ಆಕ್ರಮಣಕಾರಿ ಪ್ರದರ್ಶನ ನೀಡಿದ ಮುಂಬೈ ತಂಡ ಗೋಲು ಗಳಿಸಲು ಕೆಲವೊಂದು ಉತ್ತಮ ಪ್ರಯತ್ನ ನಡೆಸಿತಾದರೂ ಯಶಸ್ಸು ದೊರೆಯಲಿಲ್ಲ. ಒಂಬತ್ತನೇ ನಿಮಿಷದಲ್ಲಿ ಲಾಲ್‌ಲಿಯಾನ್‌ಜುವಾಲ ಚಾಂಗ್ಟೆ ಅವರು ಗೋಲು ಗಳಿಸುವ ಅವಕಾಶ ಹಾಳುಮಾಡಿಕೊಂಡರು. ಮೊದಲ ಅವಧಿಯ ಇಂಜುರಿ ಅವಧಿಯಲ್ಲಿ ಬಿಪಿನ್ ಅವರು ಒದ್ದ ಚೆಂಡು ಅಲ್ಪ ಅಂತರದಿಂದ ಹೊರಕ್ಕೆ ಹೋಯಿತು.