ವಿಯೆನ್ನಾ (ಎಪಿ): ಐರೋಪ್ಯ ಒಕ್ಕೂಟದ 28 ರಾಷ್ಟ್ರಗಳಲ್ಲಿ ಹತ್ತರಲ್ಲಿ ಒಬ್ಬ ಮಹಿಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಹಾಗೂ ಅರ್ಧದಷ್ಟು ಮಹಿಳೆಯರು ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ ಎಂದು ಐರೋಪ್ಯ ಸಂಸ್ಥೆ ಹೇಳಿದೆ.

ಈ ಪ್ರದೇಶದ 18.60 ಕೋಟಿ ಮಹಿಳೆಯರು ಲೈಂಗಿಕ ಹಿಂಸೆ ಹಾಗೂ ಕಿರುಕುಳವನ್ನು ಅನುಭವಿಸಿದ್ದಾರೆ ಎಂದು ಐರೋಪ್ಯ ಒಕ್ಕೂಟದ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಹೇಳಿದೆ. 15 ರಿಂದ 74 ವಯೋಮಾನದ 42,000 ಮಹಿಳೆಯರನ್ನು ಈ ಸಂಸ್ಥೆ ನೇರವಾಗಿ ಸಂದರ್ಶಿಸಿ ಈ ಸಮೀಕ್ಷೆ ನಡೆಸಿದೆ. ಈ ವಯೋಮಾನದವರಲ್ಲಿ 90 ಲಕ್ಷ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿದ್ದಾರೆ ಎಂದು ಸಂಸ್ಥೆ ಹೇಳಿದೆ. ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಐರೋಪ್ಯ ಸಂಸ್ಥೆ ಈ ಸಮೀಕ್ಷೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.