ಶನಿವಾರ, ಮೇ 21, 2022
27 °C

39 ಹೆಂಡಿರ ಮುದ್ದಿನ ಗಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಕ್ವಾಂಗ್ (ಮಿಜೊರಾಮ್): ಆತನಿಗೆ ವಯಸ್ಸು 67 ತುಂಬಿದ್ದರೂ ದೇಹದಲ್ಲಿ ಇನ್ನೂ ಪುಟಿಯುವ ತಾರುಣ್ಯ. ಅವನ ಪತ್ನಿಯರ ಸಂಖ್ಯೆ 39. ಮಕ್ಕಳು, ಮೊಮ್ಮಕ್ಕಳ ಸಂಖ್ಯೆ 120ಕ್ಕೂ ಹೆಚ್ಚು. ಎಲ್ಲರೂ ಒಟ್ಟಿಗೆ ಒಂದೇ ಸೂರಿನಡಿ ವಾಸ ಮಾಡುತ್ತಿದ್ದಾರೆ !ಇದು ಮಿಜೋರಾಂನ ಭಕ್ವಾಂಗ್ ಎಂಬ ಹಳ್ಳಿಯಲ್ಲಿರುವ ಜಿಯೊಂಘಾಕಾ ಚನ್ನಾ ಎಂಬ ವ್ಯಕ್ತಿಯ ಕಥೆ. ಈತನಿಗೆ ತನ್ನ ಕುಟುಂಬವನ್ನು ಇನ್ನೂ ಹಿಗ್ಗಿಸುವಾಸೆಯಂತೆ. ಈತ ಕ್ರೈಸ್ತ ಸಮುದಾಯಕ್ಕೆ ಸೇರಿದ್ದರೂ ಸ್ಥಳೀಯ ಬುಡಕಟ್ಟು ಸಂಪ್ರದಾಯಗಳ ಚನ್ನಾ ಎಂಬ ಪಂಥಕ್ಕೆ ಸೇರಿದವನು. ಈ ಪಂಥವನ್ನು ಚಲಿಂಚಾನ ಎಂಬ ಈತನ ಪೂರ್ವಜ 1930ರ ಸುಮಾರಿನಲ್ಲಿ ಹುಟ್ಟು ಹಾಕಿದ್ದಾನೆ. ಇದು ಈಗ ನಾಲ್ಕನೆ ತಲೆಮಾರಿಗೆ ಮುಂದುವರಿದುಕೊಂಡು ಬಂದಿದ್ದು 1,700ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.ಈ ಪಂಥೀಯರು ಮರಗಳ ಮೇಲೆ ಕೆತ್ತನೆ ಮಾಡುವ ಕೌಶಲ್ಯಕ್ಕೆ ಪ್ರಸಿದ್ಧಿಯಾಗಿದ್ದಾರೆ. ಈ ಪಂಥದಲ್ಲಿ ಒಬ್ಬ ವ್ಯಕ್ತಿ ಒಬ್ಬರಿಗಿಂತ ಹೆಚ್ಚಿನ ಪತ್ನಿಯರನ್ನು ಮದುವೆಯಾಗಲು ಅವಕಾಶವಿದೆ. ಮಿಜೊರಾಂ ಭಾರತದಲ್ಲೇ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ ರಾಜ್ಯ. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ ಇಲ್ಲಿ ಶೇಕಡಾ 88ರಷ್ಟು ಜನರು ಕ್ರೈಸ್ತರು.ಕ್ರೈಸ್ತ ಧರ್ಮದ ಈ ಅನುಯಾಯಿಗಳಲ್ಲೇ ಸುಮಾರು 95ಕ್ಕೂ ಹೆಚ್ಚು ವಿವಿಧ ಪಂಥಗಳ ಆಚರಣೆ ಅಸ್ತಿತ್ವದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.