ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಗ್ರಹಣದ ವಿರುದ್ಧ ಫತ್ವಾ

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಛಾಯಾ ಗ್ರಹಣವು (ಫೋಟೋಗ್ರಫಿ) ‘ಕಾನೂನು ಮತ್ತು ಧರ್ಮ ವಿರೋಧಿ’ ಎಂದು ಅಭಿಪ್ರಾಯ ಪಟ್ಟಿರುವ ಭಾರತದ ಪ್ರಮುಖ ಇಸ್ಲಾಂ ಉನ್ನತ ಶಿಕ್ಷಣ ಸಂಸ್ಥೆಯಾದ ದಾರುಲ್‌ ಉಲೂಮ್‌, ಅದರ ವಿರುದ್ಧ ಫತ್ವಾ ಹೊರಡಿಸಿದೆ.

ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾದ ಒಳಗಡೆ ಛಾಯಾ­ಚಿತ್ರ ಗಳನ್ನು ತೆಗೆಯಲು ಮತ್ತು ಅಲ್ಲಿ ನಡೆ ಯುವ ಸಾಮೂಹಿಕ ಪ್ರಾರ್ಥನೆಯ ನೇರ ಪ್ರಸಾರಕ್ಕೆ ಸೌದಿ ಅರೇಬಿಯಾ ಸರ್ಕಾರ ಅವಕಾಶ ನೀಡುತ್ತಿರುವಾಗ ದಾರೂಲ್‌ ಉಲೂಮ್‌ ಛಾಯಾ ಗ್ರಹಣಕ್ಕೆ ನಿರ್ಬಂಧ ಹೇರಿದೆ.

ಸುದ್ದಿಸಂಸ್ಥೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ದಾರುಲ್‌ ಉಲೂಮ್‌ ದೇವ್‌ಬಂದ್‌ನ ಕುಲಪತಿ ಮುಫ್ತಿ ಅಬ್ದುಲ್‌ ಖಾಸೀಮ್ ನೊಮಾನಿ, ‘ಛಾಯಾಗ್ರಹಣ ಇಸ್ಲಾಂ ವಿರೋಧಿ­.  ಗುರುತು ಪತ್ರ ಅಥವಾ ಪಾಸ್‌ಪೋರ್ಟ್ ಮಾಡಿಸಿ­ಕೊಳ್ಳಲು ಛಾಯಾಚಿತ್ರ ತೆಗೆಯಬಹು­ದಷ್ಟೇ ಹೊರತು, ಬೇರೆ ಯಾವ ಕಾರಣಕ್ಕೂ ಮುಸ್ಲಿಮರು ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುವಂತಿಲ್ಲ’ ಎಂದರು.

ಮುಂದಿನ ಪೀಳಿಗೆಯವರನೆನಪಿಗಾಗಿ  ಮದುವೆ ಸಮಾರಂಭಗಳ ವಿಡಿಯೊ ಚಿತ್ರೀಕರಣ ಅಥವಾ ಛಾಯಾ ಚಿತ್ರ­ಗಳನ್ನು ತೆಗೆಯುವುದಕ್ಕೆ ಇಸ್ಲಾಂ ಅವಕಾಶ ನೀಡುವುದಿಲ್ಲ ಎಂದೂ ಅವರು ತಿಳಿಸಿದರು.

ಇಸ್ಲಾಂನ ಮೂಲಭೂತ ತತ್ವಗಳನ್ನು ಪಾಲಿಸುವ ಸೌದಿ ಅರೇಬಿಯಾವು ಮೆಕ್ಕಾದಲ್ಲಿ ಚಿತ್ರೀಕರಣ ಮತ್ತು ಛಾಯಾಚಿತ್ರ ತೆಗೆಯುವುದಕ್ಕೆ ಅವಕಾಶ ನೀಡುತ್ತಿದೆಯಲ್ಲಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದನೊಮಾನಿ, ‘ಅವರು ಅವಕಾಶ ನೀಡಲಿ. ನಾವು ನೀಡುವುದಿಲ್ಲ. ಅವರು ಮಾಡುವುದೆಲ್ಲಾ ಸರಿ ಅಲ್ಲ’ ಎಂದು ಪ್ರತಿಕ್ರಿಯಿಸಿದರು.

ಛಾಯಾಗ್ರಹಣದ ಬಗ್ಗೆ ಆಸಕ್ತಿ­ಯುಳ್ಳ ಎಂಜಿನಿಯರಿಂಗ್‌ ಪದವೀಧರ­ನೊಬ್ಬ, ಛಾಯಾಗ್ರಹಣವನ್ನು ವೃತ್ತಿಯ­ನ್ನಾಗಿ ಆರಿಸಿಕೊಳ್ಳಬಹುದೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ದಾರುಲ್‌ ಉಲೂಮ್‌ ದೇವ್‌ಬಂದ್ ಅದರ ವಿರುದ್ಧ ಫತ್ವಾ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT