ಸಿಂಗಪುರ (ಪಿಟಿಐ): ಇಲ್ಲಿನ ಲಿಟ್ಲ್ ಇಂಡಿಯಾದಲ್ಲಿ ನಡೆದ ಗಲಭೆ ಮತ್ತು ಹಿಂಸಾಕೃತ್ಯದಲ್ಲಿ ಪಾಲ್ಗೊಂಡಿದ್ದ ಆಪಾದನೆಗಾಗಿ ಸಿಂಗಪುರ ಸರ್ಕಾರವು 52 ಭಾರತೀಯರನ್ನು ಗಡೀಪಾರು ಮಾಡುವ ಮತ್ತು 28 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ನಿರ್ಧಾರ ಕೈಗೊಂಡಿದೆ.

ಸಿಂಗಪುರದಲ್ಲಿ ಕಾನೂನು ಸುವ್ಯಸ್ಥೆಗೆ ಭಂಗ ಉಂಟು ಮಾಡುವವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಟ್ಟುನಿಟ್ಟಿನ ಸಂದೇಶ ನೀಡುವುದು ಸರ್ಕಾರದ ಉದ್ದೇಶ. ಆದ್ದರಿಂದ ಗಲಭೆ ನಡೆಸಿದ ಭಾರತೀಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಗೃಹ ಸಚಿವ ಟಿವೊ ಛೀ ಹೀನ್ ತಿಳಿಸಿದ್ದಾರೆ.

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಲಿಟ್ಲ್ ಇಂಡಿಯಾ ಪ್ರದೇಶದಲ್ಲಿ ಡಿಸೆಂಬರ್ 8ರಂದು ನಡೆದ ಗಲಭೆಯ ತನಿಖೆಯನ್ನು ಪೊಲೀಸರು ಪೂರ್ತಿಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತದ ಪಾದಚಾರಿಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಹಿಂಸಾಚಾರ ಆರಂಭ ಗೊಂಡಿತ್ತು. ಸುಮಾರು 400 ಮಂದಿ ವಲಸೆ ಕಾರ್ಮಿಕರು ಹಿಂಸಾಚಾರದಲ್ಲಿ ತೊಡಗಿದ್ದರು. ಘಟನೆ ಯಲ್ಲಿ 39 ಪೊಲೀಸರು ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದರು. 16 ಪೊಲೀಸ್ ಕಾರು ಗಳು ಸೇರಿದಂತೆ 25 ವಾಹನಗಳಿಗೆ ಹಾನಿಯಾಗಿತ್ತು.

1969ರಲ್ಲಿ ನಡೆದಿದ್ದ ಜನಾಂಗೀಯ ಹಿಂಸಾ ಚಾರದ ನಂತರ ಸಿಂಗಪುರದಲ್ಲಿ ತೀವ್ರ ಪ್ರಮಾಣದ ಹಿಂಸಾಚಾರ ನಡೆದದ್ದು ಇದೇ ಮೊದಲು.

28 ಭಾರತೀಯರು ಈ ಹಿಂಸಾಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಆರೋಪಿಸ ಲಾಗಿದೆ. ಒಬ್ಬ ಬಾಂಗ್ಲಾದೇಶದ ಪ್ರಜೆ ಹಾಗೂ 52 ಭಾರತೀಯರ ವಿರುದ್ಧ ಹಿಂಸಾಚಾರದಲ್ಲಿ ಭಾಗಿ ಯಾದ ಆರೋಪ ಹೊರಿಸಲಾಗಿದೆ. 200 ಜನರಿಗೆ ಪೊಲೀಸರ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗು ವುದು ಎಂದು ಹೀನ್ ಹೇಳಿದ್ದಾರೆ.

53 ಜನರನ್ನು ಸ್ವದೇಶಕ್ಕೆ ಗಡೀಪಾರು ಮಾಡುವು ದಕ್ಕೂ ಮುನ್ನ ವಿಚಾರಣಾ ಸಮಿತಿಯು ಅವರ ವಿಚಾರಣೆ ನಡೆಸಲಿದೆ ಎಂದೂ ಅವರು ತಿಳಿಸಿದ್ದಾರೆ.

ಸಹಿಸಲು ಸಾಧ್ಯವಿಲ್ಲ
ಸಿಂಗಪುರದ ಕಾನೂನು ಸುವ್ಯವಸ್ಥೆಗೆ ಬೆದರಿಕೆ ಒಡ್ಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸುವುದಕ್ಕಾಗಿ ಈ ಕಠಿಣ ನಿರ್ಧಾರಗಳನ್ನು ನಾವು ಕೈಗೊಂಡಿದ್ದೇವೆ

–ಟಿವೊ ಛೀ ಹೀನ್, ಸಿಂಗಪುರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.