ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ತಾರತಮ್ಯ ಏಕೆ?

Last Updated 22 ಫೆಬ್ರುವರಿ 2011, 15:55 IST
ಅಕ್ಷರ ಗಾತ್ರ

‘ಹಿಂದು ಮಠಗಳಿಗೆ ವಿನಾಯಿತಿ; ಅಲ್ಪಸಂಖ್ಯಾತರ ಮಠಗಳ ಮೇಲೆ ಕೆಂಗಣ್ಣು’ (ಪ್ರ.ವಾ. ಫೆ. 18) ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡ ವರದಿಯನ್ನು ಓದಿದ ಮೇಲೆ ಆತಂಕದ ಛಾಯೆ ಮೂಡಿಸಿದ್ದು ಉತ್ತರಾರ್ಧ ಶೀರ್ಷಿಕೆ. ಹೀಗೆ ಧಾರ್ಮಿಕ ಜಟಿಲತೆಯನ್ನು ಸೃಷ್ಟಿಸುವುದು ಕಳವಳಕಾರಿಯಲ್ಲವೆ? ಏಕೆಂದರೆ ಹಿಂದು ಮಠಗಳಿಗೆ ಮಾತ್ರ ವಿನಾಯಿತಿ ನೀಡುವುದು, ಅಲ್ಪಸಂಖ್ಯಾತರ ಮಠಗಳು ಮಾತ್ರ ಕಾಯ್ದೆಯಡಿ ತಪಾಸಣೆ ಮಾಡಿಸಬೇಕೆಂಬ ನಿಲುವು ತೋರಿರುವ ಹಿಂದಿನ ಮರ್ಮವಾದರು ಏನು? ಇದೊಂದು ರೀತಿಯ ಪಕ್ಷಪಾತವೆನಿಸಲಿಲ್ಲವೆ? ಮಲತಾಯಿ ಧೋರಣೆಯಲ್ಲವೆ? ಇಂದು ಮಠಗಳು ಸ್ವಿಸ್ ಬ್ಯಾಂಕ್‌ಗಳಾಗಿ ಮಾರ್ಪಾಡಾಗುತ್ತಿವೆ. ಬೇಕಾದರೆ ಯಾವುದೇ ತಾರತಮ್ಯಗಳಿಲ್ಲದೆ ಏಕರೂಪದಲ್ಲಿ ಎಲ್ಲಾ ಮಠಗಳಲ್ಲಿನ ಧಾರ್ಮಿಕ ದತ್ತಿ ಸಂಸ್ಥೆಗಳ ತಪಾಸಣೆ ಮಾಡುವ ರೀತಿಯಲ್ಲಿ ಶಾಸನ ರೂಪಿಸಿ. ಇದರಿಂದ ‘ಸಹಿಷ್ಣುರೆಂಬ’ ಹೊಗಳಿಕೆಯಾದರೂ ಉಳಿದೀತು! ಏನೇ ಆದರೂ, ಕೊನೆಗೂ ಈ ಸರ್ಕಾರಕ್ಕೆ ಬುದ್ಧಿ ಬಂದು ತನ್ನ ಹಿಂದಿನ ನಿರ್ಧಾರವನ್ನು ಹಿಂತೆಗೆದುಕೊಂಡದ್ದು ಒಳಿತೇ ಆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT