ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಕಾನ್ಸುಲೇಟ್ ವಿಡಿಯೊ, ಭಾಷಣ ಸ್ಪರ್ಧೆ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ವಾರ ಬಾಕಿ ಉಳಿದಿದೆ. ಇದರ ಅಂಗವಾಗಿ ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲೇಟ್ ನಿಮ್ಮ ಮುಂದೆ ಪ್ರಶ್ನೆಯೊಂದನ್ನು ಇಟ್ಟಿದೆ. `ಒಂದು ವೇಳೆ ನೀವು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದರೆ, ಅದನ್ನು ನೀವು ಹೇಗೆ ಭಿನ್ನವಾಗಿ ಎದುರಿಸುತ್ತೀರಿ?~ ಎನ್ನುವುದೇ ಆ ಪ್ರಶ್ನೆ.

ಅದಕ್ಕೆ ಪೂರಕವಾಗಿ `ಚುನಾವಣಾ ಪ್ರಚಾರ ಅಭಿಯಾನಕ್ಕಾಗಿ ವೇದಿಕೆಯನ್ನು ಹೇಗೆ ಸಿದ್ಧಪಡಿಸುತ್ತೀರಿ~ ಎನ್ನುವ ಕುರಿತು ಒಂದು ವಿಡಿಯೋ, ಭಾಷಣ ಅಥವಾ ಘೋಷಣೆಯನ್ನು ಅಕ್ಟೋಬರ್ 27ರ ಒಳಗೆ ಕಾನ್ಸುಲೇಟ್ ವೆಬ್‌ಸೈಟ್‌ಗೆ ಕಳಿಸಿಕೊಡಬಹುದು.
 
ಅದಕ್ಕಾಗಿ http://chennai.usconsulate.gov/.  ನ ಮುಖಪುಟದ ಮೇಲಿನ `ಸಬ್‌ಮಿಟ್ ವಿಡಿಯೋ~ ಎಂಬ ದೊಡ್ಡ ಗುಂಡಿಯನ್ನು ಕ್ಲಿಕ್ ಮಾಡಬೇಕು.ಹೆಚ್ಚಿನ ಮಾಹಿತಿ ಮತ್ತು ನಿಯಮಗಳಿಗಾಗಿ http://www.facebook.com/chennai.usconsulate ನೋಡಬಹುದು.

ಸ್ಪರ್ಧೆ: ಇದಲ್ಲದೆ `ಒಂದು ಅಭಿಯಾನ, ಒಂದು ವಿಡಿಯೋ, ಒಂದು ಮತ~ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಿದೆ.ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಇಲ್ಲ. ಅರ್ಜಿ ಸಲ್ಲಿಸಲು ಅಕ್ಟೋಬರ್ 27 ಕೊನೆ ದಿನ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT