ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

39 ಹೆಂಡಿರ ಮುದ್ದಿನ ಗಂಡ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಭಕ್ವಾಂಗ್ (ಮಿಜೊರಾಮ್): ಆತನಿಗೆ ವಯಸ್ಸು 67 ತುಂಬಿದ್ದರೂ ದೇಹದಲ್ಲಿ ಇನ್ನೂ ಪುಟಿಯುವ ತಾರುಣ್ಯ. ಅವನ ಪತ್ನಿಯರ ಸಂಖ್ಯೆ 39. ಮಕ್ಕಳು, ಮೊಮ್ಮಕ್ಕಳ ಸಂಖ್ಯೆ 120ಕ್ಕೂ ಹೆಚ್ಚು. ಎಲ್ಲರೂ ಒಟ್ಟಿಗೆ ಒಂದೇ ಸೂರಿನಡಿ ವಾಸ ಮಾಡುತ್ತಿದ್ದಾರೆ !

ಇದು ಮಿಜೋರಾಂನ ಭಕ್ವಾಂಗ್ ಎಂಬ ಹಳ್ಳಿಯಲ್ಲಿರುವ ಜಿಯೊಂಘಾಕಾ ಚನ್ನಾ ಎಂಬ ವ್ಯಕ್ತಿಯ ಕಥೆ. ಈತನಿಗೆ ತನ್ನ ಕುಟುಂಬವನ್ನು ಇನ್ನೂ ಹಿಗ್ಗಿಸುವಾಸೆಯಂತೆ. ಈತ ಕ್ರೈಸ್ತ ಸಮುದಾಯಕ್ಕೆ ಸೇರಿದ್ದರೂ ಸ್ಥಳೀಯ ಬುಡಕಟ್ಟು ಸಂಪ್ರದಾಯಗಳ ಚನ್ನಾ ಎಂಬ ಪಂಥಕ್ಕೆ ಸೇರಿದವನು. ಈ ಪಂಥವನ್ನು ಚಲಿಂಚಾನ ಎಂಬ ಈತನ ಪೂರ್ವಜ 1930ರ ಸುಮಾರಿನಲ್ಲಿ ಹುಟ್ಟು ಹಾಕಿದ್ದಾನೆ. ಇದು ಈಗ ನಾಲ್ಕನೆ ತಲೆಮಾರಿಗೆ ಮುಂದುವರಿದುಕೊಂಡು ಬಂದಿದ್ದು 1,700ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.

ಈ ಪಂಥೀಯರು ಮರಗಳ ಮೇಲೆ ಕೆತ್ತನೆ ಮಾಡುವ ಕೌಶಲ್ಯಕ್ಕೆ ಪ್ರಸಿದ್ಧಿಯಾಗಿದ್ದಾರೆ. ಈ ಪಂಥದಲ್ಲಿ ಒಬ್ಬ ವ್ಯಕ್ತಿ ಒಬ್ಬರಿಗಿಂತ ಹೆಚ್ಚಿನ ಪತ್ನಿಯರನ್ನು ಮದುವೆಯಾಗಲು ಅವಕಾಶವಿದೆ. ಮಿಜೊರಾಂ ಭಾರತದಲ್ಲೇ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ ರಾಜ್ಯ. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ ಇಲ್ಲಿ ಶೇಕಡಾ 88ರಷ್ಟು ಜನರು ಕ್ರೈಸ್ತರು.ಕ್ರೈಸ್ತ ಧರ್ಮದ ಈ ಅನುಯಾಯಿಗಳಲ್ಲೇ ಸುಮಾರು 95ಕ್ಕೂ ಹೆಚ್ಚು ವಿವಿಧ ಪಂಥಗಳ ಆಚರಣೆ ಅಸ್ತಿತ್ವದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT