ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣ್ಯ ಆರ್ಥಿಕತೆಯ ಪ್ರತೀಕ: ಪ್ರೊ. ಎವಿನ

Last Updated 20 ಸೆಪ್ಟೆಂಬರ್ 2011, 7:55 IST
ಅಕ್ಷರ ಗಾತ್ರ

ಮೈಸೂರು: ಆರ್ಥಿಕತೆಯ ಪ್ರತೀಕವಾಗಿ ನಾಣ್ಯ (ಹಣ) ಚಲಾವಣೆಯಲ್ಲಿದ್ದು, ಜನರಿಗೆ ನಾಣ್ಯದ ಕೊರತೆ ಬರಬಾರದು ಎಂದು ನಾಣ್ಯ ಶಾಸ್ತ್ರಜ್ಞ ಪ್ರೊ.ಎ.ವಿ. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಸೋಮವಾರ ಆಯೋಜಿಸಿದ್ದ ಶಾಸನ, ನಾಣ್ಯ, ಐತಿಹಾಸಿಕ ಅವಶೇಷಗಳ ಪ್ರದರ್ಶನ ಹಾಗೂ ಗೋಡೆ ಪತ್ರಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಬಂಗಾರ, ಬೆಳ್ಳಿ ನಾಣ್ಯಗಳು ಚಲಾವಣೆಯಲ್ಲಿದ್ದವು. ಅವು ಅಂದಿನ ಆರ್ಥಿಕ ಶ್ರೀಮಂತಿಕೆಯನ್ನು ತೋರಿಸುತ್ತವೆ. ಈಗ ಅಲುಮಿನಿಯಂ ನಾಣ್ಯ ಕೂಡ ವೆಚ್ಚದಾಯಕವಾಗಿದ್ದು, ಕಾಗದ ಹಣ ಬಳಕೆಗೆ ಬಂದಿದೆ. ನಾಣ್ಯ ಇತಿಹಾಸದ ಆಕರವಾಗಿದ್ದು, ರಾಜಕೀಯ, ಆರ್ಥಿಕ ಇತಿಹಾಸವನ್ನು ಅಧ್ಯಯನ ಮಾಡಲು ಸಹಕಾರಿ ಯಾಗಿದೆ. ಕಾಲದಲ್ಲೇ ಹುದುಗಿ ಹೋದ ಎಷ್ಟೋ ಮಾಹಿತಿಗಳು ನಾಣ್ಯಗಳಿಂದ ದೊರೆತಿವೆ. ಶಾತವಾಹನರು, ಕಲ್ಯಾಣಿ ಚಾಲುಕ್ಯರ ಕುರಿತು ನಾಣ್ಯಗಳು ನೀಡಿದ ಮಾಹಿತಿ ಇತಿಹಾಸಕ್ಕೆ ಹೊಸ ತಿರುವನ್ನು ನೀಡಿದೆ ಎಂದರು.

ನಾಣ್ಯ ಸಂಗ್ರಹ ಆರೋಗ್ಯಕರ ಹವ್ಯಾಸವಾಗಿದೆ. ಈ ಹವ್ಯಾಸ ರೂಢಿಸಿ ಕೊಂಡ ವ್ಯಕ್ತಿ ನಿರಂತರವಾಗಿ ಕಲಿಯು ತ್ತಾನೆ. ನಾಣ್ಯ ಸಂಗ್ರಹಕ್ಕಾಗಿ ಊರೂರು ಸುತ್ತಬೇಕಾಗುತ್ತದೆ. ಇತರರಿಗೆ ವಿವರಿಸಬೇಕಾಗುತ್ತದೆ. ಹೀಗಾಗಿ ಈ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಎಸ್.ಇಂದಿರಮ್ಮ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿ ಡಾ.ಬಿ.ಪಿ.ಇಂದಿರಾ ಉಪಸ್ಥಿತರಿದ್ದರು.

ಇತಿಹಾಸದ ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯದ ಮೂಲಕ ಉತ್ಖನನ ಮಾಡಿದ ಸೂಕ್ಷ್ಮ ಶಿಲಾಯುಗ, ನವ ಶಿಲಾಯುಗ, ಶಾತವಾಹನರ ಕಾಲದ ಶಾಸನ, ಐತಿಹಾಸಿಕ ಅವಶೇಷಗಳು ಹಾಗೂ ವಿವಿಧ ನಾಣ್ಯಗಳ ಛಾಯಾ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT