ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ಪೋರ್ಟ್:ಸರಳ,ತ್ವರಿತ ಸೇವೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

(ಹಿಂದಿನ ಸಂಚಿಕೆಯಿಂದ)
ಈ ಮೊದಲು ವಿವರಿಸಿದಂತೆ ಪಾಸ್‌ಪೋರ್ಟ್ ಕಚೇರಿ ಅಪಾಯಿಂಟ್‌ಮೆಂಟ್  ಪಡೆದ ಮೇಲೆ, ಅದರ ಮುದ್ರಿತ ಪ್ರತಿಯ ಜೊತೆಗೆ ಅರ್ಜಿದಾರನು ತನ್ನ ವಿಳಾಸ, ಹುಟ್ಟಿದ ದಿನಾಂಕ ಮುಂತಾದ ವಿವರಗಳನ್ನು ಸಾಬೀತು ಪಡಿಸುವ ಅಧಿಕೃತ ದಾಖಲೆಗಳೊಂದಿಗೆ (ಒಂದು ಜೆರಾಕ್ಸ್ ಪ್ರತಿಯ ಜೊತೆಗೆ) ನಿಗದಿಯಾಗಿರುವ ಸಮಯಕ್ಕೆ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಪ್ರವೇಶಿಸಬೇಕು.

ಅಲ್ಲಿ ಮೊದಲಿಗೆ  ಟೋಕನ್ ಕೌಂಟರ್‌ನಲ್ಲಿ ಅರ್ಜಿದಾರನು ತಂದಿರುವ ಎಲ್ಲಾ ದಾಖಲೆಗಳನ್ನೂ ಪರಿಶೀಲಿಸಿ ಇಲಾಖೆಯವರು ಒಂದು ಟೋಕನ್ ನಂಬರುಳ್ಳ ರಸೀತಿಯನ್ನು ಹಾಗೂ ಜೊತೆಗೆ ಅರ್ಜಿದಾರನ ಕಡತ ನೀಡುತ್ತಾರೆ. 

ಹಿರಿಯ ನಾಗರಿಕರು, ಅಂಗವಿಕಲರು ಹಾಗೂ 5 ವರುಷಕ್ಕಿಂತ ಕಡಿಮೆಯಿರುವ ಮಕ್ಕಳಿಗೆ ವಿಶೇಷ ಆದ್ಯತೆಯ ಮೇರೆಗೆ  ಸೇವೆ ಒದಗಿಸಲಾಗುತ್ತದೆ. ಅರ್ಜಿದಾರನ ಜೊತೆಗೆ ಸಾಮಾನ್ಯವಾಗಿ ಮತ್ತೊಬ್ಬ ಸಂಗಾತಿಯನ್ನು ಕರೆದೊಯ್ಯಲು ಮೊದಲಿಗೇ ಅನುಮತಿ ಪಡೆಯಬೇಕು.

ಆ ರಸೀತಿಯನ್ನು ತೋರಿಸಿ ಯಾಂತ್ರಿಕ ಪ್ರವೇಶದ್ವಾರದ ಮೂಲಕ  ಎ-ಕೌಂಟರ್‌ನ A-Cou­nters) ವಿಶಾಲವಾದ ಕೊಠಡಿಯನ್ನು ಪ್ರವೇಶಿಸ ಬೇಕಾಗುತ್ತದೆ.  ಅಲ್ಲಿ  ಸುಮಾರು 30 ರಿಂದ 40 ಕೌಂಟರ್‌ಗಲಿದ್ದು, ಪ್ರತಿಯೊಂದಕ್ಕೂ ಒಂದು ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಕಾಯುವಿಕೆ ಕೊಠಡಿಯಲ್ಲಿ ಟಿ.ವಿ. ಪರದೆಯ ಮೇಲೆ ಅರ್ಜಿದಾರರ ಟೋಕನ್ ಸಂಖ್ಯೆಯನ್ನಾಧರಿಸಿ ವಿವಿಧ ಕೌಂಟರ್‌ಗಳಿಗೆ, ಸರದಿಯ ಮೇಲೆ ತೆರಳಲು ಸೂಚನೆಗಳನ್ನು ನೀಡಲಾಗುತ್ತದೆ.
 
ಸೇವಾ ಕೇಂದ್ರದ ಸಿಬ್ಬಂದಿಯೂ ಸಹ, ಅರ್ಜಿದಾರರಿಗೆ ಈ ನಿಟ್ಟಿನಲ್ಲಿ ನೆರವಾಗುತ್ತಾರೆ. ಇಲ್ಲಿ ಸುಮಾರು 10 ನಿಮಿಷಗಳು ಕಾದಿದ್ದು, ನಂತರ ಸೂಚಿತ ಕೌಂಟರ್‌ಗೆ ಅರ್ಜಿದಾರನು ತನ್ನ ರ್ನೊಂದಿಗೆ ತಲುಪಬೇಕು. ಎ-ಕೌಂಟರಿನ ಸಿಬ್ಬಂದಿ ಅರ್ಜಿದಾರನು ತಂದಿರುವ ದಾಖಲೆಗಳನ್ನು ಪರಿಶೀಲಿಸಿ, ವಿಳಾಸ, ಹುಟ್ಟಿದ ದಿನಾಂಕದ ದಾಖಲೆಗಳನ್ನು ಸ್ಕಾನ್ (scan) ಮೂಲಕ ದಾಖಲಿಸಿಕೊಳ್ಳುತ್ತಾರೆ. ಜೊತೆಗೆ ಅರ್ಜಿದಾರನ ಭಾವಚಿತ್ರವನ್ನು ತಮ್ಮ ಕಂಪೂಟ್ಯರಿನಲ್ಲಿ ವೆಬ್-ಕ್ಯಾಮೆರಾ ಮೂಲಕ ದಾಖಲಿಸುತ್ತಾರೆ.(ಇಲ್ಲಿ ಹೆಣ್ಣು ಮಕ್ಕಳಿಗೆ ಒಂದಿಷ್ಟು ಟಿಪ್ಸ್: ಕೆದರಿದ ಕೂದಲನ್ನು ಸರಿಪಡಿಸಲು ಒಂದು ಬಾಚಣಿಗೆ ಹಾಗೂ ಬೆವರಿದ ಮುಖಕ್ಕೆ ಒಂದಷ್ಟು ಟಚಪ್ ನೀಡಲು ಸ್ವಲ್ಪ  ಪೌಡರ್ ಮುಂತಾದವು ಒಯ್ದಲ್ಲಿ ಅದರಿಂದ ತಮ್ಮ ಭಾವಚಿತ್ರ ಸೊಗಸಾಗಿ ಮೂಡಿಬರಲು ಸಹಕಾರಿಯಾಗುತ್ತದೆ. ವಿಳಂಬದಿಂದ ಕೌಂಟರ್ ಸಿಬ್ಬಂದಿ ಚಡಪಡಿಸಿದರೆ, ಅದನ್ನು ನಿಮ್ಮ ಮುಗುಳ್ನಗೆಯಿಂದ ಸರಿದೂಗಿಸಿ!).

ನಂತರ ಅರ್ಜಿದಾರನ ಕೈಬೆರಳುಗಳ ಅಚ್ಚುಗಳನ್ನೂ ಸಹ ಕಂಪ್ಯೂಟರಿನಲ್ಲಿ ದಾಖಲಿಸಿಕೊಳ್ಳುತ್ತಾರೆ. ಹೊಸದಾಗಿ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ಅಥವಾ ನವೀಕರಣಕ್ಕಾಗಿ ನಿಗದಿಯಾಗಿರುವ ಶುಲ್ಕವನ್ನು ಪಡೆದು (ರೂ 1000/- ನಿಗದಿಯಾಗಿದೆ) ರಸೀತಿ  (Fee ­Receipt)  ನೀಡುತ್ತಾರೆ. ಕೊನೆಯಲ್ಲಿ ಅವರ ಕಂಪ್ಯೂಟರಿನಲ್ಲಿ ದಾಖಲೆಯಾಗಿರುವ ಎಲ್ಲ ಮಾಹಿತಿಯನ್ನು ಅರ್ಜಿದಾರನು ಒಮ್ಮೆ ಪರಿಶೀಲಿಸಿ ಒಪ್ಪಿಗೆ ಸೂಚಿಸಲು ಅನುವು ಮಾಡಿಕೊಡುತ್ತಾರೆ.

ಅರ್ಜಿದಾರನು ಅಲಿಂ್ಲದ  ತನ್ನ ೈಲಿನೊಂದಿಗೆ ಮತ್ತೊಂದೆಡೆ ಪರಿಶೀಲನಾ ಅಧಿಕಾರಿಯ (Verif­ication Officer)  ಕೌಂಟರಿನತ್ತ (B-Counters)ನಡೆಯಬೇಕಾಗುತ್ತದೆ. ಅಲ್ಲಿಯೂ ಸಹ ಅನೇಕ ಕೌಂಟರುಗಳಿದ್ದು, ಅರ್ಜಿದಾರ ತನ್ನ ಸರದಿಗಾಗಿ ಟಿ.ವಿ. ಪರದೆಯನ್ನು ನೋಡುತ್ತಾ ಕಾಯಬೇಕಾಗುತ್ತದೆ. 

ಇನ್ನು ಟಿ.ವಿ. ಪರದೆಯ ಮೇಲೆ ಸೂಚಿಸಿದಂತೆ ಕರೆ ಬಂದಾಗ `ಬಿ-ಕೌಂಟರ್~ನ ಅಧಿಕಾರಿಯ ಮುಂದೆ ಹಾಜರಾಗಿ ಅರ್ಜಿದಾರನು,  ತನ್ನ ಬಳಿ ಇರುವ ದಾಖಲೆಗನ್ನು ಪರಿಶೀಲನೆಗಾಗಿ ನೀಡಬೇಕಾಗುತ್ತದೆ. ದಾಖಲೆಗಳನ್ನು ಸಲಿಸ್ಲುವಲ್ಲಿ ಏನಾದರೂ ದೋಷಗಳಿದ್ದಲ್ಲಿ ಅದನ್ನು ಈ ಅಧಿಕಾರಿಗಳು ಸೂಚಿಸುತ್ತಾರೆ.

ಎಲ್ಲವೂ ಸರಿಯಾಗಿದ್ದಲ್ಲಿ ಅರ್ಜಿದಾರನು ತನ್ನ  ಫೈಲ್‌ನೊಂದಿಗೆ ಅಲಿಂ್ಲದ ಮುಂದೆ `ಸಿ.ಕೌಂಟರ್~ (C-counters) ಅಂದರೆ ಪಾಸ್‌ಪೋರ್ಟ್ ಅಂಗೀಕಾರ ನೀಡುವ ಅಧಿಕಾರಿಗಳ ಕೌಂಟರ್‌ಗಳ  (Pass­port Granting Officers) ಕಡೆಗೆ ನಡೆಯಬೇಕಾಗುತ್ತದೆ. ಇಲ್ಲಿಯೂ  ಸಹ, ಅರ್ಜಿದಾರನ ಸರದಿಯನ್ನು ಟಿ.ವಿ. ಪರದೆಯ ಮೇಲೆ ಸೂಚಿಸಲಾಗುತ್ತದೆ.  ಇಲ್ಲಿನ ಅಧಿಕಾರಿಯು ಅರ್ಜಿದಾರನ ಕಡತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಮತ್ತೊಮ್ಮೆ ದಾಖಲೆಗಳನ್ನು ಪರಿಶೀಲಿಸಿ, ಸರಿಯಾಗಿದ್ದಲ್ಲಿ ಪಾಸ್‌ಪೋರ್ಟ್ ನೀಡುವುದಕ್ಕೆ ಅಂಗೀಕಾರವನ್ನು ಸೂಚಿಸುತ್ತಾರೆ. ನವೀಕರಣವಾಗ ಬೇಕಾದಲ್ಲಿ ಹಳೆಯ ಪಾಸ್‌ಪೋರ್ಟಿನ  ಮೇಲೆ ಅದು `ರದ್ದಾಗಿದೆ~ (cancelled)ಎಂಬ ಮೊಹರನ್ನು ಒತ್ತುತ್ತಾರೆ. 

ಕೊನೆಯದಾಗಿ, ಅರ್ಜಿದಾರನು ತನಗೆ ನೀಡಲಾಗಿರುವ ಪಾಸ್‌ಪೋರ್ಟ್ ಶುಲ್ಕ ಪಾವತಿಯ ರಸೀತಿಯನ್ನು ನಿಗದಿತ ಕೌಂಟರಿನಲ್ಲಿ ತೋರಿಸಿದಲ್ಲಿ ಒಂದು ಪಾಸ್‌ಪೋರ್ಟ್ ಅರ್ಜಿಯ  ಸ್ವೀಕೃತಿ  ಪತ್ರ (Acknowl­edg­ment Letter) ನೀಡಲಾಗುತ್ತದೆ. ಅರ್ಜಿದಾರನು ಮುಂದೆ ತಾನು ಪಾಸ್‌ಪೋರ್ಟ್‌ಗಾಗಿ ಸಲ್ಲಿಸಿರುವ ಅರ್ಜಿಯು ಯಾವ ಹಂತದಲ್ಲಿ ಇದೆ (View Status) ಎಂದು ವೆಬ್‌ಸೈಟಿಗೆ ಲಾಗಿನ್ ಆಗಿ ತಿಳಿಯಬಹುದಾಗಿದೆ.  ಇದರೊಂದಿಗೆ ಅರ್ಜಿದಾರನು ಪಾಸ್‌ಪೋರ್ಟ್ ಸೇವಾ ಕೇಂದ್ರದ ಹೊರಗೆ ನಡೆಯುತ್ತಾನೆ.

ಈ ಎಲ್ಲ ಪ್ರಕ್ರಿಯೆ ಮುಗಿಸಲು ಸಾಮಾನ್ಯವಾಗಿ 2 ಗಂಟೆಗಳಾದರೂ ಬೇಕಾಗುತ್ತದೆ. ಹಿರಿಯ ನಾಗರೀಕರು ಮುಂತಾದವರಿಗೆ ಇದು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಜೊತೆಗೆ ಹಿಂದಿನಂತೆ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೇ,  ಪಾಸ್ ಪೋರ್ಟ್ ಸೇವಾ ಕೇಂದ್ರದ ಸಿಬ್ಬಂದಿಯ (ಹೊರಗುತ್ತಿಗೆ ಪಡೆದಿರುವ ಟಿ.ಸಿ.ಎಸ್. ಸಂಸ್ಥೆ ಸೇರಿದಂತೆ) ನಗುಮುಖದ ಸೇವೆ ನಮ್ಮ ಆತಂಕ, ದಣಿವನ್ನು ಬಹುಮಟ್ಟಿಗೆ ತಣಿಸುತ್ತದೆ.
ಈ ಪ್ರಕ್ರಿಯೆ ನಡೆದ ಕೆಲವು ದಿನಗಳಲ್ಲಿ ಸ್ಥಳೀಯ ಪೊಲೀಸ್ ಠಾಣೆಯವರು ಅರ್ಜಿದಾರನಿಗೆ ಪಾಸ್ ಪೋರ್ಟ್ ನೀಡಲು ತಮ್ಮ ಅಭ್ಯಂತರವೇನೂ ಇಲ್ಲ ಎಂದು ದೃಢೀಕರಿಸಿದ ಮೇಲೆ, ಸುಮಾರು 2/3 ವಾರಗಳಲ್ಲಿ ಪಾಸ್ ಪೋರ್ಟ್ ಅರ್ಜಿದಾರನ ವಿಳಾಸಕ್ಕೆ ಸ್ಪೀಡ್-ಪೋಸ್ಟ್‌ನಲ್ಲಿ ರವಾನೆಯಾಗುತ್ತದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT