ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜ್ಞಾನದಿಂದ ವ್ಯಕ್ತಿತ್ವ ಬದಲಾವಣೆ'

Last Updated 6 ಏಪ್ರಿಲ್ 2013, 5:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಶ್ರದ್ಧೆ ಹಾಗೂ ಪರಿಶ್ರಮದಿಂದ ಜ್ಞಾನ ಸಂಪಾದನೆ ಮಾಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಅಧ್ಯಾಪಕರ ಮೇಲೆ ಅವಲಂಬಿಸಿದೆ. ಜ್ಞಾನಕ್ಕೆ ಸಮನಾದ ವಸ್ತು ಇನ್ನೊಂದಿಲ್ಲ' ಎಂದು ಮಹಾಂತೇಶ ಬೀಳಗಿ ಹೇಳಿದರು.

ಕೆ.ಎಲ್.ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕ್ರೀಡಾ ಚಟುವಟಿಕೆಗಳ ಹಾಗೂ ವಿವಿಧ ಸಂಘಗಳ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ‌್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು `ಜ್ಞಾನ ಇಲ್ಲದಿದ್ದರೆ ಏನು ಸಿಗುವುದಿಲ್ಲ, ಜ್ಞಾನ ಎಲ್ಲಕ್ಕೂ ಮೂಲ ಇದರಿಂದ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಬೇಕು. ಸಾಧನೆ ಸಿದ್ಧಿಗಾಗಿ ನಮ್ಮ ಬದುಕನ್ನು ಮೆಟ್ಟಿ ನಿಲ್ಲಬೇಕು ಆಗ ಯಶಸ್ಸು ಖಂಡಿತ ಸಿಗುತ್ತದೆ. ಮನುಷ್ಯ ನಿಂತ ನೀರಾಗದೇ, ಹರಿಯುವ ನೀರಾಗಬೇಕು' ಎಂದು ಹೇಳಿದರು.

ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಸುರೇಶ ಚೆನ್ನಿಯವರ ಮಾತನಾಡಿ `ಜೀವನ ಒಂದು ಸವಾಲು, ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಅಂದರೆ ತಮಗಿರುವ ಅವಕಾಶಗಳೆಂದು ತಿಳಿದುಕೊಂಡು ಕಷ್ಟಪಟ್ಟು ಓದದೇ ಇಷ್ಟ ಪಟ್ಟು ಓದಬೇಕೆಂದು' ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  ಸಮಾರಂಭದಲ್ಲಿ ಪ್ರಾಚಾರ್ಯ ಆನಂದ ಮುಳಗುಂದ, ಪದವಿ ಪೂರ್ವಪ್ರಾಚಾರ್ಯ ಎಸ್.ಎ.ಗಣಿ, ವಿ.ವಿ.ಪಾಟೀಲ, ವಿ.ಎನ್. ಹುದ್ದಾರ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಅನಿಸ ಖಾಜಿ, ನೀಶಾ ಬೆಂಡಿಗೇರಿ ಉಪಸ್ಥಿತರಿದ್ದರು. ಆನಂದ ಸ್ವಾಗತಿಸಿದರು. ಅನಿಸ ಖಾಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT