಮಾರಾಟವಾಗಿತ್ತು.
ಮನೆ, ದೇವಸ್ಥಾನ, ಟ್ರಸ್ಟ್ಗಳಲ್ಲಿ ಬಳಕೆಯಾಗದೆ ನಿಷ್ಕ್ರಿಯವಾಗಿರುವ ಚಿನ್ನದ ಸಂಗ್ರಹವನ್ನು ಚಲಾವಣೆಗೆ ತರಲು ಈ ಯೋಜನೆ ಅವಕಾಶ ಒದಗಿಸಿದೆ. ₹ 52 ಲಕ್ಷ ಕೋಟಿ ಮೌಲ್ಯದ 20 ಸಾವಿರ ಟನ್ ಚಿನ್ನವನ್ನು ಮತ್ತೆ ಚಲಾವಣೆಗೆ ತರಲು ಚಿನ್ನದ ನಗದೀ ಕರಣ ಯೋಜನೆ ರೂಪಿಸ ಲಾಗಿದೆ. ನವೆಂಬರ್ನಲ್ಲಿ ಮೊದಲ ಹಂತದ ಯೋಜನೆಗೆ ಚಾಲನೆ ನೀಡಲಾಗಿತ್ತು.
*
ಯೋಜನೆಯ ವಿವರ
*5,10, 50, 100 ಗ್ರಾಂ ಮುಖಬೆಲೆಯ ಬಾಂಡ್ಗಳು
*ಬಾಂಡ್ ಅವಧಿ: 5 ರಿಂದ 7 ವರ್ಷಗಳು
* ಒಬ್ಬ ವ್ಯಕ್ತಿಗೆ ವರ್ಷಕ್ಕೆ 500 ಗ್ರಾಂ ಮಿತಿ
*ಸಾರ್ವಜನಿಕ ನೀಡಿಕೆ ಬೆಲೆ: ಪ್ರತಿ ಗ್ರಾಂಗೆ ₹ 2,600
* ವಾರ್ಷಿಕ ಬಡ್ಡಿ: ಶೇ 2.75
*ಉದ್ದೇಶ: ಭೌತಿಕ ಸ್ವರೂಪದಲ್ಲಿ ಚಿನ್ನ ಸಂಗ್ರಹಿಸುವುದಕ್ಕೆ ಕಡಿವಾಣ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.