ಗುರುವಾರ , ಜನವರಿ 23, 2020
26 °C
26ರಿಂದ ರಾಷ್ಟ್ರೀಯ ಜೂನಿಯರ್‌ ಕಬಡ್ಡಿ

900 ಸ್ಪರ್ಧಿಗಳಿಂದ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ವತಿಯಿಂದ ಹೂಡಿ ಸ್ಪೋರ್ಟ್ಸ್ ಕ್ಲಬ್‌ ಆಶ್ರಯದಲ್ಲಿ ಡಿಸೆಂಬರ್‌ 26ರಿಂದ 30ರವರೆಗೆ 40ನೇ ರಾಷ್ಟ್ರೀಯ ಜೂನಿಯರ್‌ ಬಾಲಕ, ಬಾಲಕಿಯರ ಕಬಡ್ಡಿ ಚಾಂಪಿಯನ್‌ಷಿಪ್‌ ನಡೆಯಲಿದೆ.ಈ ಕೂಟದಲ್ಲಿ ಕರ್ನಾಟಕವೂ ಸೇರಿದಂತೆ 28 ರಾಜ್ಯಗಳ ಬಾಲಕ, ಬಾಲಕಿಯರ ತಂಡಗಳ ಸುಮಾರು 900ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಬಹುದಾದ ತಾತ್ಕಾಲಿಕ ಗ್ಯಾಲರಿಯನ್ನು ನಿರ್ಮಿಸಲಾಗಿದೆ.ಹೊನಲು ಬೆಳಕಿನ ವ್ಯವಸ್ಥೆ ಇರುವ ನಾಲ್ಕು ಅಂಕಣಗಳನ್ನು ಸಿದ್ಧ ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸಂಘಟನಾ ಸಮಿತಿಯ ಕಾರ್ಯದರ್ಶಿ ಎಚ್‌.ಎಸ್‌.ಪಿಳ್ಳಪ್ಪ ತಿಳಿಸಿದ್ದಾರೆ.ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಗಳಿಸುವ ತಂಡಗಳಿಗೆ ಕ್ರಮವಾಗಿ ಒಂದು ಲಕ್ಷ, 50 ಸಾವಿರ ಮತ್ತು 25 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಲಾಗುತ್ತದೆ.

ಪ್ರತಿಕ್ರಿಯಿಸಿ (+)