ಸೋಮವಾರ, ಮೇ 10, 2021
22 °C

34 ಕಂಪೆನಿಗಳಿಗೆ ರಾಮದೇವ್ ಸಹಚರ ಮುಖ್ಯಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಯೋಗಗುರು ರಾಮದೇವ್ ನಿರ್ದೇಶಕರೆಂದು ಹೇಳುವ ಯಾವ ಕಂಪೆನಿಯೂ ನೋಂದಣಿ ಆಗಿಲ್ಲ. ಆದರೆ ಅವರ ಆಪ್ತ ಸಹಚರ ಬಾಲಕೃಷ್ಣ 34 ಕಂಪೆನಿಗಳ ಮುಖ್ಯಸ್ಥರಾಗಿದ್ದು ಈ ಕಂಪೆನಿಗಳು ಒಟ್ಟು ರೂ 265 ಕೋಟಿ ವಹಿವಾಟು ನಡೆಸುತ್ತಿವೆ ಎಂದು ಸರ್ಕಾರ ಗುರುವಾರ ಹೇಳಿದೆ.`ರಾಮದೇವ್ ನಿರ್ದೇಶಕರಾಗಿರುವ  ಯಾವ ಕಂಪೆನಿಯೂ ರಾಷ್ಟ್ರದಲ್ಲಿ ನೋಂದಣಿಯಾಗಿಲ್ಲ. ಆದರೆ ರಾಮದೇವ್ ಅವರ ಸಹಚರ ಬಾಲಕೃಷ್ಣ ನಿರ್ದೇಶಕರಾಗಿರುವ 34 ಕಂಪೆನಿಗಳು  ನೋಂದಣಿಯಾಗಿವೆ~ ಎಂದು ಕಂಪೆನಿ ವ್ಯವಹಾರಗಳ ರಾಜ್ಯ ಖಾತೆ ಸಚಿವ ಆರ್.ಪಿ.ಎನ್. ಸಿಂಗ್ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.ರಾಮದೇವ್ ಮತ್ತು ಬಾಲಕೃಷ್ಣ ಅವರು ಹೊಂದಿರುವ ಕಂಪೆನಿಗಳ ಸಂಖ್ಯೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಅಲ್ಪ ಅವಧಿಯಲ್ಲಿ ಈ ಕಂಪೆನಿಗಳು ಹೆಚ್ಚಿನ ವಹಿವಾಟು ಗಳಿಸಿರುವುದಕ್ಕೆ ಕಾರಣವನ್ನು ಈ ಹಂತದಲ್ಲಿ ಗುರುತಿಸಲು ಸಾಧ್ಯವಿಲ್ಲ~ ಎಂದೂ ಅವರು ಹೇಳಿದ್ದಾರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.