6.2 ಮೆಗಾಹರ್ಟ್ಜ್‌ಗೆ ರೂ 10,972 ಕೋಟಿ- ಟ್ರಾಯ್ ಶಿಫಾರಸು ತರಂಗಾಂತರ ಪರವಾನಗಿ ಶುಲ್ಕ 6 ಪಟ್ಟು.

7

6.2 ಮೆಗಾಹರ್ಟ್ಜ್‌ಗೆ ರೂ 10,972 ಕೋಟಿ- ಟ್ರಾಯ್ ಶಿಫಾರಸು ತರಂಗಾಂತರ ಪರವಾನಗಿ ಶುಲ್ಕ 6 ಪಟ್ಟು.

Published:
Updated:

ನವದೆಹಲಿ (ಪಿಟಿಐ): ತರಂಗಾಂತರ ಪರವಾನಗಿ ಶುಲ್ಕವನ್ನು ಆರು ಪಟ್ಟು ಹೆಚ್ಚಿಸಿ ಶಿಫಾರಸು ಮಾಡಿರುವ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), 6.2 ವೆುಗಾಹರ್ಟ್ಜ್ ತರಂಗಾಂತರ ಬಳಕೆಗೆ ಪರವಾನಗಿ ನೀಡಲು ರೂ 10,972.45 ಕೋಟಿ ದರ ನಿಗದಿ ಮಾಡಿದೆ.  2ಜಿ ತರಂಗಾಂತರ ಹಂಚಿಕೆ ಹಗರಣದಿಂದ ಆಗಿರುವ ನಷ್ಟದ ಪ್ರಮಾಣ ಅಂದಾಜಿಸಲು ಮಹಾಲೇಖಪಾಲರು (ಸಿಎಜಿ) ನಿಗದಿ ಮಾಡಿದ್ದ ದರಕ್ಕೆ ಇದು ಹತ್ತಿರವಾಗಿದೆ.ಇದರಿಂದಾಗಿ 2008ರಲ್ಲಿ 2 ಜಿ ತರಂಗಾಂತರವನ್ನು ನಿಯಮಕ್ಕನುಗುಣವಾಗಿ ಹಂಚಿಕೆ ಮಾಡಿದ್ದರೆ 65,834.7 ಕೋಟಿ ರೂಪಾಯಿ ಆದಾಯ ಬರುವ ಸಾಧ್ಯತೆ ಇತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇದರ ಜತೆಗೆ ಕೆಲವೇ ವೃತ್ತಗಳಿಗೆ ಅನ್ವಯವಾಗುವಂತೆ ಪರವಾನಗಿ ಪಡೆದ ಕಂಪೆನಿಗಳಿಂದ ಇನ್ನಷ್ಟು ಆದಾಯ ಬರುತ್ತಿತ್ತು  ಎಂದೂ ಟ್ರಾಯ್ ಅಭಿಪ್ರಾಯಪಟ್ಟಿದೆ.

2008ರಲ್ಲಿ ನಡೆದ 2 ಜಿ ತರಂಗಾಂತರದ ನಿಯಮಬಾಹಿರ ಹಂಚಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ರೂ 1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು  ಸಿಎಜಿ ವರದಿ ನೀಡಿತ್ತು. ಹೊಸ ಪರವಾನಗಿಗಳು, ಜೋಡಿ ತಂತ್ರಜ್ಞಾನ ಪರವಾನಗಿಗಳು,  6.2 ಮೆಗಾಹರ್ಟ್ಜ್ ದಾಟಿದ ಹೆಚ್ಚುವರಿ ತರಂಗಾಂತರಗಳ ಹಂಚಿಕೆಯಿಂದ ಬಂದ ಆದಾಯ ಎಲ್ಲವನ್ನೂ ಪರಿಗಣಿಸಿ ಸಿಎಜಿ ನಷ್ಟದ ಮೊತ್ತವನ್ನು ಅಂದಾಜಿಸಿತ್ತು.

6.2 ಮೆಗಾಹರ್ಟ್ಜ್ ದಾಟಿದ ಹೆಚ್ಚುವರಿ ತರಂಗಾಂತರಗಳಿಗೆ ಒಂದಾವರ್ತಿ ಪ್ರವೇಶ ಶುಲ್ಕವನ್ನೂ ಪ್ರಾಧಿಕಾರ ಶಿಫಾರಸು ಮಾಡಿದೆ. 6.2 ಮೆಗಾಹರ್ಟ್ಜ್‌ವರೆಗಿನ ತರಂಗಾಂತರಗಳಿಗೆ ಒಂದು ದರ ಹಾಗೂ ಆನಂತರದ ಹೆಚ್ಚುವರಿ ತರಂಗಾಂತರಗಳಿಗೆ ಪ್ರತ್ಯೇಕ ದರಗಳನ್ನು ವಿಧಿಸಲು ಟ್ರಾಯ್ ಸೂಚಿಸಿದೆ.ಪರವಾನಗಿ ಚಾಲ್ತಿಯಲ್ಲಿರುವ ಉಳಿದ ಅವಧಿಯನ್ನು ಪರಿಗಣಿಸಿ 2010ರ ಏ.1ರಿಂದ ಅನ್ವಯವಾಗುವಂತೆ ಈ ದರಗಳನ್ನು ವಿಧಿಸಬೇಕು. ಅಲ್ಲದೇ, ಪರವಾನಗಿ ನವೀಕರಣ ಬಯಸುವ ಕಂಪೆನಿಗಳಿಂದ ಹೊಸ ದರ ಪಡೆಯಬೇಕು ಎಂದು ಪ್ರಾಧಿಕಾರ ಇದೇ ವೇಳೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry