ಮಂಗಳವಾರ, ಜನವರಿ 28, 2020
24 °C

29ಕ್ಕೆ ರಾಜ್ಯಮಟ್ಟದ ಭಾವಾರ್ಣವ ಗಾಯನೋತ್ಸವ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ರಾಜ್ಯಮಟ್ಟದ `ಭಾವಾರ್ಣವ~ ಗಾಯನೋತ್ಸವ ಕಾರ್ಯಕ್ರಮವನ್ನು ಜನವರಿ 29 ರಂದು ಚಾಮರಾಜಪೇಟೆಯಲ್ಲಿರುವ ಭಾರತೀಯ ಸಂಸ್ಕೃತಿ ವಿದ್ಯಾಪೀಠದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ವಿಜಯ ಹಾವನೂರ ತಿಳಿಸಿದರು.ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ವಿಶ್ವವಿದ್ಯಾಲದ ಕುಲಪತಿ ಡಾ. ಹನುಮಣ್ಣ ನಾಯಕ ದೊರೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಡಾ.ಕೆ.ಎನ್.ಪುಷ್ಪಲತಾ  ಅವರು ಭಾಗವಹಿಸಲಿದ್ದಾರೆ.ಸಮಾರಂಭದಲ್ಲಿ ಶಿಶುಗೀತೆಗಳು, ದಾಸರವಾಣಿ, ಜನಪದ ಮತ್ತು ಭಾವಗೀತೆಗಳನ್ನು ಗಾಯಕರು ಹಾಡಲಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ವೀರೇಶ ಬಳ್ಳಾರಿ, ಆನಂದ ಮಾದಲಗೆರೆ ಹಾಗೂ ಟಿ.ರಾಜಾರಾಮ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)