ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನ್ಯಾಕೆ ಕ್ಷಮೆ ಕೇಳಬೇಕು: ಗೇಲ್

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಜಾರ್ಜ್ ಟೌನ್, ಗಯಾನ (ಪಿಟಿಐ): `ನಾನೇನೂ ತಪ್ಪು ಮಾಡಿಲ್ಲ. ನಾನೇಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ (ಡಬ್ಲ್ಯುಐಸಿಬಿ) ಕ್ಷಮೆ ಕೇಳಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ವಿಂಡೀಸ್‌ನ ಆರಂಭಿಕ ಆಟಗಾರ ಕ್ರಿಸ್ ಗೇಲ್ ಹೇಳಿದ್ದಾರೆ.

ಗೇಲ್ ಕ್ಷಮೆ ಕೇಳಿದರೆ ಮಾತ್ರ ಅವರನ್ನು ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸುತ್ತೇವೆ ಎಂದು ಕೆಲ ದಿನಗಳ ಹಿಂದೆ ಕ್ರಿಕೆಟ್ ಮಂಡಳಿ ಹೇಳಿತ್ತು. ಆದ್ದರಿಂದ ಗೇಲ್ ಈ ಹೇಳಿಕೆ ನೀಡಿದ್ದಾರೆ.

ನನ್ನಿಂದ ಯಾವುದೇ ತಪ್ಪು ಆಗಿಲ್ಲ. ಆದರೂ ಮಂಡಳಿ ಕ್ಷಮೆಯಾಚಿಸುವಂತೆ ತಿಳಿಸಿದೆ. ಅದಕ್ಕೆ ನಿಖರವಾದ ಕಾರಣ ಹೇಳಬೇಕು. ಇಲ್ಲವಾದರೆ, ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಗೇಲ್ ಒತ್ತಾಯಿಸಿದ್ದಾರೆ.
`ಕ್ಷಮೆಯಾಚಿಸಬೇಕು ಎಂದು ಮಂಡಳಿ ಬಹಿರಂಗವಾಗಿ ಹೇಳಿದೆ. ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆದ್ದರಿಂದ ಕ್ಷಮೆ ಯಾಚನೆಯ ಕಾರಣ ತಿಳಿಸಬೇಕು. ಇದರಿಂದ ನಾನು ಸಾಕಷ್ಟು ಬೇಸತ್ತು ಹೋಗಿದ್ದೇನೆ.

ಡಬ್ಲ್ಯುಐಸಿಬಿ ನನ್ನೊಂದಿಗೆ `ಆಟ~ವಾಡುತ್ತಿದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.  `ಮಂಡಳಿ ಈ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತದೆ ಅದು ನನಗೆ ಗೊತ್ತಿಲ್ಲದ ವಿಚಾರ. ನಾನು ಕೇವಲ ನನ್ನ ಆಟದತ್ತ ಮಾತ್ರ ಗಮನ ಹರಿಸುತ್ತೇನೆ~ ಎಂದು ವಿಂಡೀಸ್‌ನ ಆರಂಭಿಕ ಆಟಗಾರ ತಿಳಿಸಿದ್ದಾರೆ.

ಕೇಲವೇ ದಿನಗಳಲ್ಲಿ ಈ ವಿವಾದಕ್ಕೆ ತೆರೆ ಬೀಳಲಿದೆ. ಕ್ಷಮೆ ಕೇಳುವ ವಿಚಾರ ಕುರಿತು ಗೇಲ್ ಹಾಗೂ ಮಂಡಳಿ ಜೊತೆ ಮಾತುಕತೆ ನಡೆಸಲಾಗುವುದು. ಮಂಡಳಿ ಸಹ ಇದಕ್ಕೆ ಸಹಕರಿಸಬೇಕು ಎಂದು ಕೆರಿಬಿಯನ್ ಮಾಧ್ಯಮ ಕಾರ್ಪೊರೇಟ್ ಸಂಸ್ಥೆ ತಿಳಿಸಿದೆ.

ವಿಂಡೀಸ್ ಮಂಡಳಿ ವಿರುದ್ಧ ಗೇಲ್ ಟೀಕೆ ಮಾಡಿದ್ದರು. ಆದ್ದರಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವಾಗ ಅವರನ್ನು ಪರಿಗಣಿಸಿರಲಿಲ್ಲ. ಇದರಿಂದ ಭಾರತ ತಂಡ ವಿಂಡೀಸ್ ಪ್ರವಾಸ ಕೈಗೊಂಡಾಗ ತವರು ನೆಲದಲ್ಲಿಯೇ ಗೇಲ್‌ಗೆ ತಂಡದಲ್ಲಿ ಸ್ಥಾನ ನೀಡಿರಲಿಲ್ಲ.

ಕ್ರಿಕೆಟ್ ಮಂಡಳಿ ಜೊತೆಗೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಕಾರಣ ಕೆರಿಬಿಯನ್ ನಾಡಿನ ಆಜಾನುಬಾಹು ಆಟಗಾರನಿಗೆ 2011ರ ವಿಶ್ವಕಪ್‌ನಲ್ಲಿಯು ಸಹ ಆಡಲು ಅವಕಾಶ ನೀಡಿರಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT