ಗುರುವಾರ , ಜನವರಿ 30, 2020
18 °C

4ನೇ ದಿನವೂ ಸೂಚ್ಯಂಕ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಮೂರು ದಿನಗಳಿಂದ ಇಳಿಜಾರಿನ ಹಾದಿಯಲ್ಲೇ ಸಾಗುತ್ತಿರುವ ಷೇರುಪೇಟೆ, ನಾಲ್ಕನೇ ದಿನವೂ ಹೂಡಿಕೆ ದಾರರಿಗೆ ನಿರಾಶೆ ಉಂಟು ಮಾಡಿತು. ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ ಶುಕ್ರ ವಾರ 210 ಅಂಶಗಳ ಕುಸಿತ ಕಂಡಿದೆ. ಡಿ. 9ರಿಂದ ಈವರೆಗೆ ಒಟ್ಟು 611 ಅಂಶ ಗಳ ನಷ್ಟ ಅನುಭವಿಸಿದೆ.ದಿನದಂತ್ಯಕ್ಕೆ ಸೂಚ್ಯಂಕ 20,715 ಅಂಶಗಳಿಗೆ ತಗ್ಗಿತು. ಡಿ. 4ರ ನಂತರ ಸೂಚ್ಯಂಕದ ಕನಿಷ್ಠ ಮಟ್ಟ ಇದಾಗಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ದ(ಎನ್‌ಎಸ್‌ಇ) ‘ನಿಫ್ಟಿ’ಯೂ ಶುಕ್ರ ವಾರ 68.65 ಅಂಶಗಳ ಹಾನಿ ಅನುಭ ವಿಸಿ, 6,168.40 ಅಂಶಗಳಲ್ಲಿ ದಿನ ದಂತ್ಯ ಕಂಡಿತು. ಇದು ‘ನಿಫ್ಟಿ’ಯ ವಾರದ ಕನಿಷ್ಠ ಮಟ್ಟವಾಗಿದೆ.

ಪ್ರತಿಕ್ರಿಯಿಸಿ (+)