ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಹುಬ್ಬಳ್ಳಿ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆತಿಥೇಯ ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್ `ಎ~ ತಂಡ ನಗರದ ಸೆಟ್ಲ್‌ಮೆಂಟ್ ಮೈದಾನದಲ್ಲಿ ನಡೆದಿರುವ ಅಂತರ ರಾಜ್ಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ 6-2ರ ಅಂತರದಿಂದ ಮೈಸೂರು ತಂಡವನ್ನು ಪರಾಭವಗೊಳಿಸಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆ ಪಡೆಯಿತು.

ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್ `ಎ~ ತಂಡದ ಪರ  ರಾಕೇಶ್ ಗೋಕಾಕ್ (3 ಮತ್ತು 57ನೇ ನಿಮಿಷ), ಬಿಜ್ಜು ಯರಕಲ್ (21 ಮತ್ತು 59), ರಾಘು ಕೊರವರ (38) ಹಾಗೂ ಮೈಲಾರಿ (47) ಗೋಲು ಬಾರಿಸಿದರೆ, ಮೈಸೂರು ತಂಡದ ಪರ ಸುಗು ಚೆಂಗಪ್ಪ (29) ಮತ್ತು ಧನ್ವಂತರಿ (48) ಈ ಸಾಧನೆ ಮಾಡಿದರು. ಆತಿಥೇಯ ತಂಡಕ್ಕೆ ಹತ್ತು ಮತ್ತು ಮೈಸೂರು ತಂಡಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್‌ಗಳು ಲಭ್ಯವಾದವು.

ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್ `ಎ~ ತಂಡದ ಪರವಾಗಿ ರಾಕೇಶ್ ಗೋಕಾಕ್, ರಾಘು ಕೊರವರ, ಬಿಜ್ಜು ಯರಕಲ್, ಮೈಲಾರಿ, ಮಿಥುನ್ ಬಿಜವಾಡ, ಸಹದೇವ ಯರಕಲ್ ಅತ್ಯುತ್ತಮ ಹೊಂದಾಣಿಕೆ ಆಟವನ್ನು ಪ್ರದರ್ಶಿಸಿದರು.

ಮೈಸೂರು, ಕೊಲ್ಲಾಪುರದ ಎಂಕೆಎಂ, ಯಂಗ್ ಸ್ಪೋರ್ಟ್ಸ್ ಕ್ಲಬ್ `ಬಿ~, ವಾಸು ಇಲೆವನ್, ಬಾಗಲಕೋಟೆ, ಗದಗ ಮತ್ತು ಕೊಲ್ಲಾಪುರದ ಚಾವಾ  ತಂಡಗಳು ಕ್ವಾರ್ಟರ್ ಫೈನಲ್‌ಗೆ ಮುನ್ನಡೆದವುಗದಗಿನ ಹನುಮಾನ್ ಬ್ಲೆಸ್ಸಿಂಗ್ಸ್ ಸ್ಪೋರ್ಟ್ಸ್ ಕ್ಲಬ್ ತಂಡ 2-1ರಿಂದ ಬಾಗಲಕೋಟೆ ತಂಡವನ್ನು ಪರಾಭವಗೊಳಿಸಿದರೆ, ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್ `ಬಿ~ ತಂಡ 8-0ಯಿಂದ ಕೊಲ್ಲಾಪುರ ತಂಡದ ವಿರುದ್ದ ಜಯ ಸಾಧಿಸಿತು. ಬಾಗಲಕೋಟೆ ತಂಡ 1-0ಯಿಂದ ಕೋಲಾರ ತಂಡದ ಮೇಲೆ ಜಯ ಸಾಧಿಸಿತು.

ಶನಿವಾರ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್ `ಎ~ ತಂಡ ತನ್ನದೇ `ಬಿ~ ತಂಡವನ್ನು; ಮೈಸೂರು ತಂಡ ಕೊಲ್ಲಾಪುರದ ಎಂಕೆಎಂ ತಂಡವನ್ನು; ವಾಸು ಇಲೆವನ್ ತಂಡ ಬಾಗಲಕೋಟೆ ತಂಡವನ್ನು ಮತ್ತು ಕೊಲ್ಲಾಪುರದ ಚಾವಾ ತಂಡ ಗದಗಿನ ಹನುಮಾನ್ ಬ್ಲೆಸ್ಸಿಂಗ್ಸ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಎದುರಿಸಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT