ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಟಿ, ಚಿಯರ್ ಗರ್ಲ್ಸ್ ನಿಷೇಧಿಸಲು ಚಿಂತನೆ

Last Updated 3 ಜೂನ್ 2013, 20:02 IST
ಅಕ್ಷರ ಗಾತ್ರ

ಮುಂಬೈ/ಕೋಲ್ಕತ್ತ (ಪಿಟಿಐ): ಐಪಿಎಲ್‌ನಲ್ಲಿ  `ಚಿಯರ್ ಗರ್ಲ್ಸ್' ನೃತ್ಯ ಹಾಗೂ ಪಂದ್ಯಗಳ ನಂತರ ನಡೆಯುವ ಪಾರ್ಟಿಗಳ ಮೇಲೆ ನಿಷೇಧ ಹೇರುವ ಸೂಚನೆಯನ್ನು ಬಿಸಿಸಿಐ `ಹಂಗಾಮಿ ಅಧ್ಯಕ್ಷ' ಜಗಮೋಹನ್ ದಾಲ್ಮಿಯ ನೀಡಿದ್ದಾರೆ.

ಕ್ರಿಕೆಟ್‌ಗೆ ಅಂಟಿಕೊಂಡಿರುವ ಕೊಳೆಯನ್ನು ತೊಳೆಯಬೇಕಾದರೆ ಪಂದ್ಯಗಳ ಬಳಿಕ ನಡೆಯುವ ಪಾರ್ಟಿಯನ್ನು ನಿಷೇಧಿಸುವುದು ಮುಖ್ಯ ಎಂದು ಕೋಲ್ಕತ್ತದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

`ಈಗ ತಲೆದೋರಿರುವ ಬಿಕ್ಕಟ್ಟಿಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ಮ್ಯಾಜಿಕ್ ಮಾಡಲು ನನಗೆ ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.

ನ್ಯಾಯಾಂಗ ಬಂಧನ: ಐಪಿಎಲ್‌ನಲ್ಲಿ ನಡೆದ ಬೆಟ್ಟಿಂಗ್‌ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ  ಮೇಯಪ್ಪನ್ ಮತ್ತು ವಿಂದು ರಾಂಧವ ಅವರಿಗೆ ಜೂನ್ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಬ್ಬರ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT