ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಸ್ತ್ರ' ಪರೀಕ್ಷಾರ್ಥ ಉಡಾವಣೆ ಯಶಸ್ವಿ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬಾಲಾಸೋರ್ (ಒಡಿಶಾ): ಸಂಪೂರ್ಣ ದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾದ `ಅಸ್ತ್ರ' ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಸೋಮವಾರ ಇಲ್ಲಿಗೆ ಸಮೀಪದ ಚಾಂಡಿಪುರದ ಉಡಾವಣಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಸದ್ಯ ಸೇನೆ ಬಳಸುತ್ತಿರುವ ಬಿವಿಆರ್ ಕ್ಷಿಪಣಿಗಳಿಗಿಂತ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ `ಅಸ್ತ್ರ'ಕ್ಷಿಪಣಿಯನ್ನು ಮಧ್ಯಾಹ್ನ 12.20ಕ್ಕೆ ಉಡಾವಣೆ ಮಾಡಲಾಯಿತು. 3.8 ಮೀಟರ್ ಉದ್ದ ಮತ್ತು 160 ಕೆ.ಜಿ ಭಾರದ ಈ ಕ್ಷಿಪಣಿ 15 ಕೆ.ಜಿ  ಸಿಡಿತಲೆಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಯಾವುದೇ ಯುದ್ಧ ವಿಮಾನಗಳಿಗೆ ಇವುಗಳನ್ನು ಸುಲಭವಾಗಿ ಅಳವಡಿಸಬಹುದಾಗಿದೆ ಎಂದು ಸೇನಾ ಪಡೆಯ ಮೂಲಗಳು ತಿಳಿಸಿವೆ.
ಶಬ್ದಾತೀತ ವೇಗದಲ್ಲಿ ಚಲಿಸಬಲ್ಲ ಈ ಕ್ಷಿಪಣಿ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು ಈಗಾಗಲೇ ಎರಡು ಬಾರಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ. ನಾಲ್ಕು ದಿನಗಳ ಅವಧಿಯಲ್ಲಿ ನಡೆದ ಮೂರನೇ ಉಡಾವಣೆ ಇದಾಗಿದೆ.

ಈ ಕ್ಷಿಪಣಿಯನ್ನು ಇನ್ನೂ ಅನೇಕ ಪರೀಕ್ಷೆಗಳಿಗೆ ಒಳಪಡಿಸಬೇಕಿದ್ದು ನಂತರ ಸೇನೆಗೆ ಹಸ್ತಾಂತರಿಸಲಾಗುವುದು ಎಂದು ಡಿಆರ್‌ಡಿಒ ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT