ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಕಣಿವೆಯಲ್ಲಿ...

Last Updated 16 ಏಪ್ರಿಲ್ 2011, 9:35 IST
ಅಕ್ಷರ ಗಾತ್ರ

ಬೇಸಿಗೆ ಬಂದಾಯ್ತು. ಮಕ್ಕಳ ಪರೀಕ್ಷೆಗಳು ಮುಗಿದಾಯ್ತು. ರಜೆಯ ಮಜ ಕಳೆಯಲು ಎಲ್ಲಿ ಹೋಗೋಣ ಎಂದು ತಾಣಗಳನ್ನು ಹುಡುಕುತ್ತಿರುವವರಿಗೆ ಗಿರಿಧಾಮಗಳ ನೆನಪೇ ಹಿತವಾಗಿರುತ್ತದೆ. ಅಂಥ ಒಂದು ಸ್ವಚ್ಛ ಸುಂದರ ಗಿರಿಧಾಮ ಆಂಧ್ರಪ್ರದೇಶದ ಅರಕು ಕಣಿವೆ.
ಎತ್ತರದ ಕಟ್ಟಡಗಳ ನೆರಳು ಬೀಳುತ್ತಿದ್ದರೂ ಬಿಸಿಲ ಕಾವು ಮೈ ಬೆವರಿಳಿಸುವ ಬೇಸಿಗೆಯಲ್ಲಿ, ಕಿಕ್ಕಿರಿದ ಕಟ್ಟಡಗಳ ಲೋಕದಿಂದ ಹೊರಹೋಗುವ ಹಂಬಲ ಕಾಸಿರುವ ಮತ್ತು ಬಿಡುವಿರುವ ಎಲ್ಲರ ಕನಸು.

ವಿಶಾಖಪಟ್ಟಣದ ಜಿಲ್ಲೆಗೆ ಸೇರಿದ ಅರಕು ಕಣಿವೆಗೆ ಸಾಗುವ ದಾರಿಯೇ ಅದ್ಭುತ ಅನುಭವ ನೀಡುತ್ತದೆ. ಐವತ್ತಕ್ಕೂ ಹೆಚ್ಚು ಸುರಂಗಮಾರ್ಗಗಳನ್ನು ದಾಟಿ ದಟ್ಟ ಕಾಡಿನ ನಡುವೆ ಅರಕು ಕಣಿವೆಗೆ ಬಂದು ತಲುಪಿದಾಗ ಮೈಮನ ಪುಳಕವಾಗುತ್ತದೆ.

ಹಸಿರು ಗಿರಿಶೃಂಗಗಳು, ಝುಳು ಝುಳು ಹರಿವ ಜಲಪಾತಗಳು, ಆದಿವಾಸಿಗಳ ಮ್ಯೂಸಿಯಂ, ದಟ್ಟ ಕಾಡು, ತಂಪು ಗಾಳಿ ಇರುವ ಅರಕು ಕಣಿವೆ ಮಾಲಿನ್ಯರಹಿತ ಗಿರಿಧಾಮ. ಪಕ್ಷಿ ವೀಕ್ಷಕರಿಗೆ ಇಲ್ಲಿ ವಿಶಿಷ್ಟ, ವಿಭಿನ್ನ ಪಕ್ಷಿಗಳ ದರ್ಶನ ಭಾಗ್ಯ ಉಂಟು.

ಕಾಫಿ ತೋಟಗಳಿಗೆ ಪ್ರಸಿದ್ಧವಾದ ಈ ಕಣಿವೆ ಸಮುದ್ರ ಮಟ್ಟದಿಂದ 600- 900 ಮೀಟರ್ ಎತ್ತರದಲ್ಲಿದೆ. ವಿಶಾಖ ಪಟ್ಟಣದಿಂದ 115 ಕಿ.ಮೀ. ದೂರದಲ್ಲಿದೆ.

ಅರಕು ಕಣಿವೆಗೆ ರೈಲಿನಲ್ಲಿ ಸಂಚರಿಸಿದರೆ ಅದು ಮರೆಯದ ಅನುಭವ ನೀಡುವುದು ಖಂಡಿತ. ಟ್ರೆಕ್ಕಿಂಗ್‌ಗೂ ಅವಕಾಶ ಇಲ್ಲಿದೆ. ಪೂರ್ವ ಘಟ್ಟಗಳಿಗೆ ಸೇರಿದ ಈ ಕಣಿವೆಯಲ್ಲಿ ತಂಗಲು ಸರ್ಕಾರಿ ವಸತಿ ಗೃಹಗಳು, ಖಾಸಗಿ ರೆಸ್ಟೋರೆಂಟ್‌ಗಳು ಕೂಡ ಇವೆ.

ಹತ್ತಿರದಲ್ಲಿಯೇ ಇರುವ ಬೊರ್ರಾ ಗುಹೆಗಳು, ಅನಂತಗಿರಿ, ಕಟಿಕಾ ಜಲಪಾತ, ಪದ್ಮಪುರಂ ಉದ್ಯಾನವನಕ್ಕೂ ಹೋಗಿ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT