ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನತಾಲಿಯಾ ನಾಟ್ಯಾಂತರಂಗ

Last Updated 15 ಮೇ 2012, 19:30 IST
ಅಕ್ಷರ ಗಾತ್ರ

`ಐಟಂ ಹಾಡುಗಳೆಲ್ಲ ಅಶ್ಲೀಲವಾಗಿರುವುದಿಲ್ಲ. ಅವು ಕಲಾತ್ಮಕ ನೃತ್ಯ. ಅಲ್ಲಿಯೂ ನೃತ್ಯಾಂಗನೆಯರು ತಮ್ಮ ಪ್ರತಿಭೆಯನ್ನು ತೋರುವ ಅವಕಾಶವಿರುತ್ತದೆ...~ ಹೀಗೆಲ್ಲ ಒಂದೇ ಉಸುರಿಗೆ ಹೇಳುತ್ತಿರುವುದು ನತಾಲಿಯಾ ಕೌರ್.

ರಾಮ್‌ಗೋಪಾಲ್ ವರ್ಮಾ ಅವರ `ಡಿಪಾರ್ಟ್‌ಮೆಂಟ್~ ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕುವ ಮೂಲಕ ಬಾಲಿವುಡ್‌ನಲ್ಲಿ ಕಾಲಿಟ್ಟಿರುವ ಈ ನಟಿ ಮೂಲತಃ ರೂಪದರ್ಶಿ. ತರಬೇತಿ ಪಡೆದಿರುವ ಒಪೆರಾ ಹಾಡುಗಾರ್ತಿ. ಕಲಾವಿದೆ.

`ಯಾವುದೇ ನೃತ್ಯವೂ ಅಶ್ಲೀಲವಾಗಿರುವುದಿಲ್ಲ, ಕಲಾತ್ಮಕವಾಗಿರುತ್ತದೆ. ಒಂದು ನೃತ್ಯವನ್ನು ನೃತ್ಯವೆಂದು ಆನಂದಿಸದಿದ್ದರೆ ಅದು ಅಶ್ಲೀಲವೆನಿಸುತ್ತದೆ~ ಎನ್ನುವುದು ಇವರ ಫಿಲಾಸಫಿ.

ತಮಗೆ ಐಟಂ ಗರ್ಲ್ ಎಂದು ಕರೆಸಿಕೊಳ್ಳುವುದು ಇಷ್ಟವಿಲ್ಲ ಎಂದು ಗುಡುಗುವ ಈಕೆ, `ಐಟಂ ಎಂಬ ಶಬ್ದದಿಂದ ನನಗೇನೂ ಅನ್ನಿಸುವುದಿಲ್ಲ~ ಎಂದೂ ಮಾತು ಸೇರಿಸುತ್ತಾರೆ. ಈಕೆ ಗಣೇಶ್ ಆಚಾರ್ಯ ನೃತ್ಯ ಸಂಯೋಜನೆಯಲ್ಲಿ `ಧನ್ ಧನಾ ಧನ್~ ಹಾಡಿಗೆ ಹೆಜ್ಜೆ ಹಾಕಲಿದ್ದು, ಧರಮ್ ಸಂದೀಪ್, ಬಪ್ಪಿ ಲಹಿರಿ, ವಿಕ್ರಮ್ ನಾಗಿ ಸಂಗೀತ ನೀಡಿದ್ದಾರೆ.

`ಸುಮ್ಮನೆ ಹೀಗೆ ಬಂದು, ಪಡ್ಡೆ ಹುಡುಗರನ್ನು ರಂಜಿಸುವ ಹಾಡು ಇದಲ್ಲ. ಚಿತ್ರಕ್ಕೆ ಈ ಹಾಡಿನ ಅಗತ್ಯವಿದೆ. ಅರ್ಥಪೂರ್ಣವಾದ ಹಾಡಿದು. ಈ ಹಾಡಿನಿಂದಾಗಿ ಬಾಲಿವುಡ್‌ನಲ್ಲಿ ಹೊಸ ಅವಕಾಶಗಳೂ ದೊರೆಯಬಹುದು~ ಎಂಬುದು ಅವರ ನಿರೀಕ್ಷೆ.

ಇಪ್ಪತ್ತೊಂದು ವಯಸ್ಸಿನ ನತಾಲಿಯಾ ರೂಪದರ್ಶಿಯಾಗಿ ತಮ್ಮ ಕೆರಿಯರ್ ಆರಂಭಿಸಿದ್ದರು. ಕಿಂಗ್‌ಫಿಶರ್ ಕ್ಯಾಲೆಂಡರ್ ಕನ್ಯೆ ಎಂಬ ಹೆಗ್ಗಳಿಕೆಯೂ ಅವರದ್ದು. ರಾಮ್‌ಗೋಪಾಲ್ ವರ್ಮಾ ಬ್ಯಾನರ್‌ನ ಮುಂದಿನ ಚಿತ್ರದಲ್ಲಿ ಅವರು ಹಾಡನ್ನೂ ಹಾಡಲಿದ್ದಾರಂತೆ.

ಹಾಗೇಂತ ರಾಮ್‌ಗೋಪಾಲ್ ವರ್ಮಾ ನನ್ನ ಗಾಡ್‌ಫಾದರ್ ಏನಲ್ಲ. ಅವರು ನಿರ್ದೇಶಕರು. ನಾನು ಕಲಾವಿದೆ ಅಷ್ಟೆ. ಹಿಂದೆ ಊರ್ಮಿಳಾ ಮಾತೋಂಡ್ಕರ್, ಅಂತರಾಮಾಲಿ ಅವರನ್ನೆಲ್ಲ ಪರಿಚಯಿಸಿದರು ಅಂತ ಗೊತ್ತಿದೆ.

ಅಥವಾ ಅವರನ್ನು ಬಾಲಿವುಡ್‌ನಲ್ಲಿ ಸ್ಥಾಪಿಸಿದರು ಎಂತಲೂ ಹೇಳಬಹುದೇನೋ... ಆದರೆ ನಾನು ಹಾಡು ಹಕ್ಕಿ. ಹಾಡುವುದೇ ನನ್ನ ಮೊದಲ ಗುರಿ. ನೃತ್ಯ, ನಟನೆ ಎಲ್ಲವೂ ಆಮೇಲೆ ಬರುತ್ತದೆ.

ಸದ್ಯಕ್ಕೆ ನೃತ್ಯದ ಅವಕಾಶ ದೊರೆತಿದೆ. ಹಾಡಲು ಸಹ ಹೇಳಿದ್ದಾರೆ. ಆದರೆ ನಮ್ಮಿಬ್ಬರ ನಡುವೆ ನಿರ್ದೇಶಕ ಹಾಗೂ ಕಲಾವಿದೆಯ ನಡುವಿನ ಅಂತರ ಮಾತ್ರ ಕಾಯಂ ಆಗಿದೆ ಎಂದೂ ಸ್ಪಷ್ಟ ಪಡಿಸುತ್ತಾರೆ ನತಾಲಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT