ಬುಧವಾರ, ಜನವರಿ 29, 2020
28 °C
‘ಕಾವೇರಿ’ ನಿರ್ವಹಣಾ ಕಾರ್ಯ

28, 29ರಂದು ನೀರು ಪೂರೈಕೆ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾವೇರಿ ಮೊದಲನೇ ಹಾಗೂ ಎರಡನೇ ಹಂತದ ಯೋಜನೆಗಳ ವಿತ­ರಣಾ ಮಾರ್ಗಗಳಲ್ಲಿ ಸೋರಿಕೆ ನಿಯಂತ್ರಿಸಲು ವಾಲ್ವ್  ಬದಲಾವ­ಣೆಯ  ಕಾಮಗಾರಿಗಳ ಹಿನ್ನೆಲೆಯಲ್ಲಿ ಇದೇ 28 ಹಾಗೂ 29ರಂದು ನಗರದ ಕೆಲವು ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಟಿ.ಕೆ ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಗಳಲ್ಲಿ 28ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಮೊದಲನೇ ಹಾಗೂ ಎರಡನೇ ಹಂತದ ಯೋಜನೆಗಳ ನೀರು ಪಂಪಿಂಗ್‌ ಸ್ಥಗಿತಗೊಳಿಸಲಾ­ಗುವುದು. ಇದ­ರಿಂದಾಗಿ ಕುಮಾರಸ್ವಾಮಿ ಲೇಔಟ್, ಬನಶಂಕರಿ, ಜಯನಗರ,  ಬಸವನಗುಡಿ, ಚಾಮರಾಜಪೇಟೆ, ಪದ್ಮನಾಭನಗರ, ಬೈರಸಂದ್ರ, ಜಾನ್ಸನ್ ಮಾರ್ಕೆಟ್,  ಬಾಪೂಜಿ­ಗರ, ಮೈಸೂರು ರಸ್ತೆ,  ಶಾಂತಿನಗರ, ಕೋರ­ಮಂಗಲ, ವಿಜಯನಗರ, ಚೋಳರಪಾಳ್ಯ, ಚಿಕ್ಕಲಾಲ್‌ಬಾಗ್ ಸೇರಿದಂತೆ   ನಗರದ ಕೆಲ ಭಾಗಗಳಲ್ಲಿ  ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಶನಿವಾರ ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)