ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಸಸ್: ಅತಿ ತೆಳ್ಳನೆಯ ನೋಟ್‌ಬುಕ್

Last Updated 4 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಏಸಸ್ ಟೆಕ್ನಾಲಜಿ ಸಂಸ್ಥೆಯು ಅತ್ಯಂತ ತೆಳ್ಳನೆಯ (ಅಲ್ಟ್ರಾ ಥಿನ್) ನೋಟ್‌ಬುಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. `ಏಸಸ್ ಎಕ್ಸ್101~ ಹೆಸರಿನ ಈ ನೋಟ್‌ಬುಕ್ `ಇಂಟೆಲ್ ಮೀಗೋ ಆಪರೇಟಿಂಗ್ ಸಿಸ್ಟಮ್~ನಿಂದ ಕಾರ್ಯನಿರ್ವಹಿಸಲಿದೆ.

1 ಕೆ.ಜಿ.ಗಿಂತ ಕಡಿಮೆ ತೂಕದ ಈ ನೋಟ್‌ಬುಕ್, 17.5 ಮಿಲಿ ಮೀಟರ್‌ನಷ್ಟು ತೆಳುವಾಗಿದೆ. ಇದಕ್ಕೆ ಯಾವುದೇ ವೈರಸ್ ನಿರೋಧಕ ಸಾಫ್ಟ್‌ವೇರ್‌ನ ಅಗತ್ಯವಿಲ್ಲ ಎಂಬುದು ವಿಶೇಷ. ಇದರ ಬೆಲೆ ರೂ12,499.

ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ನೋಟ್‌ಬುಕ್ ಅನ್ನು ಬಿಡುಗಡೆ ಮಾಡಿ, ಮಾತನಾಡಿದ ಏಸಸ್ ಟೆಕ್ನಾಲಜಿ ಸಂಸ್ಥೆಯ (ಭಾರತ) ಮುಖ್ಯಸ್ಥ ಅಲೆಕ್ಸ್ ಹೌಂಗ್, `ಗ್ರಾಹಕರಿಗೆ ಅತ್ಯುತ್ತಮ ಅನುಭವ ಸಿಗುವ ಹಾಗೆ ಹೊಸ ನೋಟ್‌ಬುಕ್‌ನಲ್ಲಿ ಪರಿಕರಗಳನ್ನು ಅಳವಡಿಸಲಾಗಿದೆ~ ಎಂದರು.

`ಹೊಸ ಉತ್ಪನ್ನವು ವೈಯಕ್ತಿಕ ಕಂಪ್ಯೂಟರ್ ಕ್ಷೇತ್ರದಲ್ಲಿ ಹೊಸ ಅಲೆಗೆ ಕಾರಣವಾಗಲಿದೆ. ಜಗತ್ತಿನಾದ್ಯಂತ 10 ಸಾವಿರ ಉದ್ಯೋಗಿಗಳು, 3000 ಎಂಜಿನಿಯರುಗಳನ್ನು ಹೊಂದಿರುವ ಏಸಸ್ ಕಂಪೆನಿಯು 2010ರಲ್ಲಿ 10.1 ಶತಕೋಟಿ ಡಾಲರ್‌ಗಳಷ್ಟು ಲಾಭ ಗಳಿಸಿದೆ~ ಎಂದು ವಿವರಿಸಿದರು.

ಇಂಟೆಲ್ ದಕ್ಷಿಣ ಏಷ್ಯಾದ ಹೊಸ ವಹಿವಾಟು ವಿಭಾಗದ ನಿರ್ದೇಶಕ ಪ್ರಶಾಂತ್ ಆದಿರಾಜು ಮಾತನಾಡಿ, `10.1 ಇಂಚಿನ ಮಾನಿಟರ್, ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್, ಬ್ಲೂಟೂಥ್, ವೈ ಫೈ ಮೊದಲಾದ ಸೌಕರ್ಯಗಳನ್ನು ಈ ನೋಟ್‌ಬುಕ್ ಹೊಂದಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT