ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಕ್ಕೊಳಗಾದ ಯುವತಿಯ ಗ್ರಾಮಕ್ಕೆ ರಾಹುಲ್ ಭೇಟಿ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬಾಂದ (ಉತ್ತರಪ್ರದೇಶ) (ಪಿಟಿಐ): ಬಿಎಸ್ಪಿ ಶಾಸಕನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎನ್ನಲಾದ ಯುವತಿಯನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸೋಮವಾರ ಆಕೆಯ ಗ್ರಾಮದಲ್ಲಿ ಭೇಟಿ ಮಾಡಿದರು.

ಶಾಸಕರ ಬೆಂಬಲಿಗರು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಯುವತಿ ಹೇಳಿದ್ದಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನು ಒದಗಿಸುವುದಾಗಿ ರಾಹುಲ್ ಭರವಸೆ ಇತ್ತರು.
‘ರಾಹುಲ್ ಅವರು ಮಧ್ಯಾಹ್ನ ಮನೆಗೆ ಬಂದರು. ನಾವು ನೀಡಿದ ಹಾಲನ್ನು ಸೇವಿಸಿದರು’ ಎಂದು ಹಿಂದುಳಿದ ಸಮುದಾಯಕ್ಕೆ ಸೇರಿದ 17 ವರ್ಷದ ಯುವತಿ ಸುದ್ದಿಗಾರರಿಗೆ ಶಾಹ್‌ಬಾಜ್‌ಪುರ್ ಗ್ರಾಮದಲ್ಲಿ ತಿಳಿಸಿದಳು.
 
ರಾಹುಲ್ ಅವರು ಈ ಯುವತಿಯೊಂದಿಗೆ ಸುಮಾರು 30 ನಿಮಿಷಗಳವರೆಗೆ ಮಾತುಕತೆ ನಡೆಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT