ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಶೇ 66ರಷ್ಟು ಮತದಾನ

Last Updated 28 ಫೆಬ್ರುವರಿ 2011, 8:05 IST
ಅಕ್ಷರ ಗಾತ್ರ

ಯಾದಗಿರಿ: ನಗರಸಭೆಯ 12 ವಾರ್ಡಿಗೆ ನಡೆದ ಉಪಚುನಾವ ಣೆಯ ಮತದಾನ ಭಾನುವಾರ ಶಾಂತಿಯುವಾಗಿ ನಡೆದಿದ್ದು, ಶೇ.66.60 ರಷ್ಟು ಮತದಾನವಾಗಿದೆ.ಇಲ್ಲಿಯ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು. ಒಟ್ಟು 1665 ಮತದಾರರಲ್ಲಿ 1109 ಮತದಾರರು ಮತ ಚಲಾ ಯಿಸಿದ್ದಾರೆ.

ಬೆಳಿಗ್ಗೆಯಿಂದಲೇ ಮೂರು ರಾಜಕೀಯ ಪಕ್ಷಗಳ ಧುರೀಣರು ಮತಗಟ್ಟೆ ಬಳಿ ಜಮಾಯಿಸಿದ್ದರು. ಕಾರ್ಯಕರ್ತರೂ ಮತದಾರರಿಗೆ ಮತದಾರ ಸಂಖ್ಯೆ ಮತ್ತಿತರ ವಿವರ ಗಳನ್ನು ಒಳಗೊಂಡ ಚೀಟಿಗಳನ್ನು ವಿತರಿಸುವ ಮೂಲಕ ಮತದಾನಕ್ಕೆ ಸಹಕರಿಸಿದರು. ನಗರಸಭೆಯ 12 ನೇ ವಾರ್ಡ್ ಪ್ರತಿನಿಧಿಸುತ್ತಿದ್ದ ಸುಭಾಷ ವನಿಕೇರಿ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಮಹ್ಮದ ಯುನೂಸ್, ಜೆಡಿಎಸ್ ಅಭ್ಯರ್ಥಿಯಾಗಿ ಮಹ್ಮದ್ ಇಸಾಕ್ ಜಮಖಂಡಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರೆಡ್ಡಿ ವನಿಕೇರಿ ಕಣದಲ್ಲಿದ್ದಾರೆ.

ಈಗಾಗಲೇ ನಗರಸಭೆ ಅಧಿಕಾರ ಹಿಡಿದಿರುವ ಜೆಡಿಎಸ್ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ತವಕದಲ್ಲಿದ್ದರೆ, ಬಿಜೆಪಿ ನಗರಸಭೆ ಯಲ್ಲಿ ಖಾತೆ ತೆರೆಯುವ ಉತ್ಸಾಹ ದಲ್ಲಿದೆ. ಇನ್ನೊಂದೆಡೆ ವನಿಕೇರಿ ಕುಟುಂಬದವರನ್ನೇ ಕಣಕ್ಕಿಳಿಸಿರುವ ಕಾಂಗ್ರೆಸ್ ಕೂಡ ಈ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ. ಒಟ್ಟಾರೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಈ ಉಪಚುನಾ ವಣೆಯ ಫಲಿತಾಂಶ ಮಾರ್ಚ್ 1 ರಂದು ತಿಳಿಯಲಿದೆ. ಮಾರ್ಚ್ 1 ರಂದು ಬೆಳಿಗ್ಗೆ 8 ಗಂಟೆಯಿಂದ ಇಲ್ಲಿಯ ತಹಸೀಲ್ದಾರ ಕಚೇರಿಯಲ್ಲಿ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ ಎಂದು ಚುನಾವಣಾ ಅಧಿಕಾರಿಯಾಗಿರುವ ಬಿಇಓ ಮಜರ್ ಹುಸೇನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT