ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗಳ ಹೆಸರಲ್ಲಿ ವಿದ್ಯಾಸಂಸ್ಥೆಗೆ ನಿರ್ಧಾರ

Last Updated 4 ಜುಲೈ 2012, 5:35 IST
ಅಕ್ಷರ ಗಾತ್ರ

ಅಣ್ಣಿಗೇರಿ: ಗುರುಗಳ ಹೆಸರಿನಲ್ಲಿ ವಿದ್ಯಾಸಂಸ್ಥೆಯೊಂದನ್ನು ಆರಂಭಿಸ ಲಾಗುವುದು ಎಂದು ಪ್ರಕಟಿಸುವ ಮೂಲಕ ಮಾತೋಶ್ರೀ ನಿಂಗಮ್ಮ ಎಸ್. ಹೂಗಾರ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಗೌರವ ಕಾರ್ಯಾಧ್ಯ ಕ್ಷರೂ ಆದ ಕಾರ್ಪೋರೇಶನ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಸ್.ಹೂಗಾರ ತಮ್ಮ ಗುರುಭಕ್ತಿಯನ್ನು ಮೆರೆದರು.
ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ಸಂವಾದ ಹಾಗೂ ವಿದ್ಯಾರ್ಥಿ ಗಳಿಗೆ ನೋಟ್‌ಬುಕ್ ವಿತರಣಾ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಬಡತನದಲ್ಲೇ ಬಾಳಿದರೂ ಶಿಕ್ಷಕ ವೃತ್ತಿಗೆ ತಮ್ಮ ಜೀವವನ್ನೇ ಧಾರೆ ಎರೆದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸಾಸ್ವಿ ಹಳ್ಳಿಯ ಬಿ.ಎಸ್.ಶಿವಶಿಂಪಿಗೇರ ಹೆಸರಿ ನಲ್ಲಿ ಪೂರ್ವ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಹಾಗೂ ಡಾ. ಡಿ.ಬಿ.ಕೆರೂರ ಹೆಸರಿನಲ್ಲಿ ಇನ್ಸ್‌ಟಿಟ್ಯೂಟ್ ಆಫ್ ಮ್ಯೋನೇಜ್‌ಮೆಂಟ್ ಫಾರ್ ಹೈಯರ್ ಸ್ಟಡೀಸ್ ಸಂಸ್ಥೆಯನ್ನು ಆರಂಭಿಸಲಾಗುವುದು ಎಂದು ಹೂಗಾರ ಘೋಷಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಗ್ರಾಮೀಣ ಭಾಗದ ಹಿಂದುಳಿದ, ದುರ್ಬಲ ಹಾಗೂ ದಲಿತ ವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಇಬ್ಬರು ಹಿರಿಯ ನಾಗರಿಕರಿಗೆ ವರ್ಷದ ಗುರುಮಾತೆ, ಗುರುಪಿತಾ ಎಂಬ ಬಿರುದಿನೊಂದಿಗೆ ರೂ 25 ಸಾವಿರ ನೀಡಿ ಸತ್ಕರಿಸಲಾಗುವುದು ಎಂದು ಅವರು ತಿಳಿಸಿದರು.

ಶಾಸಕ ಮೋಹನ ಲಿಂಬಿಕಾಯಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್‌ನ ಬಿ.ಎಸ್.ಮಂಜುನಾಥ, ಸಿಂಡಿಕೇಟ್ ಬ್ಯಾಂಕ್‌ನ ಸುಧೀರ ಕಿಣಿ, ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಎಂ. ಪರಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರ್ಯ, ಡಾ. ವಿ.ವಿ.ಹೆಬ್ಬಳ್ಳಿ, ಡಾ.ಎಂ.ಬಿ.ಪಾಟೀಲ ಮುನೇನೊಪ್ಪ ಮತ್ತಿತರರು ಅತಿಥಿ ಗಳಾಗಿ ಪಾಲ್ಗೊಂಡಿದ್ದರು. ಹೂಗಾರ ಅವರ ಮಾತೃ ಪ್ರೇಮ, ಗುರುಭಕ್ತಿ, ಜನ್ಮಭೂಮಿ ಮೇಲಿನ ಕಳಕಳಿಯನ್ನು ಅವರು ಶ್ಲಾಘಿಸಿದರು.

ಪ್ರತಿಷ್ಠಾನದಿಂದ ಬಡ ವಿದ್ಯಾರ್ಥಿ ಗಳಿಗೆ 1,200 ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಡಾ. ಎಂ.ಬಿ. ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಮುಖ್ಯ ಧರ್ಮದರ್ಶಿ ಶೋಭನಾ ಹೂಗಾರ ವರದಿ ಮಂಡಿಸಿದರು. ಸಾವಿತ್ರಿ ಮಹಿಷಿ, ಸುರೇಶ ಶೇಜವಾಡಕರ, ಎಂ.ವಿ. ರೇವಣಕರ, ವೀರಣ್ಣ ಚಕ್ಕಿ, ಎಸ್.ಬಿ. ಮುಮ್ಮಿಗಟ್ಟಿ, ಮಲ್ಲಿಕಾರ್ಜುನ ಹೂಗಾರ, ನಮತಾ ಸತೀಶ್ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.
ಚಂಬಣ್ಣ ಹುಬ್ಬಳ್ಳಿ ಸ್ವಾಗತಿಸಿದರು. ಪ್ರೊ. ಎಸ್.ಎಸ್.ಹರ್ಲಾಪುರ ನಿರೂ ಪಿಸಿದರು. ದೇಸಾಯಿ ವಂದಿಸಿದರು.

ಅಲಂಕಾರ: ಚಿಂತನ ಗೋಷ್ಠಿ
ಧಾರವಾಡ: ನಗರದ ಸಿಎಲ್‌ವೈ ಸಂಸ್ಕೃತಿ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಲಂಕಾರ ಶಾಸ್ತ್ರ ಚಿಂತನಗೋಷ್ಠಿ ಕಾರ್ಯ ಕ್ರಮ ವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಸಹಪ್ರಾಧ್ಯಾಪಕ ಪ್ರಕಾಶ ಪಾಗೋಜಿ, `ಆನಂದವರ್ಧನನ ಧ್ವನಿ ಸಿದ್ಧಾಂತಿ~ ವಿಷಯದ ಕುರಿತು ಪ್ರಬಂಧ ಮಂಡಿಸಿದರು. 

 ಸಂಸ್ಕೃತಿ ವಿಶ್ವವಿದ್ಯಾಲಯದ ಸಿಂಡಿ ಕೇಟ್ ಸದಸ್ಯ ಡಾ.ಜಯತೀರ್ಥಾ ಚಾರ್ಯ ಮಳಗಿ ಹಾಗೂ ಅಧ್ಯಾಪಕಿ ದ್ರಾಕ್ಷಾ ಯಣಿ ಹಾಗೂ ಕಾಲೇಜಿನ ಪ್ರಾಚಾರ್ಯ ಶ್ರೀಧರಶಾಸ್ತ್ರಿ ಇನಾಮ ದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT