ಯಾದಗಿರಿ: ಭೀಮೆಯ ಒಡಲು ಬರಿದಾಗುತ್ತಿದೆ. ಕೃಷ್ಣೆಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಕಳೆದ ಎರಡು ವರ್ಷಗಳ ಸತತ ಬರಗಾಲದ ಸುಳಿಗೆ ಸಿಲುಕಿರುವ ರೈತರು, ಈ ಬಾರಿಯೂ ಬರದ ಆತಂಕ ಎದುರಿಸುವಂತಾಗಿದೆ.

ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು, ರಾಜ್ಯದಲ್ಲಿಯೇ ಕನಿಷ್ಠ ಪ್ರಮಾಣದ ಮಳೆ ಜಿಲ್ಲೆಯಲ್ಲಿ ದಾಖಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 119 ಮಿ.ಮೀ. ಮಳೆಯ ಕೊರತೆ ಎದುರಾಗಿದೆ. ಇದರಿಂದಾಗಿ ಬಿತ್ತನೆಯ ಪ್ರಮಾಣದ ಮೇಲೂ ಪರಿಣಾಮ ಉಂಟಾಗಿದ್ದು, ಕೃಷಿಕರು ಮಳೆಗಾಗಿ ಕಾದು ಕುಳಿತಿದ್ದಾರೆ. ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬಿತ್ತನೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ವರುಣನ ಕೃಪೆ ಮಾತ್ರ ಸಿಗದಂತಾಗಿದೆ.

68 ಮಿ.ಮೀ. ಮಳೆ: ಜಿಲ್ಲೆಯಾದ್ಯಂತ ಇದುವರೆಗೆ ಕೇವಲ 68 ಮಿ.ಮೀ. ಮಾತ್ರ ಮಳೆಯಾಗಿದೆ. ಜಿಲ್ಲೆಯಲ್ಲಿ ವಾಡಿಕೆಯ ಪ್ರಕಾರ ಜೂನ್ 12 ರವರೆಗೆ ಒಟ್ಟು 187 ಮಿ.ಮೀ. ಮಳೆ ಆಗಬೇಕು. ಆದರೆ ಕೇವಲ 68 ಮಿ.ಮೀ. ಮಳೆ ಸುರಿದಿದ್ದು, 119 ಮಿ.ಮೀ. ಮಳೆಯ ಕೊರತೆ ಇದೆ.

ಅದರಲ್ಲಿಯೂ ಯಾದಗಿರಿ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಜೂನ್ ತಿಂಗಳಲ್ಲಿ ಒಂದೇ ಒಂದು ಮಳೆ ಬಿದ್ದಿಲ್ಲ. ಹೀಗಾಗಿ ಯಾದಗಿರಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಶಹಾಪುರ ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಯ ಪ್ರಕಾರ 126 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 49 ಮಿ.ಮೀ. ಮಳೆ ಸುರಿದಿದೆ. ಸುರಪುರ ತಾಲ್ಲೂಕಿನಲ್ಲಿ 103 ಪೈಕಿ, ಕೇವಲ 22.5 ಮಿ.ಮೀ. ಮಳೆಯಾಗಿದೆ.

ಇನ್ನು ಯಾದಗಿರಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 122 ಮಿ.ಮೀ. ಮಳೆ ಆಗಬೇಕಿತ್ತು. ಆದರೆ ಇದುವರೆಗೆ ಒಂದು ಮಿ.ಮೀ. ಕೂಡ ಮಳೆ ದಾಖಲಾಗಿಲ್ಲ.
ಬಹುತೇಕ ಜೂನ್ ಆರಂಭವಾಗುತ್ತಿದ್ದಂತೆಯೇ ಮಳೆಯ ಆಗಮನ ಆಗುತ್ತಿತ್ತು. ಆದರೆ ಈ ಬಾರಿ ಜೂನ್ ತಿಂಗಳ ಅರ್ಧ ಮುಗಿಯುತ್ತ ಬಂದಿದ್ದರೂ, ನಿರೀಕ್ಷಿತ ಪ್ರಮಾಣದ ಮಳೆ ಸುರಿದಿಲ್ಲ. ರೋಹಿಣಿ, ಮೃಗಶಿರಾ ಮಳೆಗಳ ಸುಳಿವೇ ಇಲ್ಲದಂತಾಗಿದೆ. ಬಿಸಿಲಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು, ಮಳೆಗಾಗಿ ಜನರು ಮಾತ್ರ ಕಾತರಿಸುವಂತಾಗಿದೆ.

ಹೆಸರು ಬಿತ್ತನೆ ಕುಂಠಿತ: ಪ್ರಮುಖವಾಗಿ ಯಾದಗಿರಿ ತಾಲ್ಲೂಕು ಹಾಗೂ ಶಹಾಪುರ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಹೆಸರು ಬಿತ್ತನೆ ಮಾಡಲಾಗುತ್ತದೆ. ಮುಂಗಾರು ಹಂಗಾಮಿನ ಮೊದಲ ಬೆಳೆಯಾಗಿ ಹೆಸರು ಬೆಳೆಯಲಾಗುತ್ತದೆ.

ಕೇವಲ 45 ದಿನಗಳಲ್ಲಿ ಕಟಾವಿಗೆ ಬರುವ ಹೆಸರು, ರೈತರ ಆರ್ಥಿಕ ಚಟುವಟಿಕೆಗಳಿಗೆ ಆಸರೆ ಆಗುತ್ತದೆ. ಹೀಗಾಗಿ ರೋಹಿಣಿ ಮಳೆಯ ಸುರಿಯುತ್ತಿದ್ದಂತೆಯೇ ಜೂನ್ ಮೊದಲ ವಾರದಲ್ಲಿ ಹೆಸರಿನ ಬಿತ್ತನೆ ಮಾಡಲಾಗುತ್ತದೆ. ಮೃಗಶಿರಾ ಮಳೆಯಿಂದ ಹೆಸರು ಹುಲುಸಾಗಿ ಬೆಳೆಯಲು ಅನುಕೂಲವಾಗುತ್ತದೆ. ಆದರೆ ಈ ಬಾರಿ ರೋಹಿಣಿ ಹಾಗೂ ಮೃಗಶಿರಾ ಮಳೆಯೇ ಇಲ್ಲದಿರುವುದರಿಂದ ರೈತರು ಹೆಸರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಮಳೆಯ ಆಗದೇ ಇದ್ದರೆ, ಬಿತ್ತಿನ ಕಾಳು ಒಣಗಿ ಹೋಗುವ ಆತಂಕ ಇರುವುದರಿಂದ ಬಿತ್ತನೆಗೆ ಮುಂದಾಗುತ್ತಿಲ್ಲ.

ನೋಡ್ರಿ ನಮ್ಮಲ್ಲೇ ಮೊದ್ಲ ಹೆಸರ ಬಿತ್ತತೇವಿ. ಈಗ ಹಂಗಾಮ ಸುರು ಆಗೇತಿ. ಈಗ ಬಿತ್ತನಿ ಆದ್ರ, ಏನೋ ಒಂದೀಟ ಕೈಗೆ ರೊಕ್ಕ ಸಿಗತಾವ. ಇನ್ನೊಂದ ವಾರ ಮಳಿ ಕೈ ಕೊಟ್ರ, ಹೆಸರಿನ ಆಸೆ ಬಿಟ್ಟ ಬಿಡೋದ ನೋಡ್ರಿ. ಹ್ವಾದ ಬರೆನೂ ಹಂಗೂ, ಹಿಂಗೂ ಮಾಡಿ ಹೆಸರ ಬಿತ್ತಿದ್ವಿ. ಈ ಬರಿ ಅದೂ ಇಲ್ದಂಗ ಆಗೇತಿ. ಇನ್ನ ಯಾವಾಗ ಮಳಿ ಬರತೈತೋ ನೋಡಬೇಕ್ರಿ ಎನ್ನುತ್ತಾರೆ ನಾಯ್ಕಲ್ನ ರೈತರ ಮಲ್ಲಿಕಾರ್ಜುನ.

ಕೃಷಿ ಇಲಾಖೆಯು ಮುಂಗಾರು ಹಂಗಾಮಿನಲ್ಲಿ ಒಟ್ಟು 2.68 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆಯ ಗುರಿ ಹಾಕಿಕೊಂಡಿದೆ. ಆದರೆ ಜೂನ್ 12 ರವರೆಗೆ ಕೇವಲ 2,965 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ. 1 ರಷ್ಟು ಮಾತ್ರ ಬಿತ್ತನೆ ಆದಂತಾಗಿದೆ.

ಮಳೆ ಇಲ್ಲದೇ ಇರುವುದರಿಂದ ಬಹುತೇಕ ರೈತರು ಬಿತ್ತನೆಗೆ ಮುಂದಾಗದೇ ಇದ್ದರೂ, ಕೊಳವೆಬಾವಿಯ ಸೌಲಭ್ಯ ಹೊಂದಿರುವ ರೈತರು ಸ್ವಲ್ಪ ಪ್ರಮಾಣದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಹೀಗಾಗಿ ಶೇ.1 ರಷ್ಟು ಬಿತ್ತನೆ ಸಾಧ್ಯವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ರಾಜ್ಯದಲ್ಲಿಯೇ ಕಡಿಮೆ: ರಾಜ್ಯದಾದ್ಯಂತ ಎಲ್ಲೆಡೆಯೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಯಾದಗಿರಿ ಜಿಲ್ಲೆಯು ಮಳೆಯ ಪ್ರಮಾಣದಲ್ಲೂ ಕೊನೆಯ ಸ್ಥಾನವನ್ನು ಅಲಂಕರಿಸುವಂತಾಗಿದೆ.

ಇತ್ತೀಚೆಗೆ ಮುಖ್ಯಮಂತ್ರಿಗಳ ಜೊತೆ ನಡೆದ ವಿಡಿಯೋ ಸಂವಾದದಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದೆ. ಕೇವಲ 68 ಮಿ.ಮೀ. ಮಳೆ ಸುರಿದಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ. ಜೊತೆಗೆ ಬಿತ್ತನೆಯೂ ಕಡಿಮೆಯಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿನ ಕೊಳವೆಬಾವಿಗಳ ಅಂತರ್ಜಲ ಕಡಿಮೆ ಆಗುತ್ತಿದ್ದು, ನದಿಗಳ ತೀರದಲ್ಲಿರುವ ಗ್ರಾಮಗಳ ಜನರೂ ನೀರಿಗಾಗಿ ಪರದಾಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.