ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿ ವಯಸ್ಸಿನಲ್ಲೂ ದೇಶ ಸಂಚಾರ

Last Updated 14 ಫೆಬ್ರುವರಿ 2012, 10:05 IST
ಅಕ್ಷರ ಗಾತ್ರ

ಕಾರವಾರ: ಅವರ ವಯಸ್ಸು 68. ಈ ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ. 50 ದಾಟಿದರೆ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುವವರಿಗೆ ಅವರು ಸವಾ ಲಾಗಿ ನಿಲ್ಲುತ್ತಾರೆ. ದೇಶದ ಅಖಂಡತೆ ಪ್ರತಿಪಾದನೆಗೆ ಅವರು ದೇಶ ಸಂಚಾರ ಕೈಗೊಂಡಿರುವುದು ಸೈಕಲ್ ಮೇಲೆ!

ಛತ್ತಿಸಗಡ ರಾಜ್ಯದ ರಾಯಗಡ್ ಜಿಲ್ಲೆಯ ಕುರ‌್ಸಿಯಾ ಮೂಲದ ಬಾಬು ಲಾಲ್ ಕಂಕ್ರವಾಲಾ ಮೂಲತಃ ಚಿತ್ರ ಕಲಾವಿದ.

ಹಿಂದೆ ಒಂದು ಬಾರಿ ತಾವು ಪ್ರಧಾನಿ ಇಂದಿರಾಗಾಂಧಿ ಅವರನ್ನು ಭೇಟಿ ಮಾಡಿ ದೇಶದಲ್ಲಿ ಶಾಂತಿ ನೆಲೆ ಸಲು ಮತ್ತು ಭಾವೈಕ್ಯ ಮೂಡಿಸಲು ದೇಶ ಸಂಚಾರ ಮಾಡುತ್ತೇನೆ ಎಂದು ಮಾತುಕೊಟ್ಟಿದ್ದರಂತೆ. ಕೊಟ್ಟಮಾತಿ ನಂತೆ ಬಾಬುಲಾಲ್ ಈಗ ಸೈಕಲ್ ಮೇಲೆ ಸಂಚಾರ ಕೈಗೊಂಡಿದ್ದಾರೆ.

ಸೈಕಲ್‌ನ ಹಿಂಬದಿಯಲ್ಲಿ ಬಟ್ಟೆ-ಬರೆ ಗಳನ್ನು ಕಟ್ಟಿಕೊಂಡು ಸಣ್ಣ ಧ್ವನಿ ವರ್ಧಕದ ಸೆಟ್ ಇಟ್ಟುಕೊಂಡು ಸಾಗು ತ್ತಿರುವ ಬಾಬುಲಾಲ್ ನಗರ, ಪಟ್ಟಣ ಜನಸಮೂಹ ಸೇರುವ ಸ್ಥಳಗಳಲ್ಲಿ ಸ್ವಲ್ಪ ಹೊತ್ತುನಿತ್ತು ದೇಶದಲ್ಲಿ ತಾಂಡವವಾಡುತ್ತಿರುವ ಅರಾಜಕತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
 
ದೇಶದ ಅಖಂಡತೆಯ ಬಗ್ಗೆ ಭಾಷಣ ಬಿಗಿಯುತ್ತಾ ಮುಂದೆ ಸಾಗುತ್ತಾರೆ. ದೇಶ ಬೇರೆಬೇರೆಯಾದರೂ ಇಲ್ಲಿ ಬದುಕುವ ನಾವೆಲ್ಲರೂ ಒಂದೇ. ಹಿಂದು, ಮುಸ್ಲಿಮ್ ಮತ್ತು ಕ್ರೈಸ್ತರು ಸಹೋದರರಂತೆ ಬಾಳಬೇಕು ಎನ್ನುವುದು ಇವರ ಆಕಾಂಕ್ಷೆ.

ಕುರ‌್ಸಿಯಾದಿಂದ ನ. 19, 2011ರಂದು ಸೈಕಲ್ ಮೇಲೆ ತನ್ನ ಪ್ರವಾಸ ಪ್ರಾರಂಭಿಸಿದ ಬಾಬುಲ್ ಮಹಾರಾಷ್ಟ್ರ, ಗೋವಾ ರಾಜ್ಯವನ್ನು ಸಂದರ್ಶಿಸಿ ಸೋಮವಾರ ಮಾಜಾಳಿ ಗಡಿಯ ಮೂಲಕ ಕರ್ನಾಟಕ ಪ್ರವೇಶ ಮಾಡಿದರು. ಇಲ್ಲಿ ಯುದ್ಧನೌಕೆ ವಸ್ತು ಸಂಗ್ರಹಾಲಯವನ್ನು ನೋಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

 ಪ್ರತಿನಿತ್ಯ  35 ರಿಂದ 40 ಕಿಲೋ ಮೀಟರ್ ಪ್ರಯಾಣ ಮಾಡುವ ಕಂಕ್ರವಾಲಾ ಅವರ ಸಂಚಾರ 87 ದಿನ ಪೂರೈಸಿದೆ. ಹೊದಕಡೆಗಳಲ್ಲಿ ಹೊಟೇಲ್ ಮಾಲೀಕರು ಅಥವಾ ದಾನಿಗಳು ಊಟ, ವಸತಿ ವ್ಯವಸ್ಥೆ ಕಲ್ಪಿಸುತ್ತಾರೆ. ಸಮಸ್ಯೆ ಇದ್ದರೆ ಮಠ, ಮಂದಿರಗಳಲ್ಲಿ ವಿಶ್ರಾಂತಿ ಮಾಡುತ್ತೇನೆ ಎನ್ನುತ್ತಾರೆ ಬಾಬುಲಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT