ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಗತ್ತಿನ ಜ್ಞಾನ ಭಂಡಾರ ದೇಶದಲ್ಲಿದೆ'

Last Updated 7 ಸೆಪ್ಟೆಂಬರ್ 2013, 6:21 IST
ಅಕ್ಷರ ಗಾತ್ರ

ಶಿಗ್ಗಾವಿ: ಜಗತ್ತಿನ ಸಾಧನಕಾರರ ಪಟ್ಟಿ ಯಲ್ಲಿ ಉನ್ನತ ಸಾಧನೆ ಮಾಡಿದ್ದು, ಭಾರತೀಯರು ಎಂಬುದನ್ನು ಮರೆಯು ವಂತಿಲ್ಲ. ಹೀಗಾಗಿ ಜ್ಞಾನದ ಭಂಡಾರ, ಜ್ಞಾನದ ಖನಿಜ ಎಂದೇ ಭಾರತ ದೇಶ ಖ್ಯಾತಿಯಾಗಲು ಸಾಧ್ಯವಾಗಿದೆ. ಅದಕ್ಕೆ ರಾಧಾಕೃಷ್ಣನ್ ಅವರಂತಾ ಶಿಕ್ಷಕರ ಪ್ರಾಮಾಣಿಕ ಕಾಯಕವೇ ಕಾರಣ ಎಂದು ಶಾಸಕ ಬಸವರಾಜ ಬೊಮ್ಮಾಯಿ  ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಗುರು ವಾರ ನಡೆದ ಡಾ.ಸರ್ವಪಲ್ಲಿ ರಾಧಾ ಕೃಷ್ಣನ್‌ರವರ 125ನೇ ಜನ್ಮ ದಿನಾ ಚರಣೆ, ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು , ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು, ಶುಶ್ರೂಷಕರು ಹಾಗೂ ವಾಹನ ಚಾಲಕರು ತಮ್ಮ ಕಾಯಕದಲ್ಲಿ ನಿತ್ಯ ಪರಿಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷ ಕರ, ಗಂಗಮ್ಮ ಬೊಮ್ಮಾಯಿ ಟ್ರೆಸ್ಟ್, ಶಿಕ್ಷಣ ಇಲಾಖೆಯಿಂದ ಉತ್ತಮ  ಶಿಕ್ಷ ಕರ ಪ್ರಶಸ್ತಿ ಪ್ರರಸ್ಕಾರ ನೀಡಿ ಸನ್ಮಾನಿ ಸಲಾಯಿತು.

ವಿಧಾನ ಪರಿಷತ್ ಸದಸ್ಯ ಸೋ ಮಣ್ಣ ಬೇವಿನಮರದ, ಸಂಗನಬಸವ ಶ್ರೀಗಳು, ಶಿಕ್ಷಕ ವಿಷ್ಣು ಪಟಗಾರ ಮಾತನಾಡಿದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ತಾ.ಪಂ.ಅಧ್ಯಕ್ಷೆ ಉಷಾ ಬಿಳೇಕುದರಿ, ಜಿ.ಪಂ. ಸದಸ್ಯರಾದ ಬಿ.ಟಿ.ಇನಾಮತಿ, ಸಿ.ಎಸ್.ಪಾಟೀಲ, ಸರೋಜಾ ಆಡಿನ, ಶಶಿಧರ ಹೊನ್ನಣ್ಣ ವರ, ತಾ.ಪಂ.ಸದಸ್ಯರಾದ ತಿಪ್ಪಣ್ಣ ಸಾತಣ್ಣವರ, ಲಕ್ಷ್ಮಿ ತೋಟದ, ಪರಿಧಾ ಬಾನು ಶೇಕಸನದಿ, ನಿಂಗಪ್ಪ ಹರಿಜನ, ಎಪಿಎಂಸಿ ಸದಸ್ಯ ಶಿವಾನಂದ ಮ್ಯಾಗೇ ರಿ, ದೈಹಿಕ ಶಿಕ್ಷಣಾಧಿಕಾರಿ ಬಿ.ಎಸ್. ಪಟ್ಟಣಶೆಟ್ಟಿ,  ಅಕ್ಷರ ದಾಸೋಹ ಅಧಿಕಾರಿ ರವಿ ಶೆಟ್ಟೆಪ್ಪ ನವರ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

`ರಾಧಾಕೃಷ್ಣರ ಆದರ್ಶ ಮೈಗೂಡಿಸಿಕೊಳ್ಳಿ'
ರಾಣೆಬೆನ್ನೂರು:
ಎಲ್ಲಾ ಶಿಕ್ಷಕ ಸಂಘ ಟನೆಯವರು ಸಮನ್ವಯತೆ ಯಿಂದ ಸಮುದಾಯದ ಹಿತವನ್ನು ರಕ್ಷಿಸುವು ದರ ಜೊತೆಗೆ ಡಾ.ರಾಧಾಕೃಷ್ಣ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆದಾಗ ನಾವು ಇಂದು ಆಚರಿಸುವ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ತಾಲೂಕಾ ಪ್ರೌಢ ಶಾಲಾ ಶಿಕ್ಷಕರ ವೇದಿಕೆ ವತಿಯಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜವನ್ನು ರೂಪಿಸುವ ಗುರು ತರ ಹೊಣೆಗಾರಿಕೆ ಇರುವ ಶಿಕ್ಷಕರು ಸಮಾಜದಿಂದ ಉತ್ತಮ ಪ್ರಗತಿಪರ ಪ್ರತಿಕ್ರಿಯೆಯನ್ನು ಬಯಸುತ್ತಾರೆ ಎಂದರು.ಡಾ.ಚಂದ್ರಶೇಖರ ಕೇಲಗಾರ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಡಿ.ಹೊಂಬರಡಿ, ಎಸ್. ಎಂ.ಮುಂಡರಗಿ, ನಾಗರಾಜ ಕಟ್ಟಿ ಮನಿ, ಎಚ್.ಎಂ.ನಂದಿಹಳ್ಳಿ ಮಾತ ನಾಡಿದರು. 

ಇದೇ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕ ಚನ್ನಬಸಯ್ಯ, ಎಚ್.ಎಫ್.ಚಾವಡಿ, ರಮೇಶ ಚಲ ವಾದಿ, ಮಾಲತೇಶ ಹೊಸಳ್ಳಿ, ರಮೇಶ ಕಾಳೆ, ಲಕ್ಷ್ಮಿ .ಬಿ.ಸಣ್ಣಮನಿ, ಎಸ್.  ಎಚ್.ಕಮ್ಮೋರ, ಕೆ.ಆರ್ ಚನ್ನಗೌಡ್ರ, ಎಸ್.ಎನ್.ಬ್ಯಾಲಹುಣಸಿ, ಎನ್. ಎಂ.ಕರಬಣ್ಣನವರ, ಸಿ.ಎ.ಹೊಸಮನಿ ಅವರನ್ನು ಸನ್ಮಾನಿಸಿದರು.

ಆರ್.ಎಸ್.ಪಾಟೀಲ, ಸಿ.ಆರ್. ನಾಸಿಪುರ, ವಸಂತ ಚೌಹಾಣ, ಆರ್. ಎ.ಬಿಸೆಂಬ್ಲಿ, ಗಾಣಿಗೇರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT