ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಎರಡು ಕಲೆ ನೂರು

ಪಿಕ್ಚರ್ ಪ್ಯಾಲೆಸ್
Last Updated 15 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ಮಟ್ಟದ `ಸಂಭ್ರಮ ಫ್ಯಾಷನ್ ಶೋ 2013'ರಲ್ಲಿ ವಿದ್ಯಾರ್ಥಿಗಳು ಮಾಡ್ ಹಾಗೂ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರೆ, ಅರಮನೆ ರಸ್ತೆಯಲ್ಲಿರುವ ಸರ್ಕಾರಿ ಆರ್.ಸಿ. ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವದಲ್ಲಿ  ವಿದ್ಯಾರ್ಥಿಗಳು ದೇಸಿ ಉಡುಪಿನಲ್ಲಿ ಕಂಗೊಳಿಸಿದರು.

ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಕಣ್ಣುಕುಕ್ಕುವ ವಸ್ತ್ರ ಧರಿಸಿ ರ‌್ಯಾಂಪ್‌ವಾಕ್ ಮಾಡಿ, ಬಾಗಿ ಬಳುಕಿ ನಿಂತು ಪೋಸುಕೊಟ್ಟು ಎಲ್ಲರಿಂದ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು. ಹಾಗೆಯೇ ಮೈನವಿರೇಳಿಸುವ ನೃತ್ಯ ಮಾಡಿ ಶಹಬ್ಬಾಸ್‌ಗಿರಿ ಪಡೆದುಕೊಂಡರು. ಇನ್ನೂ ಆರ್.ಸಿ. ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಇಳಕಲ್ ಸೀರೆ ಉಟ್ಟು ಮುದ್ದು ಮುದ್ದಾಗಿ ಕಾಣಿಸಿಕೊಂಡರೆ, ಮತ್ತೆ ಕೆಲವರು ವೀರಗಾಸೆ, ಸೋಮನ ಕುಣಿತ, ಪಟ್ಟದ ಕುಣಿತದಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT