ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ಮುಷ್ಟಿಯಲ್ಲಿ ಹೂಡಿಕೆದಾರರ ಸಂಪತ್ತು...!

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು 18,008 ಪಾಯಿಂಟುಗಳಲ್ಲಿ ಅಂತ್ಯಗೊಂಡು ಕಳೆದ ಆರು ತಿಂಗಳಲ್ಲಿನ ಕನಿಷ್ಠಮಟ್ಟಕ್ಕೆ ಕುಸಿದಿದೆ. ಹೆಚ್ಚಿನ ಅಗ್ರಮಾನ್ಯ ಕಂಪೆನಿಗಳು ತಮ್ಮ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿವೆ. ಆಕರ್ಷಕ ಕಾರ್ಪೊರೇಟ್ ಫಲಗಳನ್ನು ಸಹ ಹೂಡಿಕೆದಾರರಿಗೆ ವಿತರಣೆ ಮಾಡುವ ಘೋಷಣೆಗಳೂ ಸಹ ಆಗಿದೆ. ಆದರೂ ಷೇರುಪೇಟೆಯ ಸೂಚ್ಯಂಕಗಳು ಒಂದೇ ದಿಕ್ಕಿನಲ್ಲಿ ಇಳಿಯುತ್ತಿವೆ. ಗುರುವಾರದಂದು ಕಂಡ 358 ಪಾಯಿಂಟುಗಳ ಮುನ್ನಡೆಗೆ ಕಾರಣವಾದ ಲಾರ್ಸನ್ ಅಂಡ್ ಟೋಬ್ರೊ, ರಿಲೈಯನ್ಸ್ ಇನ್‌ಫ್ರಾ, ಹಿಂಡಾಲ್ಕೊಗಳು ಶುಕ್ರವಾರದಂದು ಭಾರಿ ಮಾರಾಟದ ಕಾರಣ ಅದೇ ಪ್ರಮಾಣದಲ್ಲಿ ಇಳಿಕೆ ಕಂಡವಲ್ಲದೆ ಐಸಿಐಸಿಐ ಬ್ಯಾಂಕ್ ಶೇ. 3.27, ಹೆಚ್‌ಡಿಎಫ್‌ಸಿ ಶೇ. 3.26, ಟಿಸಿಎಸ್ ಶೇ. 3.10, ಐಟಿಸಿ ಶೇ. 4.23, ಮಹೇಂದ್ರ ಮತ್ತು ಮಹೇಂದ್ರ ಶೇ. 5.3 ರಷ್ಟು ಕೆಳಜಗ್ಗಲು ಯಶಸ್ವಿಯಾಗಿ ಸೂಚ್ಯಂಕವನ್ನು ಮಧ್ಯಂತರದಲ್ಲಿ 17,926 ಪಾಯಿಂಟುಗಳವರೆಗೂ ಕುಸಿಯುವಂತೆ ಮಾಡಿದವು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ರಿಯಾಲ್ಟಿ ಸೂಚ್ಯಂಕವು ಫೆಬ್ರುವರಿ ಒಂದರಂದು 2130 ಪಾಯಿಂಟುಗಳಿಗೆ ಕುಸಿತ ಕಂಡು ವಾರ್ಷಿಕ ಕನಿಷ್ಠ ದಾಖಲೆ ನಿರ್ಮಿಸಿತು. ಇದೇ ಸೂಚ್ಯಂಕ ಜನವರಿ 2008 ರಲ್ಲಿ 13,848 ಪಾಯಿಂಟುಗಳಲ್ಲಿತ್ತು. ಇದು ಆ ವಲಯದಲ್ಲುಂಟಾದ ಸಂಪತ್ತು ನಾಶದ ವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಒಂದೇ ದಿನ ಭಾರಿ ಏರಿಕೆ ನಂತರ ಭಾರಿ ಇಳಿಕೆ ಅಥವಾ ಅದರ ವಿರುದ್ಧವಾದ ರೀತಿಯ ಬದಲಾವಣೆಗಳನ್ನು ಪ್ರದರ್ಶಿಸುತ್ತಿರುವ ಈಗಿನ ಪೇಟೆಯಲ್ಲಿ ಸ್ಥಿರತೆ ಕಾಣುವುದು ದುರ್ಲಭ. ಹಿಂದಿನವಾರ ಒಟ್ಟಾರೆ 387 ಪಾಯಿಂಟುಗಳ ಹಾನಿ ಕಂಡ ಸಂವೇದಿ ಸೂಚ್ಯಂಕ ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕ 163 ಪಾಯಿಂಟುಗಳಷ್ಟು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 215 ಪಾಯಿಂಟುಗಳ ಕುಸಿತ ಕಾಣುವಂತೆ ಮಾಡಿತು. ವಿದೇಶೀ ವಿತ್ತೀಯ ಸಂಸ್ಥೆಗಳು ರೂ1356 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ವದೇಶೀ ವಿತ್ತೀಯ ಸಂಸ್ಥೆಗಳು  ್ಙ 2,513 ಕೋಟಿ ಮೌಲ್ಯದ ಷೇರು ಖರೀದಿಸಿವೆಯಾದರೂ ವಿಸ್ಮಯಕಾರಿ ಕುಸಿತವನ್ನು ಷೇರುಪೇಟೆ ಕಂಡಿದೆ. ಈ ಕಾರಣವಾಗಿ ಷೇರುಪೇಟೆ ಬಂಡವಾಳೀಕರಣ ಮೌಲ್ಯವು ಹಿಂದಿನ ವಾರದ  ್ಙ 66 ಲಕ್ಷ ಕೋಟಿಯಿಂದ  ್ಙ 65 ಲಕ್ಷ ಕೋಟಿಗೆ ಇಳಿದಿದೆ. ಇಂತಹ ಸಂಪತ್ತು ನಾಶವು ಅತಿವೇಗವಾಗಿರುವುದು ಆತಂಕಕಾರಿ ವಿಷಯವಾಗಿದೆ.

ಬೋನಸ್ ಷೇರಿನ ವಿಚಾರ

* ನ್ಯಾಶನಲ್ ಅಲ್ಯುಮಿನಿಯಂ ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.
* ಈ ಹಿಂದೆ ಪೇಸ್ ಟೆಕ್ಸ್‌ಟೈಲ್ಸ್ ಎಂದಿದ್ದು 2010, ಜನವರಿಯಲ್ಲಿ ಎಸ್‌ವಿಸಿ ರಿಸೋರ್ಸಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿರುವ ಈ ಕಂಪೆನಿಯು 1:3ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.
* ಶ್ರೇತ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿ. ಕಂಪೆನಿಯು ಪ್ರಕಟಿಸಿರುವ 4:5 ಅನುಪಾತದ ಬೋನಸ್ ಷೇರಿಗೆ 11ನೇ ಫೆಬ್ರುವರಿ ನಿಗದಿತ ದಿನಾಂಕವಾಗಿದೆ.
* ಎಸಿಐಎಲ್ ಕಾಟನ್ ಇಂಡಸ್ಟ್ರೀಸ್ ಕಂಪೆನಿಯು 24 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಲಾಭಾಂಶ ವಿಚಾರ

ಆರತಿ ಇಂಡಸ್ಟ್ರೀಸ್ ಶೇ. 25 (ಮುಖಬೆಲೆ ರೂ. 5), ಅಂಬುಜಾ ಸೀಮೆಂಟ್ ಶೇ. 70 (ಮುಖಬೆಲೆ  ್ಙ 2, ನಿಗದಿತ ದಿನಾಂಕ 15.2.11) ಆರತಿ ಡ್ರಗ್ಸ್ ಶೇ. 25, ಎ.ಸಿ.ಸಿ. ಶೇ. 205, ಕಮ್ಮಿನ್ಸ್ ಶೇ. 35 (ಮುಖಬೆಲೆ ರೂ. 2), ಫುಡ್ಸ್ ಅಂಡ್ ಇನ್ಸ್ ಶೇ. 18, ಗ್ಲಾಕ್ಸೊ ಸ್ಮಿತ್ ಕ್ಲೈನ್ ಕನ್ಸೂಮರ್ಸ್ ಶೇ. 500 (ಶೇ. 250ರ ಸ್ವರ್ಣ ಮಹೋತ್ಸವ ಲಾಭಾಂಶ ಸೇರಿ). ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ ಶೇ. 30 (ಮುಖಬೆಲೆ  ್ಙ 2), ಗುಜರಾತ್ ಪ್ಲೊರೊಕೆಂ ಶೇ. 100 (ಮುಖಬೆಲೆ  ್ಙ 2), ನಿಗದಿತ ದಿನಾಂಕ 11.2.11), ಮಯೂರ್ ಯುನಿಕೋಟ್ಸ್ ಶೇ. 25, ನ್ಯಾಶನಲ್ ಅಲ್ಯುಮಿನಿಯಂ ಶೇ. 20, ಎನ್‌ಟಿಪಿಸಿ ಶೇ. 30, ಕೇಸರ್ ಟರ್ಮಿನಲ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಶೇ. 15, ಆರ್‌ಎಸ್‌ಡಬ್ಲು ಎಂ ಲಿ. ಶೇ. 100, ರಾಣಿ ಹೋಲ್ಡಿಂಗ್ಸ್ ಶೇ. 75, (ನಿಗದಿತ ದಿನಾಂಕ 15.2.11) ಸುಪ್ರಜಿತ್ ಇಂಡಸ್ಟ್ರೀಸ್ ಶೇ. 20, ನಿಗದಿತ ದಿನಾಂಕ 17.2.11) ಸುಪ್ರೀಂ ಇಂಡಸ್ಟ್ರೀಸ್ ಶೇ. 65 ( ್ಙ 2).
ಹೊಸ ಷೇರಿನ ವಿಚಾರ
* ಹೈದರಾಬಾದ್‌ನ ಎಜಿಎಸ್ ಇನ್‌ಫೊಟೆಕ್ ಲಿಮಿಟೆಡ್ ಕಂಪೆನಿಯು ಫೆಬ್ರುವರಿ 7 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲು ಅನುಮತಿಸಲಾಗಿದೆ.
* ಪ್ಯುಚುರ ಪೊಲಿಸ್ಟರ್ ಲಿ. ಕಂಪೆನಿಯ ಹೂಡಿಕೆ ವಿಭಾಗವನ್ನು ಬೇರ್ಪಡಿಸಿ ರಚಿಸಿದ ಇನ್ನೊವಸಿಂತ್ ಇನ್ವೆಸ್ಟ್‌ಮೆಂಟ್ಸ್ ಲಿ. ಕಂಪೆನಿಯು ಟಿ ಗುಂಪಿನಲ್ಲಿ ಫೆಬ್ರುವರಿ 8 ರಿಂದ ವಹಿವಾಟಾಗಲಿದೆ.
* ಪ್ರತಿ ಷೇರಿಗೆ  ್ಙ 610 ರಂತೆ ವಿತರಿಸಿದ ಟಾಟಾ ಸ್ಟೀಲ್ ಕಂಪೆನಿಯ ಹೊಸ ಷೇರುಗಳು ಫೆಬ್ರುವರಿ 2 ರಿಂದ ‘ಎ’ ಗುಂಪಿನಲ್ಲಿ ವಹಿವಾಟಾಗುತ್ತಿದೆ.
ಮುಖಬೆಲೆ ಸೀಳಿಕೆ ವಿಚಾರ
* ಸಾರ್ವಜನಿಕ ವಲಯದ ನ್ಯಾಶನಲ್ ಅಲ್ಯುಮಿನಿಯಂ ಕಂಪೆನಿಯು ಷೇರಿನ ಮುಖಬೆಲೆಯನ್ನು ್ಙ 10 ರಿಂದ  ರೂ 5ಕ್ಕೆ ಸೀಳಲಿದೆ.
* ಜಯ್ ಎನರ್ಜಿ ಅಂಡ್ ಎಸ್ ಎನರ್ಜೀಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು  ್ಙ 10 ರಿಂದ 2ಕ್ಕೆ ಸೀಳಲು ಫೆಬ್ರುವರಿ 15 ನಿಗದಿತ ದಿನಾಂಕವಾಗಿದೆ.
* ಎಕ್ಸ್‌ಕ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು  ್ಙ 10 ರಿಂದ  ್ಙ 5ಕ್ಕೆ ಸೀಳಲಾಗುವುದು.
* ನೌವೆಯಾ ಮಲ್ಟಿಮೀಡಿಯಾ ಲಿ. ಕಂಪೆನಿಯು ‘ಟಿ’ ವಿಭಾಗದಲ್ಲಿದ್ದು 9 ರಂದು ಕಂಪೆನಿಯ ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಾಗುವುದು.
ತೆರೆದ ಕರೆ ವಿಚಾರ
ಸೀಮನ್ಸ್ ಎ.ಜಿ. ಕಂಪೆನಿಯು ಭಾರತದ ಸೀಮನ್ಸ್ ಲಿ. ಕಂಪೆನಿಯ 6.68 ಕೋಟಿ ಷೇರು ಅಂದರೆ ಶೇ. 19.82 ರಷ್ಟನ್ನು ತೆರೆದ ಕರೆಯಲ್ಲಿ ಪ್ರತಿ ಷೇರಿಗೆ  ್ಙ 930ರಂತೆ ಕೊಳ್ಳಲಿದೆ. ಈ ತೆರೆದ ಕರೆಯು ಮಾರ್ಚ್ 25 ರಿಂದ ಏಪ್ರಿಲ್ 13 ರವರೆಗೂ ನಡೆಯಲಿದ್ದು ಫೆಬ್ರುವರಿ 18 ರಂದು ಷೇರು ಉಳ್ಳವರಿಗೆ ನೀಡಲಾಗುವುದು.
ಹಕ್ಕಿನ ಷೇರಿನ ವಿಚಾರ
* ಆಕಾರ್ ಟೂರ್ಸ್‌ ಕಂಪೆನಿಯು ಫೆಬ್ರುವರಿ 11 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.
* ಸಯ್ಯಾಜಿ ಹೋಟೆಲ್ಸ್ ಕಂಪೆನಿಯು ಹಕ್ಕಿನ ಷೇರು ವಿತರಿಸಲು ತೀರ್ಮಾನಿಸಿದ್ದು ಇತರೆ ವಿವರಗಳನ್ನು ಪರಿಶೀಲಿಸುತ್ತಿದೆ.
ಬಂಡವಾಳ ಕಡಿತದ ವಿಚಾರ
* ಹಿಮಾಚಲ ಫ್ಯುಚರಿಸ್ಟಿಕ್ ಕಮ್ಯುನಿಕೇಷನ್ ಲಿ. ಕಂಪೆನಿಯ ಷೇರು ಬಂಡವಾಳವನ್ನು ಶೇ. 90 ರಷ್ಟು ಕಡಿತಗೊಳಿಸಲು ಷೇರಿನ ಮುಖಬೆಲೆಯನ್ನು ್ಙ 10 ರಿಂದ ್ಙ 1ಕ್ಕೆ ಬದಲಾಯಿಸಲಾಗುವುದು. ಈ ಕ್ರಮಕ್ಕಾಗಿ ಫೆಬ್ರುವರಿ 9 ನಿಗದಿತ ದಿನವಾಗಿದೆ.
* ಶಾಲಿಮಾರ್ ವೈರ್ಸ್ ಲಿ. ಕಂಪೆನಿಯ ಷೇರು ಬಂಡವಾಳವನ್ನು ಶೇ. 80 ರಷ್ಟು ಕಡಿತಗೊಳಿಸಿ ್ಙ 10ರ ಮುಖಬೆಲೆಯ ಷೇರನ್ನು     ್ಙ 2ಕ್ಕೆ ಬದಲಿಸಲಾಗಿದೆ. ಹೊಸ ಅವತಾರದ ಷೇರು 4 ರಿಂದ ಟಿ ಗುಂಪಿನಲ್ಲಿ ಬಿಡುಗಡೆಯಾಯಿತು.
* ಆಕ್ವೆಂಟ್ ಇಂಟರ್ ಆಕ್ಟೀವ್ ಟೆಕ್ನಾಲಜೀಸ್ ಬಂಡವಾಳ ಕಡಿತದ ನಂತರ ‘ಟಿ’ ಗುಂಪಿನಲ್ಲಿ 7 ರಿಂದ ವಹಿವಾಟಾಗಲಿದೆ.

ವಾರದ ಪ್ರಶ್ನೆ

ನಾನು ಜುಪಿಟರ್ ಬಯೋಸೈನ್ಸ್ ಷೇರನ್ನು ಸುಮಾರು ್ಙ 60ರ ಸಮೀಪ ಕೊಂಡಿದ್ದೇನೆ. ನನ್ನಂತೆ ಬಹಳಷ್ಟು ಜನ ನಮ್ಮಲ್ಲಿ ಸಾವಿರಗಟ್ಟಲೆ ಈ ಷೇರನ್ನು ಖರೀದಿಸಿದ್ದಾರೆ. ಈಗ ಷೇರಿನ ಬೆಲೆ ‘52 ವೀಕ್ ಲೋ’ ಆಗಿದೆ ಈ ಕಂಪೆನಿಯ ಬಗ್ಗೆ ದಯವಿಟ್ಟು ತಿಳಿಸಿರಿ.
ಉತ್ತರ: ಈ ಕಂಪೆನಿಯು ರಾಸಾಯನಿಕ ಸಾಮಾಗ್ರಿ ವಲಯದ ಕಂಪೆನಿಯಾಗಿದ್ದು 1985 ರಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಕರ್ನಾಟಕದ ಬೀದರ್‌ನಲ್ಲಿ ಟ್ರೈಮೆತೊಪ್ರಿಂ ಮತ್ತು ಸಲ್ಪಸಿಟಮೈಡ್ ಸೋಡಿಯಂ ಹಾಗೂ ಆಂಧ್ರಪ್ರದೇಶದ ಸಂಗಾರೆಡ್ಡಿಯಲ್ಲಿ ಟ್ರೈಲ್‌ಮೆತೋಪ್ರಿಂ ಉತ್ಪಾದನಾ ಘಟಕಗಳನ್ನು ಹೊಂದಿದೆ. ಮೆಡಕ್ ಜಿಲ್ಲೆಯ ಸಂಗಾರೆಡ್ಡಿಯಲ್ಲಿ ಸಂಪೂರ್ಣ ರಫ್ತು ಆಧಾರಿತ ಘಟಕಕ್ಕಾಗಿ 1995 ರಲ್ಲಿ ಆರಂಭಿಕ ಷೇರು ವಿತರಣೆ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಿದೆ. ಈ ಕಂಪೆನಿಯ ಷೇರು ಬಂಡವಾಳ ರೂ 16.13 ಕೋಟಿ, ಕಳೆದ ಮಾರ್ಚ್ 2010 ರಲ್ಲಿ  ರೂ 307.90 ಕೋಟಿ ಮೀಸಲು ನಿಧಿ ಹೊಂದಿದೆ. ಕಳೆದ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಈ ಕಂಪೆನಿಯು ರೂ 59 ಕೋಟಿ ವಹಿವಾಟಿನಿಂದ ರೂ 10.35 ಕೋಟಿ ಲಾಭ ಗಳಿಸಿದೆ. ಹಾಗೂ ಕಳೆದ ಮಾರ್ಚ್ ಅಂತ್ಯದಲ್ಲಿ ಶೇ. 20ರ ಲಾಭಾಂಶವನ್ನು ಸಹ ವಿತರಿಸಿದೆ.ಈ ಕಂಪೆನಿಯು ಇದೇ 28 ರಂದು ವಿಶೇಷ ಸಾಮಾನ್ಯ ಸಭೆಯನ್ನು, ಷೇರು ಬಂಡವಾಳವನ್ನು ರೂ 70 ಕೋಟಿಯಿಂದ ರೂ 100 ಕೋಟಿಗೆ ಹೆಚ್ಚಿಸಲು ಷೇರುದಾರರ ಅನುಮತಿಗಾಗಿ ಕರೆಯಲಾಗಿದೆ.

ಇಷ್ಟೆಲ್ಲಾ ವಿಚಾರವು ಸರಿಯಾದರೂ ಈ ಕಂಪೆನಿಯಲ್ಲಿನ ಪ್ರವರ್ತಕರ ಭಾಗಿತ್ವವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಕ್ಷೀಣಿಸುತ್ತಿರುವುದು ಆತಂಕಕಾರಿ ವಿಷಯವಾಗಿದ್ದು ಜೂನ್ 10,ರ ತ್ರೈಮಾಸಿಕದಲ್ಲಿ ಶೇ. 17.88 ರಷ್ಟಿದ್ದ ಪ್ರವರ್ತಕರ ಭಾಗಿತ್ವವು ಸೆಪ್ಟೆಂಬರ್ ಅಂತ್ಯಕ್ಕೆ ಶೇ. 10.52ಕ್ಕೆ ಇಳಿದು ಡಿಸೆಂಬರ್ ಅಂತ್ಯದಲ್ಲಿ ಕೇವಲ ಶೇ. 4.62 ಮಾತ್ರವಿದ್ದು ಶೇ. 94.81 ಭಾಗ ಸಾರ್ವಜನಿಕರಲ್ಲದ್ದು ವಿತ್ತೀಯ ಸಂಸ್ಥೆಗಳ ಭಾಗಿತ್ವವು ಸಹ ಕರಗುತ್ತಾ ಬಂದಿದೆ. ಕಳೆದ ಶುಕ್ರವಾರ ಕಂಡ ಭಾರಿ ಮಾರಾಟದ ಒತ್ತಡ, ವಹಿವಾಟಾದ ಷೇರಿನ ಸಂಖ್ಯಾ ಗಾತ್ರ ಹಾಗೂ ವಾರ್ಷಿಕ ಕನಿಷ್ಠ ಮಟ್ಟವು, ಈ ಷೇರನ್ನು ‘ಬ್ರಾಂತು ಲೋಕದ ಜಂತು’ವನ್ನಾಗಿಸಿದೆಯೇ ಎಂಬ ಅನುಮಾನಕ್ಕೆಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT