ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಇಲಾಖೆ ವ್ಯವಹಾರ ಪ್ರಕ್ರಿಯೆ ಸರಳೀಕರಣಕ್ಕೆ ಚಿಂತನೆ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಾರ್ಮಿಕ ಇಲಾಖೆಯೊಂದಿಗೆ ವ್ಯವಹರಿಸಲು ಇದೀಗ ಹಲವು ಹಲವು ಅರ್ಜಿ, ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿದ್ದು, ಬರುವ ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಿಸಲಾಗುವುದು~ ಎಂದು ರಾಜ್ಯ ಕಾರ್ಮಿಕ ಇಲಾಖೆಯ ಆಯುಕ್ತ  ಎಸ್.ಆರ್. ಉಮಾಶಂಕರ್ ಪ್ರಕಟಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ನಗರದಲ್ಲಿ ಮಂಗಳವಾರ ವಿವಿಧ ಕಂಪೆನಿಗಳ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಿಗೆ ಏರ್ಪಡಿಸಿದ್ದ `ಕಾರ್ಮಿಕ ಕಾನೂನುಗಳ ಮಹತ್ವ ಮತ್ತು ಲಾಭಗಳು~ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

`ಹಲವಾರು ಕಾರ್ಮಿಕ ಕಾಯ್ದೆಗಳ ಸರಳೀಕರಣಕ್ಕೆ  ಅಖಿಲ ಭಾರತ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿದ ಮಾದರಿಯಲ್ಲೇ ರಾಜ್ಯದಲ್ಲೂ ಸಮಿತಿ ರಚಿಸಲಾಗಿತ್ತು. ಸಮಿತಿ ಶಿಫಾರಸುಗಳ ಬಳಿಕ ಪ್ರಮುಖ 6 ಕಾಯ್ದೆಗಳ ಅಡಿಯಲ್ಲಿ ಎಲ್ಲ ಕಾಯ್ದೆಗಳನ್ನು ತರಲು ಯೋಜಿಸಲಾಗಿದೆ. ಈ ಕುರಿತ ಕಡತಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅನುಮೋದನೆ ನೀಡಿದ್ದಾರೆ~ ಎಂದರು.

`ಇಲಾಖೆಯ  ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ದೊರಕುವಂತೆ ಮಾಡುವುದೂ ನಮ್ಮ ಉದ್ದೇಶವಾಗಿದೆ~ ಎಂದು ಹೇಳಿದರು.`ಕಾರ್ಮಿಕ ಕಾನೂನುಗಳು ನಿರ್ಲಕ್ಷ್ಯದಿಂದ ಉಲ್ಲಂಘನೆ ಆಗುವ ಪ್ರಕರಣಗಳು ಕಂಡು ಬರುತ್ತಿವೆ. ಕಾಯ್ದೆಗಳು ಇರುವುದು ಕಾರ್ಮಿಕರ ಸಂರಕ್ಷಣೆಗೇ ಹೊರತು ಇನ್ನಾವುದೇ ಉದ್ದೇಶಕ್ಕಲ್ಲ.

ಆದ್ದರಿಂದ ಕಾಯ್ದೆಯನ್ವಯವೇ ಕೆಲಸ ನಿರ್ವಹಿಸಬೇಕು~ ಎಂದರು. ಎಫ್‌ಕೆಸಿಸಿಐ ಉಪಾಧ್ಯಕ್ಷ ಕೆ.ಶಿವಷಣ್ಮುಗಂ, ಸಂಸ್ಥೆಯ ಕೈಗಾರಿಕಾ ಸಂಬಂಧಗಳ ಸಮಿತಿಯ ಅಧ್ಯಕ್ಷೆ ರಾಜ್ ಭಾಸಿನ್, ಎಚ್‌ಆರ್ ರೆಸೊನನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮ್ ಕೆ.ನವರತ್ನ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT