ತುಮಕೂರು: ತುಮಕೂರು ವಿಶ್ವವಿದ್ಯಾಲಯ ತನ್ನ ಏಳನೇ ಘಟಿಕೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ನೋಂದಣಿಯಾದ ಎಂಟು ತಿಂಗಳಿಗೇ ಪಿಎಚ್.ಡಿ ಪದವಿ ನೀಡಲು ಮುಂದಾಗಿದೆ. ವಿ.ವಿ.ಯಲ್ಲಿ ನಡೆದ ಘಟಿಕೋತ್ಸವ ಸಿದ್ಧತೆ ಕುರಿತ ಸಭೆಯಲ್ಲಿ ವಿವಿಧ ವಿಷಯಗಳಲ್ಲಿ ಕೇವಲ 8 ತಿಂಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿರುವ 6 ಮಂದಿಗೆ ಪಿಎಚ್.ಡಿ ಹಾಗೂ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಡಿ.ಲಿಟ್, ಡಿ.ಎಸ್ಸಿ ಪದವಿ ನೀಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ನಿಕಟಪೂರ್ವ ಕುಲಪತಿ ಡಾ.ಎಸ್.ಸಿ.ಶರ್ಮಾ ಅವಧಿಯಲ್ಲಿ ಈ ಆರು ಮಂದಿಗೂ ಸಂಶೋಧನೆಗೆ ನೋಂದಣಿಯಾದ ಎಂಟು ತಿಂಗಳಿಗೆ ಪದವಿ ನೀಡಲಾಗಿದ್ದು, ತಾತ್ಪೂರ್ತಿಕ ಪದವಿ ಪ್ರಮಾಣ ಪತ್ರವನ್ನು (ಪಿಎಚ್.ಡಿ) ಮೌಖಿಕ ಪರೀಕ್ಷೆ ದಿವಸವೇ ತರಾತುರಿಯಲ್ಲಿ ಪ್ರದಾನ ಮಾಡಲಾಗಿದೆ. ಈ ಕ್ರಮ ರಾಜ್ಯದ ಯಾವ ವಿ.ವಿ.ಯಲ್ಲೂ ಇಲ್ಲ. ಇಂಥ ಸಂಶೋಧನೆಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡುವುದು ಹೇಗೆ? ಯಾರಾದರೂ ಪ್ರಶ್ನಿಸಿದರೆ ವಿಶ್ವವಿದ್ಯಾನಿಲಯ ತಲೆ ತಗ್ಗಿಸಬೇಕಾಗುತ್ತದೆ ಎಂದು ಸಭೆಯಲ್ಲಿದ್ದ ಕೆಲವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಡಿ.ಲಿಟ್, ಡಿ.ಎಸ್ಸಿ ಸಂಶೋಧನಾ ಪದವಿ ಕೂಡ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಡಾ.ಎಸ್.ಸಿ.ಶರ್ಮಾ ಕುಲಪತಿ ಅವಧಿಯ ಕೇವಲ 4 ವರ್ಷಗಳಲ್ಲಿ 60ಕ್ಕೂ ಹೆಚ್ಚು ಮಂದಿಗೆ ಡಿ.ಲಿಟ್, ಡಿ.ಎಸ್ಸಿ ಪ್ರದಾನ ಮಾಡಲಾಗಿದೆ. ಶೇ 70ರಷ್ಟು ಡಿಲಿಟ್ ಪದವಿ ಪಡೆದವರು ಒಂದೇ ಸಮುದಾಯಕ್ಕೆ ಸೇರಿದವರು ಎಂದು ಸಿಂಡಿಕೇಟ್ನ ಮಾಜಿ ಸದಸ್ಯರೊಬ್ಬರು ನೊಂದು ನುಡಿದರು.

ರಾಜ್ಯದ ಹಳೆಯ, ಪ್ರಮುಖ ವಿ.ವಿ.ಯಾದ ಮೈಸೂರು ವಿ.ವಿ. ಇತಿಹಾಸದಲ್ಲಿ ಇಷ್ಟೊಂದು ಮಂದಿಗೆ ಡಿ.ಲಿಟ್ ಪ್ರದಾನ ಮಾಡಿಲ್ಲ. ಶರ್ಮಾ ಅವಧಿಯಲ್ಲಿ ಪಿಎಚ್.ಡಿ ಪದವಿ ನೀಡಿದ್ದರೂ ಆ ಕುರಿತು ತನಿಖೆ ನಡೆಸಿ ಪದವಿ ವಾಪಸ್ ಪಡೆಯಲು ವಿಶ್ವವಿದ್ಯಾನಿಲಯಕ್ಕೆ ಅಧಿಕಾರವಿದೆ. ಸಂಶೋಧನಾ ಪ್ರಬಂಧ ಮಂಡನೆಗೆ ಕನಿಷ್ಠ ಎರಡು ವರ್ಷಗಳಾದರೂ ಬೇಕು. ಮೌಲ್ಯಮಾಪನ, ಮೌಖಿಕ ಪರೀಕ್ಷೆ ನಡೆಸಲು ತಿಂಗಳ ಕಾಲಾವಧಿ ಬೇಕಾಗುತ್ತದೆ.

ಕೋರ್ಸ್ ವರ್ಕ್ ಕಾಲಾವಧಿಯೇ 6 ತಿಂಗಳು. ಇದೆಲ್ಲವನ್ನು ಮೀರಿ 8 ತಿಂಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಅದನ್ನು ಮೌಲ್ಯಮಾಪನ ಮಾಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಶೈಕ್ಷಣಿಕ ವಲಯದಲ್ಲಿ ಮೂಡಿದೆ. ವಿಶ್ವವಿದ್ಯಾಲಯವೊಂದು 8 ತಿಂಗಳಿಗೆ ಪಿಎಚ್.ಡಿ ನೀಡಬಹುದಾದರೆ ಎಲ್ಲ ವಿ.ವಿ.ಗಳು ನೀಡಬಹುದು. ಗುಣಮಟ್ಟದ ಉನ್ನತ ಶಿಕ್ಷಣದ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಕಾಲಘಟ್ಟದಲ್ಲಿ ಇಂಥದೊಂದು ಅಧ್ವಾನ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೆಸರು ಹೇಳದ ಶಿಕ್ಷಣ ತಜ್ಞರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.