ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತ ತಪ್ಪಿಸಿದ ಚಿಲಿ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಂಬಾಲ, (ಪಿಟಿಐ): ಇಲ್ಲಿನ ದಂಡು ರೈಲು ನಿಲ್ದಾಣದ ಬಳಿ ಗುರುವಾರ ಭಾರಿ ಸ್ಫೋಟಕ ಪತ್ತೆ ಹಚ್ಚುವ ಮೂಲಕ ಉಗ್ರರು ನಡೆಸಲು ಉದ್ದೇಶಿಸಿದ್ದ ಪ್ರಮುಖ ದುಷ್ಕೃತ್ಯನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲ್ಯಾಬ್ರಡಾರ್ ನಾಯಿ `ಚಿಲಿ~ ಇದೀಗ ಪೊಲೀಸರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತ- ಟಿಬೆಟ್ ಗಡಿ ಪೊಲೀಸ್ ಪಡೆಯ ವಿಶೇಷ ಸ್ಫೋಟಕ ಪತ್ತೆ ತರಬೇತಿಪಡೆದಿದ್ದ 18 ತಿಂಗಳ ಈ ಕಪ್ಪು ನಾಯಿ, ಸ್ಫೋಟಕ ತುಂಬಿದ್ದ ಕಾರಿನತ್ತ ತನ್ನ ನಿರ್ವಾಹಕನನ್ನು ಎಳೆದು ತಂದಿತ್ತು. ಕಾಲುಗಳನ್ನು ಕಾರಿನ ಬಾನೆಟ್ ಮೇಲಿಟ್ಟು ಗಮನ ಸೆಳೆದಿತ್ತು.

ಚಿಲಿ ಕಾರಿನ ಬಳಿಯಿಂದ ಕದಲದೇ ಮಹತ್ವದ ಸುಳಿವು ದೊರೆಯಲು ಕಾರಣವಾಯಿತು. ಚಿಲಿ ಇದೀಗ ಹರಿಯಾಣ ಪೊಲೀಸರ ವಿಶೇಷ ಪುರಸ್ಕಾರಕ್ಕೂ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT